ಮಡಿಕೇರಿ, ಮಾ. ೩: ರಾಜ್ಯದ ಬೆಳೆಗಾರರು ಸಹಕಾರಿ ಬ್ಯಾಂಕ್ ಗಳಲ್ಲಿ ಪಡೆದಿರುವ ಸಾಲದ ಸಂಪೂರ್ಣ ಬಡ್ಡಿ ದರವನ್ನು ಶೇ. ೩ಕ್ಕೆ ಸೀಮಿತ ಗೊಳಿಸುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ರಾಜ್ಯದ ಪ್ರಮುಖ ಬೆಳೆಗಾರರ ಸಂಘಟನೆಗಳು ಮನವಿ ಮಾಡಿವೆ.
ರಾಜ್ಯ ಮುಂಗಡ ಪತ್ರ ಮಂಡನೆ ಸಂದರ್ಭ ರಾಜ್ಯದ ರೈತರಿಗೆ ಮುಂಗಡ ಪತ್ರದಲ್ಲಿ ಹೊರೆಯಾಗದಂತೆ ಸಾಕಷ್ಟು ವಿನಾಯಿತಿ ನೀಡುವಂತೆಯೂ ಮುಖ್ಯಮಂತ್ರಿಗಳನ್ನು ಬೆಂಗಳೂರಿನಲ್ಲಿ ಶಾಸಕ ಕೆ.ಜಿ.ಬೋಪಯ್ಯ ನೇತೃತ್ವದಲ್ಲಿ ಭೇಟಿ ಮಾಡಿದ ಕರ್ನಾಟಕ ಬೆಳೆಗಾರರ ಒಕ್ಕೂಟ ಹಾಗೂ ಕೂರ್ಗ್ ಪ್ಲಾಂಟರ್ಸ್ ಅಸೋಸಿಯೇಷನ್‌ನ ನಿಯೋಗದ ಪ್ರಮುಖರು ಕೃಷಿ ಉದ್ಯಮಕ್ಕೆ ವಿವಿಧ ರೀತಿಯ ಸೌಲಭ್ಯ ನೀಡುವಂತೆ ಮನವಿ ಸಲ್ಲಿಸಿದರು.
ಮಡಿಕೇರಿ, ಮಾ. ೩: ರಾಜ್ಯದ ಬೆಳೆಗಾರರು ಸಹಕಾರಿ ಬ್ಯಾಂಕ್ ಗಳಲ್ಲಿ ಪಡೆದಿರುವ ಸಾಲದ ಸಂಪೂರ್ಣ ಬಡ್ಡಿ ದರವನ್ನು ಶೇ. ೩ಕ್ಕೆ ಸೀಮಿತ ಗೊಳಿಸುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ರಾಜ್ಯದ ಪ್ರಮುಖ ಬೆಳೆಗಾರರ ಸಂಘಟನೆಗಳು ಮನವಿ ಮಾಡಿವೆ.
ರಾಜ್ಯ ಮುಂಗಡ ಪತ್ರ ಮಂಡನೆ ಸಂದರ್ಭ ರಾಜ್ಯದ ರೈತರಿಗೆ ಮುಂಗಡ ಪತ್ರದಲ್ಲಿ ಹೊರೆಯಾಗದಂತೆ ಸಾಕಷ್ಟು ವಿನಾಯಿತಿ ನೀಡುವಂತೆಯೂ ಮುಖ್ಯಮಂತ್ರಿಗಳನ್ನು ಬೆಂಗಳೂರಿನಲ್ಲಿ ಶಾಸಕ ಕೆ.ಜಿ.ಬೋಪಯ್ಯ ನೇತೃತ್ವದಲ್ಲಿ ಭೇಟಿ ಮಾಡಿದ ಕರ್ನಾಟಕ ಬೆಳೆಗಾರರ ಒಕ್ಕೂಟ ಹಾಗೂ ಕೂರ್ಗ್ ಪ್ಲಾಂಟರ್ಸ್ ಅಸೋಸಿಯೇಷನ್‌ನ ನಿಯೋಗದ ಪ್ರಮುಖರು ಕೃಷಿ ಉದ್ಯಮಕ್ಕೆ ವಿವಿಧ ರೀತಿಯ ಸೌಲಭ್ಯ ನೀಡುವಂತೆ ಮನವಿ ಸಲ್ಲಿಸಿದರು. ಸ್ಥಗಿತಗೊಂಡವು. ಬೆಳೆಗಾರ ವಲಯದಲ್ಲಿಯೂ ಇದು ಅಸಂಖ್ಯಾತ ಸವಾಲುಗಳಿಗೆ ಕಾರಣವಾಯಿತು . ಮೊದಲೇ ಸಂಕಷ್ಟದಲ್ಲಿದ್ದ ಕೃಷಿವಲಯದ ಮೇಲೆ ಇದು ಮತ್ತಷ್ಟು ಪ್ರತಿಕೂಲ ಪರಿಣಾಮ ಬೀರಿತು ಎಂದು ಹೇಳಿದರು.
ಸಾಲದ ಮೇಲಿನ ಬಡ್ಡಿ ಪಾವತಿಯು ಈ ಸಂಕಷ್ಟ ಕಾಲದಲ್ಲಿ ಬೆಳೆಗಾರರಿಗೆ ಬಹಳ ದೊಡ್ಡ ಹೊರೆ ಯಾಗಿದೆ. ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ ರಾಜ್ಯದ ಕೃಷಿಕರು ಹಲವಾರು ಸವಾಲುಗಳನ್ನು ಎದುರಿಸಬೇಕಾಯಿತು. ಪ್ರಸಕ್ತ ಬೆಳೆ ಋತುವಿನಲ್ಲಿ ಕೃಷಿಕರು ಪ್ರಾಕೃತಿಕ ವಿಕೋಪದಿಂದಾಗಿ ಸಾಕಷ್ಟು ನಷ್ಟ ಹೊಂದಿದ್ದೇವೆ. ಹೀಗಾಗಿ ಕೃಷಿಕರು ಈ ಬಾರಿ ಹೆಚ್ಚಿನ ದರದಲ್ಲಿ ಬಡ್ಡಿ ನೀಡುವ ಸ್ಥಿತಿಯಲ್ಲಿಲ್ಲ.
ಹೆಚ್ಚಿನ ಬಡ್ಡಿದರದಿಂದಾಗಿ ಕೃಷಿ ವಲಯವು ದುರ್ಬಲಗೊಂಡಿದೆ, ಇಂದು ನಿಯಮಿತ ಕೃಷಿ ಪದ್ಧತಿಗಳ ಮೇಲೆ ಹೆಚ್ಚುವರಿ ಬಂಡವಾಳದ ಅಗತ್ಯವಿದ್ದು ಸೂಕ್ತ ಮತ್ತು ಕೈ ಗೆಟುಕುವ ಬಡ್ಡಿದರದಲ್ಲಿ ಸಾಲ ಮಂಜೂರಾದರೆ ಕೃಷಿಕರಿಗೂ ಅನುಕೂಲವಾಗುತ್ತದೆ ಎಂದೂ ಮನವಿಯಲ್ಲಿ ಅಭಿಪ್ರಾಯ ಪಡಲಾಗಿದೆ. ಮನವಿಯ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಈ ಸಂದರ್ಭ ವ್ಯಕ್ತಪಡಿಸಿದರು.
ಇದೇ ಸಂದರ್ಭ ನಿಯೋಗದ ಪದಾಧಿಕಾರಿಗಳು ರಾಜ್ಯ ಸರ್ಕಾರ ವಾಣಿಜ್ಯ ಇಲಾಖೆಯ ಸಹಾಯಕ ಮುಖ್ಯ ಕಾರ್ಯದರ್ಶಿ ಐ.ಪಿ.ಎಂ. ಪ್ರಸಾದ್ ಅವರನ್ನೂ ಭೇಟಿ ಮಾಡಿ ಮುಂಗಡ ಪತ್ರದಲ್ಲಿ ಬೆಳೆಗಾರರಿಗೆ ಸೂಕ್ತ ಅನುಕೂಲ ಕಲ್ಪಿಸುವಂತೆ ಮನವಿ ಮಾಡಲಾಯಿತು.
ಸಂಘಟನೆಗಳ ನಿಯೋಗದಲ್ಲಿ ಕರ್ನಾಟಕ ಬೆಳೆಗಾರರ ಒಕ್ಕೂಟದ ಉಪಾಧ್ಯಕ್ಷ ನಂದಾಬೆಳ್ಳಿಯಪ್ಪ, ಕಾರ್ಯದರ್ಶಿ ಕೃಷ್ಣಪ್ಪ, ಖಚಾಂಚಿ ರಾಜೀವ್, ಸಂಘಟನಾ ಕಾರ್ಯದರ್ಶಿ ಕೆ.ಕೆ.ವಿಶ್ವನಾಥ್, ರತ್ನಾಕರ್, ಕೊಡಗು ಪ್ಲಾಂಟರ್ಸ್ ಅಸೋಸಿಯೇಷನ್ ಅಧ್ಯಕ್ಷ ರಾಮನಾಥನ್ ನಾಗಪ್ಪನ್, ಮಾಜಿ ಅಧ್ಯಕ್ಷ ಪೀಟು ಕಾರ್ಯಪ್ಪ, ಪದಾಧಿಕಾರಿ ಪ್ರದೀಪ್ ಪೂವಯ್ಯ, ಸದಸ್ಯ ಕೈಬುಲೀರ ಹರೀಶ್ ಅಪ್ಪಯ್ಯ, ಸೇರಿದಂತೆ ಪ್ರಮುಖ ಪದಾಧಿಕಾರಿಗಳು ಇದ್ದರು.