ಸೋಮವಾರಪೇಟೆ,ಮಾ. ೩ : ಗೋಣಿಮರೂರಿನಿಂದ ಮೈಸೂರಿಗೆ ನೂತನ ಕೆಎಸ್ಆರ್ಟಿಸಿ ಬಸ್ ಸಂಚಾರ ಆರಂಭಗೊAಡಿದೆ. ಗ್ರಾಮಸ್ಥರ ಬಹುಕಾಲದ ಬೇಡಿಕೆಯಾಗಿದ್ದ ಬಸ್ ಮಾರ್ಗ ಇದೀಗ ಈಡೇರಿದಂತಾಗಿದ್ದು, ರಾಮನಾಥಪುರ ಡಿಪೋದಿಂದ ನೂತನ ಬಸ್ ಒದಗಿಸಲಾಗಿದೆ.
ನೂತನ ಬಸ್ ಗೋಣಿಮರೂರಿನಿಂದ ಬೆಳಿಗ್ಗೆ ೬.೩೦ಕ್ಕೆ ಮೈಸೂರಿಗೆ ಹೊರಡಲಿದೆ. ಸಂಜೆ ೪.೩೦ಕ್ಕೆ ಮೈಸೂರಿನಿಂದ ಹೊರಟು ಗೋಣಿಮರೂರಿಗೆ ತಲುಪಲಿದೆ. ನೂತನ ಬಸ್ಗೆ ಗೋಣಿಮರೂರಿನಲ್ಲಿ ಗ್ರಾ.ಪಂ. ಸದಸ್ಯ ಜಿ.ಬಿ. ಸಿದ್ಧಲಿಂಗಪ್ಪ, ದೇವಾಲಯ ಸಮಿತಿ ಅಧ್ಯಕ್ಷ ಎ.ಬಿ.ಧರ್ಮಪ್ಪ, ಕೆಎಸ್ಆರ್ಟಿಸಿಯ ಶಿವಪ್ಪ, ಸ್ಥಳೀಯರಾದ ಮಂಜುನಾಥ್ ಸೇರಿದಂತೆ ಇತರರು ಪೂಜೆ ಸಲ್ಲಿಸಿದರು.