ಮಡಿಕೇರಿ, ಮಾ. ೬: ಭಾರತ ಚುನಾವಣಾ ಆಯೋಗವು ೨೦೨೦ ರ ನವೆಂಬರ್ ೧೮ ರಿಂದ ೨೦೨೧ ರ ಜನವರಿ, ೧೮ ರವರೆಗೆ ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾದ ಹೊಸ ಮತದಾರರಿಂದ ಇ-ಎಪಿಕ್(e-ಇPIಅ) ಡೌನ್‌ಲೋಡ್ ಮಾಡಲು ಮಾರ್ಗದರ್ಶನ ನೀಡುವಂತೆ ಸೂಚಿಸಲಾಗಿದೆ. ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾದ ಹೊಸ ಮತದಾರರಿಂದ ಇ-ಎಪಿಕ್ ಡೌನ್‌ಲೋಡ್ ಮಾಡುವ ಬಗ್ಗೆ ಮುಖ್ಯ ಚುನಾವಣಾಧಿಕಾರಿಗಳ ನಿರ್ದೇಶನ ದಂತೆ ತಾ. ೭ ರಂದು (ಇಂದು) ಬೂತ್ ಮಟ್ಟದ ಅಧಿಕಾರಿಗಳು, ಮೇಲ್ವಚಾರಕರು ತಮ್ಮ ಮತಗಟ್ಟೆ ವ್ಯಾಪ್ತಿಯಲ್ಲಿ ವಿಶೇಷ ಅಭಿಯಾನ ಹಮ್ಮಿಕೊಂಡು ಹೊಸ ಮತದಾರರಿಂದ ಇ-ಎಪಿಕ್ ಡೌನ್‌ಲೋಡ್ ಮಾಡಲು ಕ್ರಮವಹಿಸಲಾಗಿದೆ.

೨೦೨೦ರ ನವೆಂಬರ್, ೧೮ ರಿಂದ ೨೦೨೧ ರ ಜನವರಿ, ೧೮ ರವರೆಗೆ ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಯಾದ ಹೊಸ ಮತದಾರರು ತಾ. ೭ ರಂದು (ಇಂದು) ತಮ್ಮ ಮತಗಟ್ಟೆಯ ಬೂತ್ ಮಟ್ಟದ ಅಧಿಕಾರಿಯನ್ನು ಸಂಪರ್ಕಿಸಿ ತಮ್ಮ ಇ-ಎಪಿಕ್ ಡೌನ್‌ಲೋಡ್ ಮಾಡಿಕೊಳ್ಳಲು ಕೋರಿದೆ ಅಥವಾ ಹೊಸ ಮತದಾರರು ತಾವೇ ತಿತಿತಿ. ಟಿvsಠಿ.iಟಿ, ಗಿoಣeಡಿ heಟಠಿಟiಟಿe ಒobiಟe ಂಠಿಠಿ ಮತ್ತು hಣಣಠಿs://voಟeಡಿಠಿoಡಿಣಚಿಟ.eಛಿi.gov.iಟಿ/ ಮುಖಾಂತರ ಇ-ಎಪಿಕ್ ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಚಾರುಲತ ಸೋಮಲ್ ತಿಳಿಸಿದ್ದಾರೆ.