ಮಡಿಕೇರಿ, ಮಾ. ೩: ಸರ್ಕಾರದ ವಿವಿಧ ಇಲಾಖೆಗಳು ಖಜಾನೆಗೆ ವರ್ಷಾಂತ್ಯದ ಬಿಲ್ಲುಗಳನ್ನು ಸಲ್ಲಿಸುವ ಸಂಬAಧ ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾ ಖಜಾನೆ ವತಿಯಿಂದ ಕಾರ್ಯಾಗಾರ ನಡೆಯಿತು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಕಾರ್ಯಾಗಾರದಲ್ಲಿ ಮಾತನಾಡಿದ ಖಜಾನೆ ಇಲಾಖೆಯ ಉಪ ನಿರ್ದೇಶಕ ಪದ್ಮಜ ಅವರು ಆರ್ಥಿಕ ಇಲಾಖೆ ಹೊರಡಿಸಿರುವ ವೇಳಾಪಟ್ಟಿಯಂತೆ ವೇತನ ಬಾಕಿ ಬಿಲ್‌ಗಳು, ಹಬ್ಬದ ಮುಂಗಡ, ಅನುದಾನಿತ ವೇತನ ಬಿಲ್ಲುಗಳು, ಕಚೇರಿ ವೆಚ್ಚಕ್ಕೆ ಸಂಬAಧಿಸಿದ ಸಾದಿಲ್ವಾರು ಬಿಲ್‌ಗಳನ್ನು ನಿಗದಿತ ಅವಧಿಯೊಳಗೆ ಸಂಬAಧಪಟ್ಟ ಖಜಾನೆಗಳಿಗೆ ಸಲ್ಲಿಸುವಂತೆ ಅವರು ತಿಳಿಸಿದರು.

ಸರ್ಕಾರದಿಂದ ಬಿಡುಗಡೆಯಾದ ಅನುದಾನ ವ್ಯಪಗತವಾಗದಂತೆ ಗಮನಹರಿಸುವುದು ಸಂಬAಧಪಟ್ಟ ಕಚೇರಿ ಮುಖ್ಯಸ್ಥರದ್ದಾಗಿದೆ. ಆ ನಿಟ್ಟಿನಲ್ಲಿ ನಿಗದಿತ ಅವಧಿಯೊಳಗೆ ಬಿಲ್‌ಗಳನ್ನು ಸಲ್ಲಿಸಬೇಕು ಎಂದರು.

ಖಜಾನೆ ಇಲಾಖೆಯ ಮುಖ್ಯ ಲೆಕ್ಕಿಗ ಶ್ಯಾಮ್‌ಸುಂದರ ಅವರು ಮಾತನಾಡಿ ವರ್ಷಾಂತ್ಯದ ಬಿಲ್ಲುಗಳ ಸಲ್ಲಿಕೆ ಸಂಬAಧ ಆರ್ಥಿಕ ಇಲಾಖೆಯಿಂದ ಈಗಾಗಲೇ ವೇಳಾಪಟ್ಟಿ ಬಿಡುಗಡೆ ಮಾಡಿದ್ದು, ಅದರಂತೆ ಬಿಲ್ಲುಗಳನ್ನು ಸಲ್ಲಿಸಬೇಕು ಎಂದು ಮಾಹಿತಿ ನೀಡಿದರು.

೨೦೨೧ ರ ಜನವರಿ, ೩೧ ರ ನಂತರ ಬಿಡುಗಡೆ ಮಾಡಿದ ಹಾಗೂ ವೆಚ್ಚಗಳಿಗೆ ಸಂಬAಧಿಸಿದAತೆ ತಾ. ೧೫ ಬಿಲ್ಲು ಸಲ್ಲಿಸಲು ಕೊನೆಯ ದಿನವಾಗಿದೆ ಎಂದು ಅವರು ಮಾಹಿತಿ ನೀಡಿದರು.

ಸಂಕ್ಷಿಪ್ತ ಸಾದಿಲ್ವಾರು ಬಿಲ್ಲುಗಳಿಗೆ ಸಂಬAಧಿಸಿದAತೆ ಆದಷ್ಟು ತ್ವರಿತವಾಗಿ ಎನ್.ಡಿ.ಸಿ. ಬಿಲ್ಲುಗಳನ್ನು ಖಜಾನೆಗೆ ಸಲ್ಲಿಸಬೇಕು. ಯಾವುದೇ ಗೊಂದಲಗಳಿಗೆ ಅವಕಾಶ ಮಾಡಬಾರದು ಎಂದರು. ಜಿಲ್ಲಾ ಖಜಾನೆ ಇಲಾಖೆಯ ನವೀನ್ ಕುಮಾರ್ ಅವರು ಬಿಲ್ಲುಗಳಿಗೆ ಸಂಬAಧಿಸಿದAತೆ ಡಿಎಸ್‌ಸಿ ಕೊನೆಗೊಳ್ಳುವ ದಿನಾಂಕ ಬಗ್ಗೆ ಆಗಾಗ ಪರಿಶೀಲನೆ ಮಾಡಬೇಕು.

ಕೊನೆಯ ದಿನಾಂಕದ ಮುಂಚಿತವಾಗಿ ಒಂದುತಿAಗಳೊಳಗೆ ಡಿಎಸ್‌ಸಿ ಪಡೆಯಲು ಮುಂದಾಗಬೇಕು. ಈ ಸಂಬAಧ ಆಧಾರ್ ಕಾರ್ಡ್, ಗುರುತಿನ ಚೀಟಿ ಅಥವಾ ವೇತನ ಪ್ರಮಾಣ ಪತ್ರ ಮತ್ತು ಭಾವಚಿತ್ರವನ್ನು ಒದಗಿಸಬೇಕಿದೆ ಎಂದು ಅವರು ಹೇಳಿದರು.

ಜಿ.ಪಂ.ಮುಖ್ಯ ಲೆಕ್ಕಾಧಿಕಾರಿ ಪುಷ್ಪಾವತಿ ಅವರು ಜಿ.ಪಂ.ವ್ಯಾಪ್ತಿಯ ಕಾರ್ಯಕ್ರಮಗಳ ಬಿಲ್ಲುಗಳ ಸಂಬAಧ ಮೇಲುರುಜು ಮಾಡಲು ಮುಂಚಿತವಾಗಿ ಬಿಲ್ಲುಗಳನ್ನು ಸಲ್ಲಿಸುವಂತೆ ಸಲಹೆ ಮಾಡಿದರು.

ಬಿಸಿಎಂ ಇಲಾಖೆಯ ತಾಲೂಕು ಅಧಿಕಾರಿ ಕವಿತಾ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಪಿ.ಎಸ್. ಮಚ್ಚಾಡೋ, ಪಶುಸಂಗೋಪನಾ ಇಲಾಖೆಯ ಉಪ ನಿರ್ದೇಶಕ ಸುರೇಶ್ ಭಟ್, ಖಜಾನೆ ಇಲಾಖೆಯ ಮುಖ್ಯ ಲೆಕ್ಕಿಗ ಬಾಲಕೃಷ್ಣ, ನಾನಾ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಇದ್ದರು.