ಗೋಣಿಕೊಪ್ಪಲು, ಮಾ.೫: ಅರುವತೋಕ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಟ್ಟು ದೇವ ಕಾಲೋನಿಯ ೬೦ ಕುಟುಂಬಗಳು ಭೂಮಿ ಹಾಗೂ ವಸತಿ ನೀಡುವಂತೆ ಆಗ್ರಹಿಸಿ ೫ ಕಿ.ಮೀ.ಕಾಲ್ನಡಿಗೆ ಜಾಥಾ ನಡೆಸುವ ಮೂಲಕ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ತಾಲೂಕು ಅಧ್ಯಕ್ಷರಾದ ಪಿ.ಎ. ತಾಯಮ್ಮ ಮುಂದಾಳತ್ವದಲ್ಲಿ ಜಾಥಾವು ನಡೆಯಿತು. ರಸ್ತೆ ಉದ್ದಕ್ಕೂ ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗುತ್ತಾ ನಮ್ಮ ಹಕ್ಕು ನಮಗೆ ನೀಡಿ ಎಂದು ಒತ್ತಾಯಿಸಿದರು.
ನಿವಾಸಿಗಳು ಒಟ್ಟಾಗಿ ಸೇರಿ ಹಳ್ಳಿಗಟ್ಟು ಅಂಬೇಡ್ಕರ್ ಕಾಲೋನಿಯಿಂದ ಕಾಲ್ನಡಿಗೆ ಜಾಥಾ ಹೊರಟು ಸಿಐಟಿ ಕಾಲೇಜು ಮಾರ್ಗವಾಗಿ ಪೊನ್ನಂಪೇಟೆಯ ತಾಲೂಕು ಪಂಚಾಯಿತಿಯ ಆವರಣಕ್ಕೆ ಆಗಮಿಸಿ ಅಧಿಕಾರಿಗಳಾದ ಕೊಣಿಯಂಡ ಅಪ್ಪಣ್ಣನವರಿಗೆ ಮನವಿ ಪತ್ರ ಸಲ್ಲಿಸಿ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.
ಹೋರಾಟದ ಮುಖ್ಯಸ್ಥೆ ಪಿ.ಎ. ತಾಯಮ್ಮ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿ ಹಳ್ಳಿಗಟ್ಟು ಗ್ರಾಮದ ಸರ್ವೆ ನಂ.೨೦೫/೧ರಲ್ಲಿ ಸರ್ಕಾರಿ ಕಂದಾಯ ಭೂಮಿ ಯಾಗಿದ್ದು ಸುಮಾರು ೨೦ ಎಕರೆ ಜಾಗವಿದೆ. ೬೦ ಕುಟುಂಬಗಳು ೫ ಎಕರೆ ಜಾಗದಲ್ಲಿ ಗುಡಿಸಲುಗಳನ್ನು ಕಟ್ಟಿಕೊಂಡು ೧೨ ವರ್ಷಗಳಿಂದ ವಾಸ ಮಾಡುತ್ತಿದ್ದೇವೆ. ೨೦೧೬ರಲ್ಲಿ ಸರ್ಕಾರದ ನಿಯಮದಂತೆ ೯೪ಸಿ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದು ಇಲ್ಲಿಯ ತನಕ ಯಾವ ಅಧಿಕಾರಿಗಳು ಸ್ಪಂದಿಸಿಲ್ಲ ಎಂದು ಆರೋಪಿಸಿದರು. ತಾಲೂಕು ಆಡಳಿತ ಕೂಡಲೇ ಜಾಗವನ್ನು ಸರ್ವೆ ಕಾರ್ಯ ನಡೆಸಿ ಹಕ್ಕುಪತ್ರಗಳನ್ನು ನೀಡಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಪಂಚಾಯಿತಿ ಸದಸ್ಯೆ, ಕೇಚಮಾಡ ಸರಿತಾ ಪೂಣಚ್ಚ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಮನವಿ ಪತ್ರ ಸ್ವೀಕರಿಸಿದರು. ಪ್ರತಿಭಟನೆಯಲ್ಲಿ ಹೋರಾಟ ಸಮಿತಿಯ ಪ್ರಮುಖ ರಾದ ಮಂಜು, ಸವಿತಾ, ಸುಬ್ಬಿ, ಗಣೇಶ್, ಭರತ್, ಅಯ್ಯಪ್ಪ, ಲೋಕೇಶ್, ಕುಸುಮಾ, ಮಂಜು, ಪಾರ್ವತಿ, ರತ್ನ ಮುಂತಾದವರು ಭಾಗವಹಿಸಿದ್ದರು. ಗೋಣಿಕೊಪ್ಪ ವೃತ್ತ ನಿರೀಕ್ಷಕ ರಾಮರೆಡ್ಡಿ, ಪೊನ್ನಂಪೇಟೆ ಠಾಣಾಧಿಕಾರಿ ಕುಮಾರ್, ಎಎಸ್‌ಐ ಉದಯ ಸೇರಿದಂತೆ ಸಿಬ್ಬಂದಿಗಳು ಹಾಜರಿದ್ದರು.- ಹೆಚ್. ಕೆ. ಜಗದೀಶ್
ಕೇಚಮಾಡ ಸರಿತಾ ಪೂಣಚ್ಚ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಮನವಿ ಪತ್ರ ಸ್ವೀಕರಿಸಿದರು. ಪ್ರತಿಭಟನೆಯಲ್ಲಿ ಹೋರಾಟ ಸಮಿತಿಯ ಪ್ರಮುಖ ರಾದ ಮಂಜು, ಸವಿತಾ, ಸುಬ್ಬಿ, ಗಣೇಶ್, ಭರತ್, ಅಯ್ಯಪ್ಪ, ಲೋಕೇಶ್, ಕುಸುಮಾ, ಮಂಜು, ಪಾರ್ವತಿ, ರತ್ನ ಮುಂತಾದವರು ಭಾಗವಹಿಸಿದ್ದರು. ಗೋಣಿಕೊಪ್ಪ ವೃತ್ತ ನಿರೀಕ್ಷಕ ರಾಮರೆಡ್ಡಿ, ಪೊನ್ನಂಪೇಟೆ ಠಾಣಾಧಿಕಾರಿ ಕುಮಾರ್, ಎಎಸ್‌ಐ ಉದಯ ಸೇರಿದಂತೆ ಸಿಬ್ಬಂದಿಗಳು ಹಾಜರಿದ್ದರು.- ಹೆಚ್. ಕೆ. ಜಗದೀಶ್