ಸುಂಟಿಕೊಪ್ಪ, ಮಾ. ೫: ಸೋಮವಾರಪೇಟೆ ತಾಲೂಕಿನ sಸುಂಟಿಕೊಪ್ಪ ಹೋಬಳಿ ಕೃಷ್ಣಪ್ಪ ಸ್ಥಾಪಿತ ಜಿಲ್ಲಾ ದಲಿತ ಸಂಘರ್ಷ ಸಮಿತಿ ವತಿಯಿಂದ ಸುಂಟಿಕೊಪ್ಪ ಗ್ರಾಮ ಪಂಚಾಯಿತಿಗೆ ನೂತನವಾಗಿ ಆಯ್ಕೆಯಾದ ಅಧ್ಯಕ್ಷೆ ಶಿವಮ್ಮ ಹಾಗೂ ಉಪಾಧ್ಯಕ್ಷ ಪ್ರಸಾದ್ ಕುಟ್ಟಪ್ಪ ಅವರನ್ನು ಸನ್ಮಾನಿಸಲಾಯಿತು.
ತಾಲೂಕು ಸಂಚಾಲಕ ಮಾದೇವು ಮಾತನಾಡಿ ಗ್ರಾಮದ ಅಭಿವೃದ್ಧಿಗೆ ಎಲ್ಲರೂ ಒಟ್ಟಾಗಿ ಶ್ರಮಿಸಿ ಮಾದರಿ ಗ್ರಾಮವನ್ನಾಗಿ ಮಾಡುವಂತೆ ನೂತನ ಅಧ್ಯಕ್ಷೆ ಮತ್ತು ಉಪಾಧ್ಯಕ್ಷರಲ್ಲಿ ಮನವಿ ಮಾಡಿಕೊಂಡರು. ಈ ಸಂದರ್ಭ ಜಿಲ್ಲಾ ಸಂಚಾಲಕ ದಾಮೋದರ, ಸುಂಟಿಕೊಪ್ಪ ನಗರ ಸಂಚಾಲಕ ಬೆಟ್ಟಪ್ಪ, ಹೆಚ್.ಟಿ. ಕಾವೇರಪ್ಪ, ಹೆಚ್.ಪಿ. ಶಿವಕುಮಾರ್, ಸೀನ ಪಂಚಾಯಿತಿ ಸಿಬ್ಬಂದಿ ಪುನಿತ್, ಸಂದ್ಯಾ ಈ,ಎಸ್. ಹಾಜರಿದ್ದರು.