ಸುನಿಲ್ ಸುಬ್ರಮಣಿ ಪ್ರಶ್ನೆಗೆ ತೋಟಗಾರಿಕೆ ಸಚಿವರ ಉತ್ತರ
ಮಡಿಕೇರಿ, ಮಾ. ೫: ಕಿತ್ತಳೆ ಬೆಳೆ ಪುನಶ್ಚೇತನಕ್ಕೆ ಸರಕಾರ ನಾನಾ ಕಾರ್ಯಕ್ರಮ ರೂಪಿಸಿದೆ ಎಂದು ತೋಟಗಾರಿಕೆ ಸಚಿವ ಆರ್.ಶಂಕರ್ ವಿಧಾನ ಪರಿಷತ್‌ನಲ್ಲಿ ಸುನಿಲ್ ಸುಬ್ರಮಣಿ ಪ್ರಶ್ನೆಗೆ ಉತ್ತರಿಸಿದರು.
ಕಿತ್ತಳೆ ಬೆಳೆ ಪುನಶ್ಚೇತನಕ್ಕೆ ಸರ್ಕಾರ ಕೈಗೊಂಡ ಕ್ರಮ, ಅದರಿಂದ ಆದ ಪರಿಣಾಮದ ಸುನಿಲ್ ಸುಬ್ರಮಣಿ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಸಚಿವರು, ರಾಷ್ಟಿçÃಯ ತೋಟಗಾರಿಕೆ ಮಿಷನ್ ಯೋಜನೆಯಡಿ ಕಿತ್ತಳೆ ಹಳೆ ತೋಟಗಳ ಪುನಶ್ಚೇತನಕ್ಕಾಗಿ ಪ್ರತಿ ಹೆಕ್ಟೇರ್‌ಗೆ ಶೇ. ೫೦ ರಂತೆ ರೂ ೨೦ ಸಾವಿರ ಗರಿಷ್ಟ ೨ ಹೆಕ್ಟೇರ್‌ವರಗೆ ಸಹಾಯಧನ ನೀಡಲಾಗುತ್ತಿದೆ. ರೋಗಗ್ರಸ್ತ ಹಾಗೂ ಅನುಪಯುಕ್ತ ಗಿಡಗಳನ್ನು ತೆಗೆದು ಹೊಸ ಗಿಡಗಳನ್ನು ನಾಟಿ ಮಾಡುವುದಲ್ಲದೆ ಮಣ್ಣಿನ ಫಲವತ್ತತೆ ಹೆಚ್ಚಿಸುವುದು ಮತ್ತು ಕೀಟ ರೋಗ ನಿಯಂತ್ರಣದ ಮೂಲಕ ಬೆಳೆಯನ್ನು ಪುನಶ್ಚೇತನಗೊಳಿಸಲಾಗುತ್ತಿದೆ. ೨೦೧೭-೧೮ ರಿಂದ ೨೦೨೦-೨೧ ರವರೆಗೆ ಒಟ್ಟು ೫೮೬.೮೩ ಹೆಕ್ಟೇರ್ ವಿಸ್ತಿçÃರ್ಣ ಕಿತ್ತಳೆ ತಾಕುಗಳನ್ನು ಪುನಶ್ಚೇತನಗೊಳಿಸಿ ಶೇ ೫೦ ರಂತೆ ರೂ ೬೮.೦೯೩ ಲಕ್ಷ ಸಹಾಯಧನ ನೀಡಿ ೧೨೧೧ ರೈತರಿಗೆ ನೆರವು ನೀಡಲಾಗಿದೆ. ಇದರ ಪರಿಣಾಮವಾಗಿ ಮಣ್ಣಿನ ಫಲವತ್ತತ್ತೆ ಸುಧಾರಿಸಿದ್ದು, ಸಮಗ್ರ ಕೀಟರೋಗ ನಿಯಂತ್ರಣದಿAದಾಗಿ ಕಿತ್ತಳೆ ಬೆಳೆಯಲ್ಲಿ ಹೆಚ್ಚಿನ ಇಳುವರಿ ಪಡೆಯಲು ಸಾಧ್ಯವಾಗಿದೆ ಎಂದು ಮಾಹಿತಿ ನೀಡಿದರು.