ವೀರಾಜಪೇಟೆ, ಮಾ. ೫: ತೈಲ ಬೆಲೆ ಏರಿಕೆಯಾದ ಹಿನ್ನೆಲೆಯಲ್ಲಿ ಆಟೋ ದರ ಏರಿಸುವಂತೆ ನಗರ ಆಟೋ ಚಾಲಕರು ಸೇರಿದಂತೆ ಅಮ್ಮತ್ತಿ, ಒಂಟಿಯAಗಡ, ಪಾಲಿಬೆಟ್ಟ, ಸಿದ್ದಾಪುರ, ಕಡಂಗದಲ್ಲಿರುವ ಸುಮಾರು ೧೩೦೦ ಆಟೋ ಚಾಲಕರು ೨ ಗಂಟೆಗೆಳ ಕಾಲ ಆಟೋ ಸಂಚಾರ ಸ್ಥಗಿತಗೊಳಿಸಿ ವೀರಾಜಪೇಟೆ ನಗರ ಆಟೋಚಾಲಕರ ಸಂಘದ ಅಧ್ಯಕ್ಷ ಎಂ.ಎA ಶಶಿಧರನ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಉಪ ತಹಶೀಲ್ದಾರ್ ಸಂಜೀವ್ ಅವರಿಗೆ ಮನವಿ ಸಲ್ಲಿಸಿದರು.
ಮನವಿ ಸಲ್ಲಿಸಿ ಬಳಿಕ ಮಾತನಾಡಿದ ಅಧ್ಯಕ್ಷ ಶಶಿಧರನ್ ಇಂಧನ ದರ ಏರಿಕೆಯಿಂದ ಆಟೋ ಚಾಲಕರು ನಷ್ಟ ಅನುಭವಿಸುತ್ತಿದ್ದಾರೆ. ಆಟೋಗಳ ಬಿಡಿ ಭಾಗಗಳು, ವಿಮೆ, ಅಲ್ಲದೆ ದಿನನಿತ್ಯ ಬಳಕೆಯ ವಸ್ತುಗಳ ಬೆಲೆಗಳು ಗಗನಕ್ಕೇರಿದೆ. ಆಟೋ ದರ ಪರಿಷ್ಕರಿಸಬೇಕೆಂದು ಫೆಬ್ರವರಿ ೯ ರಂದು ಸಾಂಕೇತಿಕ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಮೂಲಕ ಸಾರಿಗೆ ಇಲಾಖೆ ಹಾಗೂ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ ಮನವಿಗೆ ಯಾವುದೇ ಸ್ಪಂದನೆ ದೊರೆಯದ ಕಾರಣ ಆಟೋ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಇಂದಿನಿAದ ಒಂದು ಕಿ.ಮೀ.ಗೆ ೩೦ ರೂ., ನಂತರದ ಕಿಲೋಮೀಟರ್ಗೆ ೨೦ ರೂ.ಗಳಂತೆ ನಿಗದಿ ಪಡಿಸಿಕೊಂಡಿದ್ದೇವೆ ಎಂದು ಮಾಹಿತಿ ನೀಡಿದರು.
ಉಪಾಧ್ಯಕ್ಷ ಚಂದ್ರು ಮಾತನಾಡಿ, ೨೦೧೫ ರಲ್ಲಿ ನಿಗದಿಪಡಿಸಿದ ದರದಲ್ಲಿಯೆ ಇಲ್ಲಿಯವರೆಗೆ ಆಟೋ ಸೇವೆ ನೀಡಲಾಗಿದೆ. ೨೦೧೫ ರಿಂದ ೨೧ರ ವರೆಗೆ ಶೇ. ೪೮ ರಷ್ಟು ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆಯಾಗಿದೆ. ಆಟೋ ದರ ಪರಿಷ್ಕರಣೆ ಮಾಡದ ಕಾರಣ ಕೆಲವು ಕಡೆಗಳಲ್ಲಿ ಹೆಚ್ಚಿನ ಹಣ ಪಡೆಯುತ್ತಿದ್ದಾರೆ ಎಂಬ ದೂರು ಸಂಘಕ್ಕೆ ಬಂದಿದೆ. ಜಿಲ್ಲಾಡಳಿತ ಕೂಡಲೇ ಸಾರಿಗೆ ಪ್ರಾಧಿಕಾರದ ಸಭೆ ಕರೆದು ಏಕರೂಪದ ಆಟೋ ದರ ಪರಿಷ್ಕರಣೆ ಮಾಡಬೇಕು ಎಂದು ಆಗ್ರಹಿಸಿದರು. ನಿರ್ದೇಶಕರುಗಳಾದ ನೀತಿ ಕುಮಾರ್, ವಿವೇಕ್, ಜಗದೀಶ್, ಶ್ರೀಧರ್ ಮತ್ತಿತರರು ಈ ಸಂದರ್ಭ ಇದ್ದರು.