ಗೋಣಿಕೊಪ್ಪ ವರದಿ, ಮಾ. ೫: ರ್ವತೋಕ್ಲು ರಸ್ತೆಯಲ್ಲಿ ವಿದ್ಯುತ್ ಟ್ರಾನ್ಸ್ಫಾರಂನಿAದ ಆಕಸ್ಮಿಕವಾಗಿ ಹೊತ್ತಿಕೊಂಡ ಬೆಂಕಿಯನ್ನು ಸ್ಥಳೀಯರು ನಂದಿಸುವಲ್ಲಿ ಯಶಸ್ವಿಯಾದರು.
ತಾ. ೪ ರಂದು ಮಧ್ಯಾಹ್ನ ೨ ಗಂಟೆ ಸುಮಾರಿಗೆ ಗೋಣಿಕೊಪ್ಪ-ಪೊನ್ನಂಪೇಟೆ ಮುಖ್ಯರಸ್ತೆಯಲ್ಲಿರುವ ರ್ವತೋಕ್ಲು ಗ್ರಾಮದ ಟ್ರಾನ್ಸ್ಫಾರಂನಿAದ ವಿದ್ಯುತ್ ಹರಿದು ಸುತ್ತಲೂ ಬೆಂಕಿ ಹೊತ್ತಿಕೊಂಡಿತು. ಬೆಂಕಿ ಕಾಡ್ಯಮಾಡ ಮೋತಿ ಅವರಿಗೆ ಸೇರಿದ ಜಾಗಕ್ಕೂ ವಿಸ್ತರಿಸಿತು. ಸ್ಥಳೀಯರಾದ ಕಾಡ್ಯಮಾಡ ಕಾವೇರಪ್ಪ, ಯುವಕರು ಹಾಗೂ ಕಾರ್ಮಿಕರ ಸಹಾಯದಲ್ಲಿ ಮರದ ರೆಂಬೆಯಿAದ ಬೆಂಕಿಯನ್ನು ನಂದಿಸಲು ಮುಂದಾದರು. ಸಮೀಪದಿಂದ ನೀರು ಹೊತ್ತು ತಂದು ಬೆಂಕಿ ಕೆಡಿಸುವಲ್ಲಿ ಯಶಸ್ವಿಯಾದರು. ಪಂಪ್ಸೆಟ್ ಕೇಬಲ್ಗೆ ಹಾನಿಯಾಯಿತು. ವಿದ್ಯುತ್ ಕಡಿತಗೊಂಡ ಕಾರಣ ಹೆಚ್ಚಿನ ಹಾನಿ ಉಂಟಾಗಲಿಲ್ಲ.
ಮಾತಿನಿ ಚಕಮಕಿ: ನಂತರ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಸಂಪೂರ್ಣವಾಗಿ ಬೆಂಕಿ ಕೆಡಿಸಿದರು. ಘಟನಾ ಸ್ಥಳದಲ್ಲಿ ಬೆಂಕಿ ನಂದಿಸಿದ್ದ ಕಾರಣ ಫೈರ್ ಇನ್ಸ್ಪೆಕ್ಟರ್ ಕಾಳಪ್ಪ ಸ್ಥಳೀಯರ ಮೇಲೆ ಆಕ್ರೋಶ ವ್ಯಕ್ತಪಡಿಸಿದರು. ಬೆಂಕಿ ಇಲ್ಲ, ನಮ್ಮನ್ನೇಕೆ ಕರೆದಿರಿ ಎಂದು ಸ್ಥಳೀಯರನ್ನು ಪ್ರಶ್ನಿಸಿದರು. ನೀವು ಬರುವವರೆಗೂ ಬೆಂಕಿ ನಂದಿಸಬಾರದೆ, ಎಂದು ಸ್ಥಳೀಯರು ಉತ್ತರಿಸಿದರು. ಮಾತಿನ ಚಕಮಕಿ ನಡೆಯಿತು. ಸೆಸ್ಕ್ ಸಿಬ್ಬಂದಿ ಆಗಮಿಸಿ ಪರಿಶೀಲಿಸಿ ಕ್ರಮಕೈಗೊಂಡರು.