ಸುಂಟಿಕೊಪ್ಪ, ಮಾ. ೫: ಇಲ್ಲಿನ ಪನ್ಯ ಗ್ರಾಮದ ಉದ್ದಿಬಾಣೆ ಮಠದ ಮನೆಯಲ್ಲಿ ತಾ. ೬ ಮತ್ತು ೭ ರಂದು ಧರ್ಮ ದೈವಗಳ ನೇಮ ನಡೆಯಲಿದೆ. ಬೆಳಿಗ್ಗೆ ೭ ಗಂಟೆಗೆ ಗಣಹೋಮ ೧೦ ಗಂಟೆಗೆ ಶ್ರೀ ಸತ್ಯ ನಾರಾಯಣ ಪೂಜೆ, ರಾತ್ರಿ ೮ ಗಂಟೆಗೆ ಭಂಡಾರ ತೆಗೆಯುವುದು, ೧೦ ಗಂಟೆಗೆ ಕಲ್ಲುರ್ಟಿ ದೈವದ ನೇಮೋತ್ಸವ, ತಾ. ೭ ರಂದು ಬೆಳಗ್ಗಿನ ಜಾವ ೧ ಗಂಟೆಗೆ ಪಂಜುರ್ಲಿ ದೈವದ ನೇಮೋತ್ಸವ ೬ ಗಂಟೆಗೆ ಗುಳಿಗ ದೈವದ ನೇಮೋತ್ಸವ, ೭ ಗಂಟೆಗೆ ಕೊರಗಜ್ಜ ದೈವದ ನೇಮೋತ್ಸವ ನಡೆಯಲಿದೆ ಎಂದು ಉದ್ದಿ ಬಾಣೆ ಮಠದ ಮೋಣಪ್ಪ ಪೂಜಾರಿ, ಜಿನ್ನಪ್ಪ ಪೂಜಾರಿ ಕುಟುಂಬಸ್ಥರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.