ಗೋಣಿಕೊಪ್ಪಲು, ಮಾ. ೬: ಕೊರೆಯುವ ಚಳಿ,ಸುರಿಯುತ್ತಿರುವ ಮಂಜಿನ ನಡುವೆ ಕ್ರೀಡಾಪಟುಗಳು ತಮ್ಮ ಪ್ರತಿಭೆಗಳನ್ನು ಹೊರಸೂಸುವ ಮೂಲಕ ಹುದಿಕೇರಿ ಸಮೀಪದ ಬೇಗೂರುವಿನಲ್ಲಿ ನಡೆದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟದಲ್ಲಿ ಬೇಗೂರಿನ ಎಂವೈಸಿ ತಂಡವು ಜಯಗಳಿಸುವ ಮೂಲಕ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಅತ್ಯಂತ ರೋಚಕತೆಯಿಂದ ಕೂಡಿದ ಅಂತಿಮ ಪಂದ್ಯದಲ್ಲಿ ಸಮಬಲದ ಹೋರಾಟದ ನಡುವೆ ಸ್ನೇಹಾ ಫ್ರೆಂಡ್ಸ್ ರನ್ನರ್ ಆಫ್‌ಗೆ ತೃಪ್ತಿಪಟ್ಟುಕೊಂಡಿತು.

ಗೋಣಿಕೊಪ್ಪ ವೃತ್ತ ನಿರೀಕ್ಷಕ ರಾಮರೆಡ್ಡಿ ಪಂದ್ಯಾಟವನ್ನು ಉದ್ಘಾಟಿಸಿದರು. ಪೊನ್ನಂಪೇಟೆ ಪೊಲೀಸ್ ಠಾಣಾಧಿಕಾರಿ ಕುಮಾರ್, ಎಂವೈಸಿ ಮಾಪಿಳ್ಳೆ ತೋಡುವಿನ ಅಧ್ಯಕ್ಷ ಎ.ಕೆ. ನಜೀರ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಫಿ ಬೆಳೆಗಾರರಾದ ಮಲ್ಲಂಡ ಪ್ರಕಾಶ್, ಚೋಡುಮಾಡ ವೇದಾವತಿ, ಚೋಡುಮಾಡ ವಿಕ್ರಂ ಅಯ್ಯಪ್ಪ, ಕೃಷ್ಣ, ಎ.ಎಸ್. ಮುಹಮ್ಮದ್, ಕೇಚಟ್ಟಿರ ನಿಶಾಂತ್, ಮತ್ರಂಡ ಶಮಿ ಸೋಮಣ್ಣ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಎಸ್.ಜಿ. ಪರಮೇಶ್, ನಿಸಾರ್, ರಫಿಕ್, ಹುಸೈನ್, ಶಫೀಕ್, ಅಸನ್, ಅರುಣ್, ಸಂಶು, ಪತ್ರಕರ್ತ ಹೆಚ್.ಕೆ. ಜಗದೀಶ್ ಸೇರಿದಂತೆ ಇನ್ನಿತರ ಗಣ್ಯರು ಭಾಗವಹಿಸಿದ್ದರು. ಮಾಜಿ ಗ್ರಾಮ ಪಂಚಾಯಿತಿ ಸದಸ್ಯರಾದ ಎ.ಎಂ. ಸಾದಲಿ, ಸ್ವಾಗತಿಸಿದರು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಇದೇ ಸಂದರ್ಭ ಸನ್ಮಾನಿಸಿ ಗೌರವಿಸಲಾಯಿತು.