ವೀರಾಜಪೇಟೆ, ಮಾ. ೬: ವೀರಾಜಪೇಟೆ ಪಟ್ಟಣ ಪಂಚಾಯಿತಿಗೆ ಸೇರಿದ ಎಲ್ಲಾ ಆಸ್ತಿಗಳಿಂದ, ವಿವಿಧ ಮಾರುಕಟ್ಟೆಗಳಿಂದ, ಕಟ್ಟಡಗಳಿಂದ ಬರುವ ಎಲ್ಲಾ ಆದಾಯ ಸಂಪತ್ತನ್ನು ಕ್ರೋಢಿಕರಿಸಿ ೨೦೨೧-೨೨ನೇ ಸಾಲಿನಲ್ಲಿ ಉಳಿತಾಯ ಬಜೆಟ್‌ನ್ನು ಅಂಗೀಕರಿಸುವAತಾಗಬೇಕೆAದು ಪಟ್ಟಣ ಪಂಚಾಯಿತಿಯ ಸದಸ್ಯರುಗಳು ಬಜೆಟ್ ಕುರಿತಂತೆ ತಮ್ಮ ಒಲವನ್ನು ವ್ಯಕ್ತಪಡಿಸಿದರು.
೨೦೨೧-೨೨ನೇ ಸಾಲಿನ ಬಜೆಟ್‌ನ ಪೂರ್ವಭಾವಿ ಸಭೆಯು ಇಂದು ಅಧ್ಯಕ್ಷೆ ಟಿ.ಆರ್.ಸುಶ್ಮಿತಾ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಮುಖ್ಯಾಧಿಕಾರಿ ಶ್ರೀಧರ್ ಅವರು ಪೂರ್ವಭಾವಿ ಬಜೆಟ್‌ನ್ನು ಸಭೆಯಲ್ಲಿ ಮಂಡಿಸಿದರು. ಪೂರ್ವಭಾವಿ ಬಜೆಟ್‌ನ ಮೇಲೆ ಸದಸ್ಯರುಗಳು ಪರಸ್ಪರ ವಿಚಾರ ವಿನಿಮಯ ಮಾಡಿ ಅಭಿಪ್ರಾಯ ಸಲಹೆ ಸೂಚನೆಗಳನ್ನು ನೀಡಿದರು.
ಸದಸ್ಯ ಡಿ.ಪಿ. ರಾಜೇಶ್ ಮಾತನಾಡಿ ಈಗಿನ ಹಳೆಯದಾದ ಪುರಭವನವನ್ನು ಕೆಡವಿ ವಾಣಿಜ್ಯ ಸಂಕೀರ್ಣದೊAದಿಗೆ ಎಲ್ಲ ಸೌಲಭ್ಯಗಳಿರುವ ಆಧುನಿಕ ಪುರಭವನವನ್ನು ನಿರ್ಮಾಣ ಮಾಡುವುದು. ಪಟ್ಟಣ ಪಂಚಾ ಯಿತಿಯ ನಿವಾಸಿಗಳಿಗೆ ಅನುಕೂಲ ವಾಗುವ ರೀತಿಯಲ್ಲಿ ಇಲ್ಲಿನ ಸುಂಕದ ಕಟ್ಟೆ ಬಳಿಯಲ್ಲಿ ಈಜುಕೊಳವನ್ನು ನಿರ್ಮಿಸಲು ಮುಂದಿನ ಪಟ್ಟಣ ಪಂಚಾಯಿತಿ ಬಜೆಟ್‌ನಲ್ಲಿ ಸೇರಿಸು ವಂತೆ ಸಭೆಗೆ ಸಲಹೆ ನೀಡಿದರು. ಸದಸ್ಯೆ ಎಂ.ಕೆ. ದೇಚಮ್ಮ ಮಾತನಾಡಿ ತಾಲೂಕು ಕಚೇರಿ ಮುಂದೆ ಶಿಥಿಲಾವಸ್ಥೆಯಲ್ಲಿರುವ ಈಗಿನ ಗ್ರಂಥಾಲಯವನ್ನು ನವೀಕರಿಸಬೇಕು. ಹಿರಿಯರಿಗೆ ವೃದ್ಧರಿಗೆ ಓದಲು ವಿಶಾಲವಾದ ಜಾಗ, ಪಾರ್ಕ್ನಲ್ಲಿ ವಿಹರಿಸಲು ಆಸನಗಳ ವ್ಯವಸ್ಥೆ ಹಾಗೂ ಮೂಲ ಸೌಲಭ್ಯಗಳನ್ನು ಒದಗಿಸಲು ಬಜೆಟ್‌ನಲ್ಲಿ ಯೋಜನೆ ರೂಪಿಸಬೇಕು ಎಂದು ಸಭೆಯಲ್ಲಿ ಆಗ್ರಹಿಸಿದರು.
ಸದಸ್ಯ ಎಸ್.ಎಚ್. ಮತೀನ್ ಮಾತನಾಡಿ ಪಟ್ಟಣ ಪಂಚಾಯಿತಿಗೆ ಸೇರಿದ ಖಾಲಿ ಜಾಗದಲ್ಲಿ ವಾಣಿಜ್ಯ ಕಟ್ಟಡಗಳನ್ನು ಕಟ್ಟಿ ಬಾಡಿಗೆ ರೂಪದಲ್ಲಿ ಬರುವ ಆದಾಯದ ಸಂಪತ್ತನ್ನು ಕ್ರೋಢೀಕರಿಸಬೇಕು. ಪಟ್ಟಣ ಪಂಚಾಯಿತಿ ಆದಾಯದಲ್ಲಿ ಸೋರಿಕೆ ಆಗದಂತೆ ನಿಗಾವಹಿಸಬೇಕು ಎಂದರು. ಮಹಮ್ಮದ್ ರಾಫಿ ಮಾತನಾಡಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಎಲ್ಲ ವಾರ್ಡ್ಗಳಿಗೂ ಜನಪರ ಕಾಮಗಾರಿಗಳು ಸಮಾನವಾಗಿ ನಡೆಯುವಂತೆ ಅಧಿಕಾರಿಗಳು ಕ್ರಮ ವಹಿಸಬೇಕು ಎಂದರು.
ಸದಸ್ಯ ಸಿ.ಕೆ. ಪ್ರಥ್ವಿನಾಥ್ ಮಾತನಾಡಿ ಪಟ್ಟಣ ಪಂಚಾಯಿತಿಯ ನಿವಾಸಿಗಳಿಗೆ ಕಟ್ಟಡದ ತೆರಿಗೆ, ನಲ್ಲಿ ನೀರಿನ ಶುಲ್ಕ ಹೊರೆಯಾಗದ ರೀತಿಯಲ್ಲಿ ಪಟ್ಟಣ ಪಂಚಾಯಿತಿಯ ಆದಾಯ ಸಂಪತ್ತನ್ನು ಕ್ರೋಢೀಕರಿಸಿ ಉಳಿತಾಯ ಬಜೆಟ್‌ಗೆ ಮುಂದಿನ ಸಭೆಯಲ್ಲಿ ಅಂಗೀಕಾರ ನೀಡುವಂತೆ ಸಲಹೆ ನೀಡಿದರು.
ಮುಂದಿನ ಸಾಲಿನ ಬಜೆಟ್‌ನಲ್ಲಿ ಕುಡಿಯುವ ನಲ್ಲಿ ನೀರು, ಪಟ್ಟಣದಲ್ಲಿ ಶುಚಿತ್ವ ಕಾಪಾಡುವುದು, ಎಲ್ಲ ವಾರ್ಡ್ಗಳಿಗೆ ಜನಪರ ಕಾಮಗಾರಿಗೆ ಅವಕಾಶ ನೀಡುವುದು, ಬೀದಿ ದೀಪಗಳ ಸಮರ್ಪಕ ನಿರ್ವಹಣೆ ಮಾಡುವುದು, ಹಿಂದಿನAತೆಯೇ ಮನೆ ಮನೆಗೆ ತೆರಳಿ ಕಸ ಸಂಗ್ರಹಣೆ ಮುಂದುವರೆಸುವುದು ಸೇರಿದಂತೆ ಎಲ್ಲ ರೀತಿಯ ರಸ್ತೆ ಚರಂಡಿ ನಿರ್ಮಾಣ ದುರಸ್ತಿ ಇತರ ಅಭಿವೃದ್ಧಿ ಕಾರ್ಯಗಳಿಗೆ ಈಗಿನ ಬಜೆಟ್‌ನಲ್ಲಿ ಆದ್ಯತೆ ನೀಡವಂತೆ ಸಭೆ ತೀರ್ಮಾನಿಸಿತು.
ಪೂರ್ವಭಾವಿ ಬಜೆಟ್ ಸಭೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷೆ ಸುನೀತಾ ಜೂನಾ, ಉಪಾಧ್ಯಕ್ಷ ಕೆ.ಬಿ. ಹರ್ಷವರ್ಧನ್, ಕಿರಿಯ ಅಭಿಯಂತರ ಎಂ.ಎನ್. ಹೇಮ್‌ಕುಮಾರ್, ಸಿಬ್ಬಂದಿಗಳು ಹಾಜರಿದ್ದರು.