ಮಡಿಕೇರಿ, ಫೆ. ೩: ಹೊದ್ದೂರು ಫ್ರೆಂಡ್ಸ್ ಸಂಘಟನೆ ವತಿಯಿಂದ ತೃತೀಯ ವರ್ಷದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ ತಾ.೬ ರಂದು ಸಂಜೆ ೬ ಗಂಟೆಯಿAದ ಮಧ್ಯರಾತ್ರಿ ೨ ಗಂಟೆಯವರೆಗೆ ನಡೆಯಲಿದೆ. ಹೊದ್ದೂರು ಗ್ರಾಮದ ಅಯ್ಯಪ್ಪ ಕಾಲೋನಿಯ ಅಂಕಣದಲ್ಲಿ ಪಂದ್ಯಾಟ ನಡೆಯಲಿದ್ದು, ಪ್ರಸನ್ನ ಗಣಪತಿ ಸಂಘದ ಅಧ್ಯಕ್ಷ ಮಂಜುಗೋಪಿನಾತ್ ನಾಯರ್ ಅವರು ಉದ್ಘಾಟಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಮಡಿಕೇರಿ ತಾಲೂಕು ಪಂಚಾಯಿತಿ ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್, ಸ್ಥಳೀಯ ವಿ.ಎಸ್.ಎಸ್.ಎನ್ ಬ್ಯಾಂಕಿನ ಅಧ್ಯಕ್ಷ ನೆರವಂಡ ಸಂಜಯ್ ಪೂಣಚ್ಚ, ಶಾಸ್ತ ಈಶ್ವರ ದೇವಾಲಯ ಸಮಿತಿ ಅಧ್ಯಕ್ಷ ಕೂಡಂಡ ರಾಜೇಂದ್ರ ಅಯ್ಯಮ್ಮ, ಕಾಫಿ ಬೆಳೆಗಾರರಾದ ಚೆಟ್ಟಿಮಾಡ ನಿವ್ಯಕುಮಾರಿ ಅವಿನಾಶ್, ಚೆಟ್ಟಿಮಾಡ ಜಗದೀಶ, ಲೋಕೇಶ, ಪ್ರದೀಪ್ ನಂದಕುಮಾರ್, ವನಿಲ್ ಅವಿನಾಶ್, ಅಮ್ಮಣಂಡ ಮಹೇಶ್, ಬಿ.ಪುರುಷೋತ್ತಮ್ ರೈ ಅವರುಗಳು ಭಾಗವಹಿಸಿ ಬಹುಮಾನ ವಿತರಿಸಲಿದ್ದಾರೆ.