ಕುಶಾಲನಗರ,ಮಾ. ೩: ಕೂಡುಮಂಗಳೂರು ಗ್ರಾ.ಪಂ.ನ ಸುಂದರ ನಗರದಲ್ಲಿರುವ ಗೊಬ್ಬರದ ಗೋದಾಮಿನ ಬಳಿ ಹಸುವೊಂದು ಸಾವನ್ನಪ್ಪಿರುವ ಘಟನೆ ನಡೆದಿದೆ.
ಸುಂದರನಗರದ ಪೌಲಸ್ ಎಂಬವರಿಗೆ ಸೇರಿದ ೬ ವರ್ಷದ ಹಸು ಸಾವನ್ನಪ್ಪಿದೆ. ಎಂದಿನAತೆ ಮೇಯಲು ಬಿಟ್ಟ ಹಸು, ರಾತ್ರಿಯಾದರೂ ಕಾಣದ ಹಿನ್ನಲೆ ಹಸುವಿನ ಮಾಲೀಕ ಹುಡುಕಾಡಿದ್ದು, ಗರ್ಭಿಣಿ ಹಸುವು ಸುಂದರನಗರದ ಉಗ್ರಾಣದ ಬಳಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಕಂಡುಬAದಿದೆ. ಘಟನೆ ಬಗ್ಗೆ ಹಸುವಿನ ಮಾಲೀಕ ಪಂಚಾಯಿತಿಗೆ ಮಾಹಿತಿ ತಿಳಿಸಿದ ಹಿನ್ನೆಲೆ ಗ್ರಾ.ಪಂ ಅಧ್ಯಕ್ಷೆ ಇಂದಿರಾರಮೇಶ್, ವಾರ್ಡ್ ಸದಸ್ಯ ಕೆ.ಬಿ.ಶಂಶುದ್ಧೀನ್ ಹಾಗೂ ಆಶಾ ವೆಂಕಟೇಶ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭ ಗೋದಾಮಿನ ಸಿಬ್ಬಂದಿಯು ಗ್ರಾಮಸ್ಥರೊಂದಿಗೆ ಅಗೌರವದಿಂದ ವರ್ತಿಸಿದ ಹಿನ್ನೆಲೆ ಗ್ರಾಮಸ್ಥರು, ಅಧಿಕಾರಿಗಳೊಂದಿಗೆ ಮಾತಿನ ಚಕಮುಖಿ ನಡೆಯಿತು.
ಹಸುವು ಸ್ಥಳದಲ್ಲಿದ್ದ ವಿಷಪೂರಿತ ಭತ್ತದ ಹೊಟ್ಟು ತಿಂದು ಸಾವನ್ನಪ್ಪಿರುವ ಬಗ್ಗೆ ಗ್ರಾಮಸ್ಥರು ಆರೋಪಿಸಿದ್ದು, ಕೂಡಲೇ ಸಂಬAಧಪಟ್ಟವರು ಪರಿಹಾರವನ್ನು ಒದಗಿಸಿಕೊಡಬೇಕು ಎಂದು ಗ್ರಾಮಸ್ಥರಾದ ಮಂಜು, ಹರೀಶ್, ಜಯರಾಮ್, ಕುಂಟಣಿರಾಜು, ಅರುಣ್ ಆಗ್ರಹಿಸಿದರು. ಕಳೆದ ಹದಿನೈದು ದಿನಗಳ ಹಿಂದೆ ಇದೇ ರೀತಿ ಹಸು ಸಾವನ್ನಪ್ಪಿದ್ದು, ಹಸುವಿಗೆ ೨೦ ಸಾವಿರ ರೂ ಪರಿಹಾರ ಧನವನ್ನು ನೀಡಲಾಗಿತ್ತು.
ಘಟನಾ ಸ್ಥಳಕ್ಕೆ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಶಿವಶಂಕರ್ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಹಸುವಿನ ಮಾಲೀಕನಿಂದ ದೂರು ಪಡೆದು ಪ್ರಕರಣ ದಾಖಲಿಸಿದ್ದು, ಹಸುವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಯಿತು. ನಂತರ ಸ್ಥಳದಲ್ಲಿದ್ದ ಭತ್ತದ ಹೊಟ್ಟನ್ನು ಲ್ಯಾಬ್ ಪರೀಕ್ಷೆಗೆ ಕಳುಹಿಸಿಕೊಡಲಾಯಿತು. ಈ ಸಂದರ್ಭ ಗ್ರಾ.ಪಂ ಸದಸ್ಯರಾದ ದಿನೇಶ್, ಮಣಿ, ಉಪಠಾಣಾಧಿಕಾರಿ ಸ್ವಾಮಿ, ಪೊಲೀಸ್ ಸಿಬ್ಬಂದಿಗಳು ಹಾಗೂ ಗ್ರಾಮಸ್ಥರು ಇದ್ದರು.