ಗೋಣಿಕೊಪ್ಪ ವರದಿ, ಮಾ. ೩ : ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಹಾಗೂ ಗೋಣಿಕೊಪ್ಪ ವೇರಿ ಕಾಲೇಜು ಆಶ್ರಯದಲ್ಲಿ ಗುರುವಾರ ಕಾವೇರಿ ಕಾಲೇಜು ಆವರಣದಲ್ಲಿ ಆಯೋಜಿಸಿದ್ದ ಜಿಲ್ಲಾಮಟ್ಟದ ಉದ್ಯೋಗ ಮೇಳದಲ್ಲಿ ಸುಮಾರು ೩೫೦ ಕ್ಕೂ ಹೆಚ್ಚು ಉದ್ಯೋಗ ಆಕಾಂಕ್ಷಿಗಳು ಪಾಲ್ಗೊಂಡಿದ್ದರು. ಜಿಲ್ಲಾ ವ್ಯಾಪ್ತಿಯ ಕ್ಲಬ್ ಮಹೀಂದ್ರ, ತಾಮರ ಕೂರ್ಗ್, ಮಾಂಡೋವಿ ಮೋಟಾರ್ಸ್, ಸ್ವತಂತ್ರ ಮೈಕ್ರೋಫೈನಾನ್ಸ್, ಯಂಗ್ ಇಂಡಿಯಾ, ಶ್ರೀ ಸಾಯಿ ಎಂಟರ್‌ಪ್ರೆöÊಸಸ್ ಹಿಮತ್ ಸಿಂಗ್‌ಕ ಕಂಪೆನಿಗಳು ಸಂದರ್ಶನ ನಡೆಸಿದವು.

ಕಾವೇರಿ ಎಜುಕೇಷನ್ ಸೊಸೈಟಿ ಅಧ್ಯಕ್ಷ ಚಿರಿಯಪಂಡ ಕೆ. ಉತ್ತಪ್ಪ ಉದ್ಘಾಟಿಸಿದರು. ಕಾವೇರಿ ಎಜುಕೇಷನ್ ಸೊಸೈಟಿ ಕಾರ್ಯದರ್ಶಿ ಕೆ. ಜಿ. ಉತ್ತಪ್ಪ, ಪ್ರಾಂಶುಪಾಲ ಪ್ರೊ. ಕೆ. ವಿ. ಕುಸುಮಾಧರ್, ಪ್ಲೇಸ್ಮೆಂಟ್ ಆಫೀಸರ್ ಯು. ಟಿ. ಪೆಮ್ಮಯ್ಯ, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಉದ್ಯೋಗಾಧಿಕಾರಿ ಸಿ. ಎಂ. ಉಮಾ ಉಪಸ್ಥಿತರಿದ್ದರು