ಕುಶಾಲನಗರ, ಮಾ. ೬: ಕುಶಾಲನಗರ ಶ್ರೀ ವಿವೇಕಾನಂದ ಎಜ್ಯುಕೇಷನ್ ಟ್ರಸ್ಟ್ ಆಶ್ರಯದಲ್ಲಿ ಮಹಾತ್ಮಾಗಾಂಧಿ ಮೆಮೋರಿಯಲ್ ಪದವಿ ಕಾಲೇಜು ಮತ್ತು ವಿವೇಕಾನಂದ ಪಿಯು ಕಾಲೇಜು ಸಂಯುಕ್ತಾಶ್ರಯದಲ್ಲಿ ಚರಕ-೨.೦ ಜಿಲ್ಲಾಮಟ್ಟದ ಐಟಿ-ವಾಣಿಜ್ಯ ಮೇಳ ಇಂದು ನಡೆಯಿತು.

ಸಭೆಯಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಶಕ್ತಿ ಪತ್ರಿಕೆ ಪ್ರಧಾನ ಸಂಪಾದಕರಾದ ಜಿ.ರಾಜೇಂದ್ರ ಅವರು ಧ್ಯೇಯ, ಧೋರಣೆಗಳಿಲ್ಲದ ಶಿಕ್ಷಣದ ಬದಲು ಸ್ಪಷ್ಟವಾದ ಗುರಿ ಹೊಂದುವ ಮೂಲಕ ವಿದ್ಯೆ ಗಳಿಸಿದಲ್ಲಿ ಜೀವನದ ದಾರಿ ಸುಗಮವಾಗಲಿದೆ. ಅತಿಯಾದ ವೇಗದ ಜಗತ್ತಿನಲ್ಲಿ ಶೀಘ್ರಗತಿಯಲ್ಲಿ ಸಾಗುವ ಶಿಕ್ಷಣದ ಅಗತ್ಯತೆಯಿದೆ. ಮೊಬೈಲ್ ಕ್ರಾಂತಿ ನಡುವೆ ಮುನ್ನೆಚ್ಚರಿಕೆಯ ಅಗತ್ಯವಿದ್ದು ಅನಿವಾರ್ಯ ಸಂದರ್ಭ ಮಾತ್ರ ಜಾಲತಾಣಗಳ ಬಳಕೆಯಾಗಬೇಕಾಗಿದೆ ಎಂದು ರಾಜೇಂದ್ರ ಅವರು ಹೇಳಿದರು. ಶಿಕ್ಷಣದೊಂದಿಗೆ ಶಿಕ್ಷಣೇತರ ಚಟುವಟಿಕೆಗಳ ಬಗ್ಗೆ ಗಂಭೀರ ಚರ್ಚೆ ಅಗತ್ಯ ಎಂದ ಅವರು, ಆತ್ಮವಿಶ್ವಾಸವಿದ್ದಲ್ಲಿ ಕೀಳರಿಮೆಯನ್ನು ಹೋಗಲಾಡಿಸಲು ಸಾಧ್ಯ ಎಂದು ತಿಳಿಸಿದರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಸಂಸ್ಥೆಯ ಗೌರವ ಪ್ರಾಂಶುಪಾಲರಾದ ಎಂ.ನಾಗೇಶ್, ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಪ್ರತಿ ಶೈಕ್ಷಣಿಕ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳನ್ನು ದೇವರಂತೆ ಕಾಣಬೇಕಾಗಿದೆ. ಬೋಧಕರು ಅರ್ಚಕರ ರೀತಿಯಲ್ಲಿ ಮಕ್ಕಳನ್ನು ಬೆಳೆಸಬೇಕಾಗಿದೆ ಎಂದರು.

ಈ ಸಂದರ್ಭ ಮಂಗಳೂರು ವಿವಿ ಮಟ್ಟದಲ್ಲಿ ಬಿಸಿಎ ಪದವಿ ಪರೀಕ್ಷೆಯಲ್ಲಿ ಪ್ರಥಮ ರ‍್ಯಾಂಕ್ ಗಳಿಸಿದ ಎಂಜಿಎA ಪದವಿ ಕಾಲೇಜಿನ ಕರಂಬಿಮನೆ ಭವ್ಯ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವಿದ್ಯಾಸಂಸ್ಥೆಯ ಅಧ್ಯಕ್ಷ ಎನ್.ಎನ್. ಶಂಭುಲಿAಗಪ್ಪ ಅವರು ಕಾಲೇಜಿನ ಶೈಕ್ಷಣಿಕ ಯಶಸ್ಸು ಸಾಧನೆಗಳ ಬಗ್ಗೆ ಮಾಹಿತಿ ಒದಗಿಸಿದರು. ಜಿಲ್ಲೆಯ ವಿವಿಧ ಕಾಲೇಜಿನ ವಿಜ್ಞಾನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ವಿದ್ಯಾಸAಸ್ಥೆ ಪ್ರಾಂಶುಪಾಲ ರತ್ನಾಕರ್ ಸ್ವಾಗತಿಸಿದರು. ಮಹೇಶ್ ಅಮೀನ್ ವಂದೇ ಮಾತರಂ ಹಾಡಿದರು. ಅರ್ಪಣಾ ನಿರೂಪಿಸಿದರು, ಮಾನಸ ತಂಡ ಪ್ರಾರ್ಥಿಸಿ, ಫಾತಿಮಾ ವಂದಿಸಿದರು.