ಮಡಿಕೇರಿ, ಮಾ. ೨ : ವೀರಾಜಪೇಟೆ ತಾಲೂಕಿನ ಬಾಡಗರಕೇರಿಯ ಶ್ರೀಮೃತ್ಯುಂಜಯ ದೇವಾಲಯದ ವಾರ್ಷಿಕೋತ್ಸವ ವಿವಿಧ ಧಾರ್ಮಿಕ ಕೈಂಕರ್ಯ ಗಳೊಂದಿಗೆ ಶ್ರದ್ಧಾಭಕ್ತಿಯಿಂದ ನಡೆಯುತ್ತಿದೆ.

ಫೆ.೨೪ ರಿಂದ ಆರಂಭ ಗೊಂಡಿರುವ ವಾರ್ಷಿಕೋತ್ಸವದ ಧಾರ್ಮಿಕ ವಿಧಿ ವಿಧಾನಗಳು ತಾ. ೫ ರಂದು ಕೊಡಿಮರ ಇಳಿಸುವು ದರೊಂದಿಗೆ ಸಂಪನ್ನಗೊಳ್ಳಲಿದೆ.

ತಾ. ೩ ರಂದು (ಇಂದು) ಸಂಜೆ ೫ ಗಂಟೆಗೆ ಇರುಬಳಕು, ಹರಕೆ ಬಳಕಿನ ಪ್ರಸಾದ ವಿತರಣೆ ನಂತರ ಬೆಳಿಗ್ಗೆ ೧೧ ಗಂಟೆಗೆ ನಿತ್ಯ ಪೂಜೆ ನಡೆಯಲಿದ್ದು, ಸಂಜೆ ೫ ಗಂಟೆಗೆ ನೆರವು, ರಾತ್ರಿ ೮ ಗಂಟೆಗೆ ಶ್ರೀ ವಿಷ್ಣು ದೇವರ ಅಲಂಕಾರ ಪೂಜೆ ಜರುಗಲಿದೆ.

ತಾ. ೪ ರಂದು ಬೆಳಿಗ್ಗೆ ೧೦ ಗಂಟೆಯಿAದ ನಿತ್ಯ ಪೂಜೆ, ಮಧ್ಯಾಹ್ನ ೧೨ ಗಂಟೆಗೆ ಮಹಾಪೂಜೆ, ನಂತರ ಸಂಜೆ ೩ ಗಂಟೆಗೆ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ನಡೆಯಲಿದೆ. ಸಂಜೆ ೫ ಗಂಟೆಗೆ ಉತ್ಸವ ಮೂರ್ತಿ ದರ್ಶನ, ಅವಭೃತ ಸ್ನಾನ, ರಾತ್ರಿ ಉತ್ಸವ ಮೂರ್ತಿ ದರ್ಶನ ನಂತರ ವಸಂತ ಪೂಜೆ ಜರುಗಲಿದೆ.

ತಾ.೫ ರಂದು ಬೆಳಿಗ್ಗೆ ೧೦.೩೦ಕ್ಕೆ ಕೊಡಿಮರ ಇಳಿಸುವುದು ಮತ್ತು ೧೧ ಗಂಟೆಗೆ ಎಂದಿನAತೆ ನಿತ್ಯ ಪೂಜೆ ಜರುಗಲಿದೆ.