ಗೋಣಿಕೊಪ್ಪಲು, ಮಾ. ೩: ಸಾರ್ವಜನಿಕ ಸೇವೆಗಳು ಜನತೆಗೆ ಹತ್ತಿರದಲ್ಲಿಯೇ ಸಿಗಬೇಕು. ಜನರು ಪದೇಪದೇ ತಾಲೂಕಿನ ವಿವಿಧ ಕಚೇರಿಗಳಿಗೆ ಅಲೆಯುವಂತಾಗಬಾರದು. ಒಂದೆಡೆಯೇ ಎಲ್ಲಾ ಸೇವೆಗಳು ಸಿಗಬೇಕು. ಕುಗ್ರಾಮಗಳಿಂದ ವೀರಾಜಪೇಟೆ ನಗರಕ್ಕೆ ತೆರಳಲು ಸಾಧ್ಯವಾಗುತ್ತಿಲ್ಲ ಎಂಬುದನ್ನು ಮನಗಂಡ ಹಿರಿಯರು ದಶಕಗಳ ಕಾಲ ನಡೆಸಿದ ಹೋರಾಟದ ಫಲವಾಗಿ ಪೊನ್ನಂಪೇಟೆ ನೂತನ ತಾಲೂಕು ಅಧಿಕೃತವಾಗಿ ಅಸ್ತಿತ್ವಕ್ಕೆ ಬಂದು ತಿಂಗಳುಗಳೇ ಉರುಳಿವೆ. ಆದರೆ ಕಚೇರಿಯಲ್ಲಿ ಮೂಲ ಸೌಕರ್ಯಗಳು, ಸಿಬ್ಬಂದಿಗಳು ಇನ್ನೂ ಕೂಡ ವ್ಯವಸ್ಥಿತವಾಗಿ ಜೋಡಣೆಯಾಗಿಲ್ಲ. ತಾಲೂಕು ಮಿನಿ ವಿಧಾನಸೌಧ, ಸುಸಜ್ಜಿತ ತಾಲೂಕು ಆಡಳಿತ ಭವನ, ಸರ್ಕಾರದ ಅಧೀನದ ಸುಮಾರು ೩೩ ಇಲಾಖೆಗಳು ಒಂದೇ ಕಟ್ಟಡದಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಕಾರ್ಯನಿರ್ವಹಿಸಲು ಕ್ರಮ ಕೈಗೊಳ್ಳಬೇಕಾಗಿದೆ.
ಪೊನ್ನಂಪೇಟೆಯಲ್ಲಿ ಸುಸಜ್ಜಿತವಾದ ನ್ಯಾಯಾಲಯ ಸಂಕೀರ್ಣ ಆರಂಭಗೊAಡು ಇದೀಗ ಹಲವು ವರ್ಷಗಳು ಕಳೆದಿವೆ. ಸುಂದರ ನ್ಯಾಯಾಲಯ ಸಮುಚ್ಚಯ ನೋಡುಗರನ್ನು ಈಗಲೂ ಆಕರ್ಷಿಸುತ್ತಿದೆ. ಇಂತಹ ಮಾದರಿಯಲ್ಲಿ ಮಿನಿ ವಿಧಾನಸೌಧ ನಿರ್ಮಾಣವಾಗಬೇಕೆಂಬುದು ಇಲ್ಲಿನ ಜನತೆಯ ನಿರೀಕ್ಷೆಯಾಗಿದೆ. ಕೊಡಗು ಜಿಲ್ಲೆಯಲ್ಲಿದ್ದ ಮೂರು ತಾಲೂಕು ಇದೀಗ ಕುಶಾಲನಗರ ಕಾವೇರಿ ಹಾಗೂ ಪೊನ್ನಂಪೇಟೆ ನೂತನ ತಾಲೂಕು ಸೇರ್ಪಡೆಯಿಂದಾಗಿ ಒಟ್ಟು ೫ ತಾಲೂಕುಗಳಾಗಿ ವಿಂಗಡಣೆ ಯಾಗಿದೆ. ಪೊನ್ನಂಪೇಟೆ ಹಳೆಯ ಬಿಎಚ್‌ಇಎಲ್ ಕಟ್ಟಡವೇ ನೂತನ ತಾಲೂಕು ಕಟ್ಟಡವಾಗಿ ಕೆಲಸ ನಿರ್ವಹಿಸುತ್ತಿದೆ.
ಪೊನ್ನಂಪೇಟೆ ತಾಲೂಕು ಉದ್ಘಾಟನೆಗೆ ಆಗಮಿಸಿದ್ದ ಕಂದಾಯ ಗೋಣಿಕೊಪ್ಪಲು, ಮಾ. ೩: ಸಾರ್ವಜನಿಕ ಸೇವೆಗಳು ಜನತೆಗೆ ಹತ್ತಿರದಲ್ಲಿಯೇ ಸಿಗಬೇಕು. ಜನರು ಪದೇಪದೇ ತಾಲೂಕಿನ ವಿವಿಧ ಕಚೇರಿಗಳಿಗೆ ಅಲೆಯುವಂತಾಗಬಾರದು. ಒಂದೆಡೆಯೇ ಎಲ್ಲಾ ಸೇವೆಗಳು ಸಿಗಬೇಕು. ಕುಗ್ರಾಮಗಳಿಂದ ವೀರಾಜಪೇಟೆ ನಗರಕ್ಕೆ ತೆರಳಲು ಸಾಧ್ಯವಾಗುತ್ತಿಲ್ಲ ಎಂಬುದನ್ನು ಮನಗಂಡ ಹಿರಿಯರು ದಶಕಗಳ ಕಾಲ ನಡೆಸಿದ ಹೋರಾಟದ ಫಲವಾಗಿ ಪೊನ್ನಂಪೇಟೆ ನೂತನ ತಾಲೂಕು ಅಧಿಕೃತವಾಗಿ ಅಸ್ತಿತ್ವಕ್ಕೆ ಬಂದು ತಿಂಗಳುಗಳೇ ಉರುಳಿವೆ. ಆದರೆ ಕಚೇರಿಯಲ್ಲಿ ಮೂಲ ಸೌಕರ್ಯಗಳು, ಸಿಬ್ಬಂದಿಗಳು ಇನ್ನೂ ಕೂಡ ವ್ಯವಸ್ಥಿತವಾಗಿ ಜೋಡಣೆಯಾಗಿಲ್ಲ. ತಾಲೂಕು ಮಿನಿ ವಿಧಾನಸೌಧ, ಸುಸಜ್ಜಿತ ತಾಲೂಕು ಆಡಳಿತ ಭವನ, ಸರ್ಕಾರದ ಅಧೀನದ ಸುಮಾರು ೩೩ ಇಲಾಖೆಗಳು ಒಂದೇ ಕಟ್ಟಡದಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಕಾರ್ಯನಿರ್ವಹಿಸಲು ಕ್ರಮ ಕೈಗೊಳ್ಳಬೇಕಾಗಿದೆ.
ಪೊನ್ನಂಪೇಟೆಯಲ್ಲಿ ಸುಸಜ್ಜಿತವಾದ ನ್ಯಾಯಾಲಯ ಸಂಕೀರ್ಣ ಆರಂಭಗೊAಡು ಇದೀಗ ಹಲವು ವರ್ಷಗಳು ಕಳೆದಿವೆ. ಸುಂದರ ನ್ಯಾಯಾಲಯ ಸಮುಚ್ಚಯ ನೋಡುಗರನ್ನು ಈಗಲೂ ಆಕರ್ಷಿಸುತ್ತಿದೆ. ಇಂತಹ ಮಾದರಿಯಲ್ಲಿ ಮಿನಿ ವಿಧಾನಸೌಧ ನಿರ್ಮಾಣವಾಗಬೇಕೆಂಬುದು ಇಲ್ಲಿನ ಜನತೆಯ ನಿರೀಕ್ಷೆಯಾಗಿದೆ. ಕೊಡಗು ಜಿಲ್ಲೆಯಲ್ಲಿದ್ದ ಮೂರು ತಾಲೂಕು ಇದೀಗ ಕುಶಾಲನಗರ ಕಾವೇರಿ ಹಾಗೂ ಪೊನ್ನಂಪೇಟೆ ನೂತನ ತಾಲೂಕು ಸೇರ್ಪಡೆಯಿಂದಾಗಿ ಒಟ್ಟು ೫ ತಾಲೂಕುಗಳಾಗಿ ವಿಂಗಡಣೆ ಯಾಗಿದೆ. ಪೊನ್ನಂಪೇಟೆ ಹಳೆಯ ಬಿಎಚ್‌ಇಎಲ್ ಕಟ್ಟಡವೇ ನೂತನ ತಾಲೂಕು ಕಟ್ಟಡವಾಗಿ ಕೆಲಸ ನಿರ್ವಹಿಸುತ್ತಿದೆ.
ಪೊನ್ನಂಪೇಟೆ ತಾಲೂಕು ಉದ್ಘಾಟನೆಗೆ ಆಗಮಿಸಿದ್ದ ಕಂದಾಯ ತುಂಬಿ ಕಂಪ್ಯೂಟರ್‌ಗಳು ಹಾಳಾಗಲಿವೆ. ದುರಸ್ತಿ ಕಾರ್ಯ ನಡೆಸಲು ೧೦ ಲಕ್ಷ ಅನುದಾನವನ್ನು ಮಂಜೂರು ಮಾಡಿದ್ದರೂ ಇಲ್ಲಿಯ ತನಕ ಬಿಡುಗಡೆಯಾದ ಅನುದಾನ ಬಳಕೆಯಾಗಿಲ್ಲ ನಾಡು ಕಚೇರಿಯಲ್ಲಿ ಉಪತಹಶೀಲ್ದಾರ್ ಕರ್ತವ್ಯ ನಿರ್ವಹಿಸುತ್ತಿದ್ದು ಆದಷ್ಟು ಬೇಗನೆ ಈ ದುರಸ್ತಿ ಕಾರ್ಯ ನಡೆಯಬೇಕಾಗಿದೆ.
ಹೋರಾಟ ಅನಿವಾರ್ಯ
ಪೊನ್ನಂಪೇಟೆ ತಾಲೂಕು ಆಡಳಿತ ಭವನದ ಭವ್ಯ ಸೌಧಕ್ಕೂ ಈಗಲೇ ರೂಪು ರೇಷೆಗಳನ್ನು ಹಾಕಿಕೊಳ್ಳಬೇಕಾಗಿದೆ. ಮಿನಿ ವಿಧಾನಸೌಧ ಎಲ್ಲಾ ಸುಸಜ್ಜಿತ ವ್ಯವಸ್ಥೆ ಗಳೊಂದಿಗೆ ಕಾರ್ಯ ನಿರ್ವಹಿಸಲು ಉತ್ತಮ ನೀಲಿನಕ್ಷೆ ತಯಾರಾಗ ಬೇಕಾಗಿದೆ. ವಿಸ್ತಾರವಾಗಿರುವ ಈ ಪ್ರದೇಶದಲ್ಲಿ ಸುಸಜ್ಜಿತ ಮಿನಿ ವಿಧಾನ ಸೌಧ ನಿರ್ಮಾಣವಾದಲ್ಲಿ ಪೊನ್ನಂಪೇಟೆ ಹಳೇ ನಾಡಕಚೇರಿ ಸುತ್ತ ಮುತ್ತಲು ಇರುವ ಜಾಗವನ್ನು ಬಳಕೆ ಮಾಡಿಕೊಂಡು ತಹಶೀಲ್ದಾರ್ ಅವರ ವಸತಿ ಗೃಹ, ಸಿಬ್ಬಂದಿಗಳ ವಸತಿಗೃಹ ನಿರ್ಮಿಸಲು ಅವಕಾಶ ವಿದೆ. ತಾಲೂಕು ಹೋರಾಟ ಸಮಿತಿಯ ಪದಾಧಿಕಾರಿಗಳು ಈ ನಿಟ್ಟಿನಲ್ಲಿ ಮತ್ತೊಂದು ಸುತ್ತಿನ ಮಾತುಕತೆ ನಡೆಸಿ ಸಂಬAಧಪಟ್ಟ ಮಂತ್ರಿವರ್ಯರನ್ನು, ಕ್ಷೇತ್ರದ ಶಾಸಕರನ್ನು ವಿಶ್ವಾಸಕ್ಕೆ ಪಡೆದು ಆದಷ್ಟು ಬೇಗನೇ ಮುಂದಾಗಬೇಕಾದ ಕೆಲಸ ಕಾರ್ಯಗಳಿಗೆ ಒತ್ತಡ ತರಬೇಕಾಗಿದೆ. ಪ್ರಸ್ತುತ ಇರುವ ಪೊನ್ನಂಪೇಟೆ ತಾಲೂಕು ಕಚೇರಿಯ ಸಿಬ್ಬಂದಿಗಳನ್ನು ಇಲ್ಲಿಯೇ ಉಳಿಸಿಕೊಂಡು ವೀರಾಜಪೇಟೆಯ ತಾಲೂಕಿಗೆ ಹೊಸ ಅಧಿಕಾರಿಗಳನ್ನು, ಸಿಬ್ಬಂದಿಗಳನ್ನು ನೇಮಿಸಲು ಹೋರಾಟ ಸಮಿತಿಯು ಶಾಸಕರ ಗಮನ ಸೆಳೆಯಬೇಕಿದೆ. ಆವರಣದಲ್ಲಿ ಸಾರ್ವಜನಿಕರಿಗೆ ಅನುಕೂಲಕರವಾದ ಸುಸಜ್ಜಿತ ಶೌಚಾಲಯ ನಿರ್ಮಾಣ, ಕುಡಿಯುವ ನೀರಿನ ಸೌಕರ್ಯ, ಕಚೇರಿಯಲ್ಲಿ ನಿರ್ವಹಿಸಬೇಕಾದ ಕಂಪ್ಯೂಟರ್‌ಗಳಿಗೆ ಗುಣಮಟ್ಟದ ವಿದ್ಯುತ್ ಸೌಕರ್ಯ ಆಗಬೇಕಾಗಿದೆ.
ಒಟ್ಟಿನಲ್ಲಿ ಈ ಭಾಗದ ಜನತೆಗೆ ತಾಲೂಕು ಆಡಳಿತ ಸೇವೆ ತ್ವರಿತವಾಗಿ ದೊರೆಯಲು ನೂತನ ತಹಶೀಲ್ದಾರರು, ಶಿರಸ್ತೇದಾರರು, ಸಿಬ್ಬಂದಿಗಳು ಅಗತ್ಯ ನೇಮಕಾತಿ ಆಗಬೇಕಾಗಿದೆ. ಈ ಭಾಗದ ಕಾಫಿ ಬೆಳೆಗಾರರು ಕೃಷಿಕರು, ಶಾಲಾ ಕಾಲೇಜುಗಳು, ಉದ್ಯಮಿಗಳು, ವರ್ತಕರು ಹಾಗೂ ಮತ್ತಿತರರು ಅತ್ಯಧಿಕ ತೆರಿಗೆ ಪಾವತಿ ಮಾಡುತ್ತಿದ್ದು ಜನತೆಯ ಮನೆಬಾಗಿಲಿಗೆ ತುರ್ತು ಸೇವೆ ಒದಗಲು ಆದಷ್ಟು ಶೀಘ್ರ ತಹಶೀಲ್ದಾರ್ ಕಚೇರಿಯಲ್ಲಿ ಸಂಪೂರ್ಣ ಸೇವೆ ಸಿಗುವಂತಾಗಬೇಕೆAಬುದು ಸಾರ್ವಜನಿಕರ ಬೇಡಿಕೆಯಾಗಿದೆ.
ಕಂಪ್ಯೂಟರ್ ಭಯ.!
ಕಟ್ಟಡದಲ್ಲಿ ಸುಸಜ್ಜಿತವಾದ ರೆಕಾರ್ಡ್ ರೂಂ ಮಾಡಬೇಕಾಗಿದೆ. ಕಟ್ಟಡಕ್ಕೆ ಪೂರ್ಣ ಪ್ರಮಾಣದಲ್ಲಿ ಗುಣಮಟ್ಟದ ವಿದ್ಯುತ್ ಕಾಮಗಾರಿ ಆಗಿಲ್ಲದ ಕಾರಣ ಕಂಪ್ಯೂಟರ್‌ಗಳು ಆಗಿಂದಾಗ್ಗೆ ಹಾಳಾಗುತ್ತಿವೆ. ಅಲ್ಲದೆ ಮುಖ್ಯವಾಗಿ ವಿದ್ಯುತ್ ಸಂಪರ್ಕಕ್ಕೆ ಬೇಕಾದ ಅರ್ಥಿಂಗ್ ವ್ಯವಸ್ಥೆಯೆ ಕಲ್ಪಿಸಿಲ್ಲ. ಕಚೇರಿ ಸಿಬ್ಬಂದಿಗಳಿಗೆ ತುರ್ತು ಕೆಲಸಕ್ಕೆ ಬೇಕಾದ ಕಂಪ್ಯೂಟರ್ ಆಪರೇಟರ್‌ಗಳು ಲಭ್ಯವಿಲ್ಲ. ಅಗತ್ಯವಾಗಿ ಬೇಕಾದ ಸ್ಟೇಷನರಿ ಸಾಮಗ್ರಿಗಳು, ಜೆರಾಕ್ಸ್ ಮೆಷಿನ್‌ಗಳು, ಪ್ರಿಂಟರ್ ಮಷಿನ್‌ಗಳು, ದೂರವಾಣಿ ಸಂಪರ್ಕ, ಸರಬರಾಜು ಆಗಿಲ್ಲ. ಲಭ್ಯವಿರುವÀ ಕಂಪ್ಯೂಟರ್‌ಗಳು ವಿದ್ಯುತ್ ಭಯದಿಂದಲೇ ಕೆಲಸ ನಿರ್ವಹಿಸಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ. ಸರ್ಕಾರದಿಂದ ಅನುದಾನ ಮಂಜೂರಾಗಿ ದ್ದರೂ ಕಚೇರಿಗೆ ಬೇಕಾದ ತುರ್ತು ಕೆಲಸಗಳಿಗೆ ಇನ್ನೂ ಕೂಡ ಮಂಜೂರಾತಿ ಆಗಿಲ್ಲ. -ಹೆಚ್. ಕೆ. ಜಗದೀಶ್