ಸಿದ್ದಾಪುರ, ಮಾ. ೬: ಸಮೀಪದ ಪ್ರೌಢಶಾಲೆ ಭಾಗ ಹಾಗೂ ರಾಯ್ ಗೋಡ್ ಕಾಫಿ ತೋಟಗಳಲ್ಲಿ ಹುಲಿಯನ್ನು ಹೋಲುವ ಪ್ರಾಣಿಯೊಂದು ರಾತ್ರಿ ಸಮಯದಲ್ಲಿ ಕಂಡುಬAದಿತು ಎಂದು ಸುದ್ದಿ ಹರಡಿ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ರಾತ್ರಿಯಿಂದಲೇ ಕಾರ್ಯಾಚರಣೆ ನಡೆಸಿದರೂ ಈವರೆಗೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಶನಿವಾರದಂದು ಕೂಡ ವೀರಾಜಪೇಟೆ ವಲಯ ಅರಣ್ಯಧಿಕಾರಿ ದೇವಯ್ಯ ನೇತೃತ್ವದಲ್ಲಿ ಉಪ ವಲಯ ಅಧಿಕಾರಿ ಸಂಜಿತ್ ಸೋಮಯ್ಯ ಹಾಗೂ ಸಿಬ್ಬಂದಿ ಸಿದ್ದಾಪುರ ಸುತ್ತಮುತ್ತಲಿನ ಕಾಫಿತೋಟದಲ್ಲಿ ಹಾಗೂ ಸುತ್ತಮುತ್ತಲ ಕಾಡುಪ್ರದೇಶಗಳಲ್ಲಿ ಹುಡುಕಾಡಿದ್ದಾರೆ. ಆದರೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.