ವೀರಾಜಪೇಟೆ, ಮಾ. ೬: ಕೊಡಗು ಜಿಲ್ಲೆಯಲ್ಲಿ ಪ್ರಪ್ರಥಮವಾಗಿ ನೆಲೆ ಕಂಡ ಚೈತನ್ಯ ಮಠಪುರ ಆದಿ ಮುತ್ತಪ್ಪ ದೇವಾಲಯದಲ್ಲಿ ವಾರ್ಷಿಕ ತೆರೆ ಮಹೋತ್ಸವ ಶ್ರದ್ಧಾ ಭಕ್ತಿಯಿಂದ ಜರುಗಿತು.

ವೀರಾಜಪೇಟೆ ತಾಲೂಕು ಗ್ರಾಮಾಂತರ ಪ್ರದೇಶವಾದ ಕದನೂರು ಬೋಯಿಕೇರಿ ಗ್ರಾಮದಲ್ಲಿ ನೆಲೆ ಕಂಡ ಸುಮಾರು ೪೦೦ ವರ್ಷಗಳ ಇತಿಹಾಸವಿರುವ ಶ್ರೀ ಚೈತನ್ಯ ಮಠಪುರ ಆದಿ ಮುತ್ತಪ್ಪ ದೇವಾಲ ಯದ ವಾರ್ಷಿಕ ತೆರೆ ಮಹೋತ್ಸವವು ಭಕ್ತಿ ಪೂರಕÀವಾಗಿ ಆರಾಧಿಸಲ್ಪಟ್ಟಿತು. ಶ್ರೀ ಮುತ್ತಪ್ಪನ್ ವೆಳ್ಳಾಟಂ ಮತ್ತು ಶ್ರೀ ಗುಳಿಗನ್ ವೆಳ್ಳಾಟಂ ತೆರೆಗಳು ಜರುಗಿದವು. ಕೋವಿಡ್ ೧೯ರ ಹಿನ್ನೆಲೆಯಲ್ಲಿ ಭಕ್ತ ಸಂಖ್ಯೆ ಇಳಿಮುಖವಾಗಿತ್ತು. ಆಡಂಭರವಿಲ್ಲದೆ ಜರುಗಿದ ತೆರೆ ಮಹೋತ್ಸವದಲ್ಲಿ ವಿವಿಧ ಗ್ರಾಮಗಳಿಂದ ಅಧಿಕ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಉತ್ಸವದ ಅಂಗವಾಗಿ ದೇವಾಲಯದ ಆಡಳಿತ ಮಂಡಳಿಯ ವತಿಯಿಂದ ಸಂಜೆ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

-ಕೆ.ಕೆ.ಎಸ್.