ಕೂಡಿಗೆ,ಮಾ.೩: ಕಳೆದ ಹತ್ತು ದಿನಗಳ ಹಿಂದೆ ಲೋಕಾರ್ಪಣೆ ಗೊಂಡಿರುವ ಕೂಡುಮಂಗಳೂರು ಕೂಡ್ಲೂರು ಎರಡು ಗ್ರಾಮದ ಗ್ರಾಮ ದೇವತೆಯಾದ ದೊಡ್ಡಮ್ಮ ತಾಯಿ ದೇವಾಲಯದ ಕಾಣಿಕೆ ಹುಂಡಿಯನ್ನು ಒಡೆದು ಕಳ್ಳತನ ಮಾಡಿರುವ ಘಟನೆ ನಡೆದಿದೆ.
ಮುಖಕ್ಕೆ ಬಟ್ಟೆಯನ್ನು ಕಟ್ಟಿಕೊಂಡು ನೂತನ ದೇವಾಲಯದ ಎರಡು ಕಾಣಿಕೆ ಹುಂಡಿಗಳನ್ನು ಹೊತ್ತೊಯ್ದು ದೇವಾಲಯದ ಹಿಂದಿನ ಬೇಲಿಯ ಬಳಿ ಹುಂಡಿಗಳನ್ನು ಒಡೆದು ಅದರಲ್ಲಿದ್ದ ಹಣವನ್ನು ತೆಗೆದುಕೊಂಡು ಹೋಗಿರುತ್ತಾರೆ. ಆ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.