ಮಡಿಕೇರಿ, ಮಾ. ೫: ಕರ್ನಾಟಕ ಬಾಲವಿಕಾಸ ಅಕಾಡೆಮಿ ೨೦೨೦-೨೧ನೇ ಸಾಲಿನಲ್ಲಿ ಕೊಡಮಾಡುವ ಪ್ರತಿಷ್ಠಿತ ‘ಅಕಾಡೆಮಿ ಬಾಲಗೌರವ’ ಪ್ರಶಸ್ತಿಯನ್ನು ವೀರಾಜಪೇಟೆಯ ಬಾಲ ಕಲಾವಿದ ಆಯುಷ್ ಎಂ.ಡಿ. ಅವರಿಗೆ ಅವರು ಸಂಗೀತದಲ್ಲಿ ಮಾಡಿದ ಸಾಧನೆಯನ್ನು ಪರಿಗಣಿಸಿ ನೀಡಿ ಗೌರವಿಸಲಾಯಿತು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಅವರು ಧಾರವಾಡದ ಕಲಾಭವನದಲ್ಲಿ ಫೆ. ೨೮ ರಂದು ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಿದರು.

ಸಮಾರಂಭದಲ್ಲಿ ಸಚಿವ ಜಗದೀಶ್ ಶೆಟ್ಟರ್, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು.