ಮಡಿಕೇರಿ, ಮಾ. ೬: ಮೈಸೂರು ಕೊಡವ ಸಮಾಜದ ಕಲ್ಚರಲ್ ಅಂಡ್ ಸ್ಪೋರ್ಟ್ಸ್ ಕ್ಲಬ್‌ನ ನೂತನ ಆಡಳಿತ ಮಂಡಳಿಯನ್ನು ರಚಿಸಲಾಗಿದ್ದು, ಅಧ್ಯಕ್ಷರಾಗಿ ಕುಟ್ಟಿಮಾಡ ಡಿ. ಮುತ್ತಪ್ಪ ಹಾಗೂ ಕಾರ್ಯದರ್ಶಿಯಾಗಿ ಮೇಚಂಡ ಎಸ್. ಬೋಪಣ್ಣ ಆಯ್ಕೆಯಾಗಿದ್ದಾರೆ.

ಖಜಾಂಚಿಯಾಗಿ ಅರಮಣಮಾಡ ಎಂ. ಪೆÀÇನ್ನಪ್ಪ, ಉಪಾಧ್ಯಕ್ಷರಾಗಿ ಐಚಂಡ ಅಶ್ವತ್ಥ್ ಚಂಗಪ್ಪ, ಜಂಟಿ ಕಾರ್ಯದರ್ಶಿಯಾಗಿ ಮೀದೇರಿರ ಕೆ. ಪ್ರಕಾಶ್ ಹಾಗೂ ಸದಸ್ಯರುಗಳಾಗಿ ಆಲೆಮಾಡ ಎಂ. ಪೊನ್ನಣ್ಣ, ಆಲೆಮಾಡ ಕೆ.ನಂಜಪ್ಪ, ಐಚೆಟ್ಟಿರ ಎಂ. ದಿಲೀಪ್ ಕುಮಾರ್, ಐಲಪಂಡ ಎ. ಪೆಮ್ಮಯ್ಯ, ಮುಂಡೋಟಿರ ಸಿ.ಕವಿನ್ ಕುಶಾಲಪ್ಪ ನೇಮಕಗೊಂಡರು. ಸಮಾಜದಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.