ಕೂಡಿಗೆ, ಮಾ. ೩ : ಶಿರಂಗಾಲ ಗ್ರಾಮದಲ್ಲಿ ನೂತನ ಜಲ ಜೀವನ್ ಯೋಜನೆಯ ಅನ್ವಯ ಗ್ರಾಮಕ್ಕೆ ಸಮರ್ಪಕವಾಗಿ ಕುಡಿಯುವ ನೀರು ಒದಗಿಸಲು ಸಾಮಾನ್ಯ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು. ಗ್ರಾ.ಪಂ.ಅಧ್ಯಕ್ಷೆ ಭಾಗೀರಥಿ ಲೋಕೇಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಶುಚಿತ್ವ ಸೇರಿದಂತೆ ಉದ್ಯೋಗ ಖಾತರಿ ಯೋಜನೆಯ ಅಡಿಯಲ್ಲಿ ಕೈಗೊಳ್ಳುವ ಕಾಮಗಾರಿಯ ಬಗ್ಗೆ ಚರ್ಚೆಗಳು ನಡೆದವು ಅಧ್ಯಕ್ಷೆ ಭಾಗೀರಥಿ ಮಾತನಾಡುತ್ತಾ ಗ್ರಾಮದ ಪ್ರಗತಿಗೆ ಅನುಕೂಲವಾಗುವ ಕಾಮಗಾರಿಗಳ ಕ್ರಿಯಾ ಯೋಜನೆಯನ್ನು ತಯಾರಿಸಿ ಅದರ ಮೂಲಕ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲು ಎಲ್ಲಾ ಸದಸ್ಯರ ಸಹಕಾರ ಮುಖ್ಯ. ಗ್ರಾಮಸ್ಥರು ತಮ್ಮ ಕಂದಾಯವನ್ನು ಪಾವತಿಸುವ ಮೂಲಕ ಗ್ರಾಮದ ವಿವಿಧ ಯೋಜನೆಗೆ ಸಹಕಾರ ನೀಡುವಂತೆ ಮನವಿ ಮಾಡಿದರು. ಉದ್ಯೋಗ ಖಾತರಿ ಯೋಜನೆಗೆ ತಮ್ಮ ಹೆಸರು ಗಳನ್ನು ನೋಂದಣಿ ಮಾಡಿಕೊಂಡು ಯೋಜನೆಯ ಕಾಮಗಾರಿಗಳನ್ನು ನಡೆಸಲು ಮುಂದಾಗಬೇಕೆAದು ತಿಳಿಸಿದರು. ಈ ಸಂದರ್ಭದಲ್ಲಿ ಅಭಿವೃದ್ಧಿ ಅಧಿಕಾರಿ ಹರೀಶ್ ಸರಕಾರದ ಯೋಜನೆ ಬಗ್ಗೆ ಸಭೆಗೆ ಮಾಹಿತಿ ನೀಡಿದರು. ಸಭೆಯಲ್ಲಿ ಉಪಾಧ್ಯಕ್ಷ ಎನ್.ಎನ್. ಧರ್ಮಪ್ಪ, ಸದಸ್ಯರು ಗಳಾದ ಬಸವರಾಜು, ಶ್ರೀಕಾಂತ್, ಸರಿತಾ, ಗೀತಾ, ಪ್ರದೀಪ್, ಲಕ್ಷಿö್ಮ, ಲತಾಬಾಯಿ ಹಾಜರಿದ್ದರು.