ಮಡಿಕೇರಿ, ಮಾ. ೨: ಕನೆಕ್ಟಿಂಗ್ ಕೊಡವಾಸ್ ಟ್ರಸ್ಟ್ನ ವತಿಯಿಂದ ಪ್ರಥಮ ಬಾರಿಗೆ ಕೋಯಿಮೆ-೨೦೨೧ ಕೊಡವ ಸಾಂಸ್ಕೃತಿಕ ಮತ್ತು ಕಲಿಕಾ ಮಹೋತ್ಸವ ತಾ. ೬ ಮತ್ತು ೭ ರಂದು ಪೊನ್ನಂಪೇಟೆಯ ಚಿಕ್ಕಮಂಡೂರು ಗ್ರಾಮದ ಅಪ್ಪಚ್ಚಕವಿ ವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್ನ ಸಂಚಾಲಕ ಚೇಂದAಡ ಶಮ್ಮಿ ಮಾದಯ್ಯ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಕೊಡವ ಸಮುದಾಯದವರು ಪ್ರಪಂಚದ ಎಲ್ಲೆಡೆ ಉದ್ಯೋಗ, ಉದ್ಯಮ, ವಿದ್ಯಾಭ್ಯಾಸ ಸೇರಿದಂತೆ ನಾನಾ ಕಾರಣಗಳಿಂದ ನೆಲೆಯಾಗಿ ದ್ದಾರೆ. ಕೌಟುಂಬಿಕ ಹಾಕಿ ನೆಪದಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದರು. ಆದರೆ, ಕಳೆದೆರಡು ವರ್ಷದಿಂದ ಅನಿವಾರ್ಯ ಕಾರಣಗಳಿಂದ ಹಾಕಿ ಕ್ರೀಡಾ ಹಬ್ಬ ನಿಂತಿರುವುದು ವಿಷಾದನೀಯ. ಇಂತಹ ಸಂದರ್ಭ ದಲ್ಲಿ ಜನರನ್ನು ಒಗ್ಗೂಡಿಸುವ ಸಲುವಾಗಿ, ಕೊಡವ ಸಾಂಸ್ಕೃತಿಕ, ಕಲಿಕಾ ಹಬ್ಬ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಸಂಚಾಲಕ ಚೋಕಂಡ ಸೂರಜ್ ಸೋಮಯ್ಯ ಮಾತನಾಡಿ, ಜಿಲ್ಲೆಯ ಕೊಡವ ಸಮಾಜ, ಕೊಡವ ಕೇರಿ, ಸಂಘ, ಸಂಸ್ಥೆ, ಒಕ್ಕೂಟ, ಊರು, ಕುಟುಂಬ, ಹೀಗೆ ತಂಡ ರಚನೆಗೆ ಅವಕಾಶವಿದೆ. ಒಂದು ತಂಡ ಹೆಸರಿನಲ್ಲಿ ಒಮ್ಮೆ ಮಾತ್ರ ಭಾಗವಹಿಸಲು ಅವಕಾಶ ಮಾಡಲಾಗಿದೆ. ಪ್ರತಿಯೊಂದು ಸ್ಪರ್ಧೆಯಲ್ಲಿ ಭಾಗವಹಿಸಿ ಅಧಿಕ ಅಂಕ ಗಳಿಸುವ ತಂಡಕ್ಕೆ ಚಾಂಪಿಯನ್ ಪಟ್ಟ ನೀಡಲಾಗುವುದು. ವಿಶೇಷ ಪಾಂಡಿತ್ಯವಿರುವ ಕಲಾವಿದರು, ತೆರೆಮರೆಯ ಉದಯೋನ್ಮುಖ ಆಟ್, ಪಾಟ್, ಸಾಹಿತ್ಯ, ಕ್ರೀಡಾ ಕ್ಷೇತ್ರ, ಹೀಗೆ ವಿವಿಧ ಕ್ಷೇತ್ರದ ಪ್ರತಿಭೆ ಗುರುತಿಸಿ, ವೇದಿಕೆ ಕಲ್ಪಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ. ಜೊತೆಗೆ ಕೊಡವ ಬುಡಕಟ್ಟು ಜನಾಂಗದ ಪದ್ಧತಿಗಳ ಮೂಲ ಸ್ವರೂಪದ ಅನುಪಾಲನೆ ಮತ್ತು ಪುನಶ್ಚೇತನ ನೀಡುವುದಾಗಿದ್ದು, ಸುಮಾರು ೩೦೦೦ ಕ್ಕೂ ಅಧಿಕ ಸಮಾಜಬಾಂಧವರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಅಲ್ಲದೇ ಕಾರ್ಯಕ್ರಮ ದಲ್ಲಿ ಕೊಡವ ಪೂರ್ವಜರು ಉಪಯೋಗಿಸುತ್ತಿದ್ದ ಕೃಷಿ, ಕಲೆ, ಪರಿಕರಗಳು, ದಿನಬಳಕೆಯ ವಸ್ತುಗಳ ಸಂಗ್ರಹವನ್ನು ವಸ್ತು ಸಂಗ್ರಹಾಲ ಯದಲ್ಲಿ ಪ್ರದರ್ಶನಕ್ಕೆ ಇಡಲಾಗುವುದು ಎಂದು ತಿಳಿಸಿದರು.

ವಿವಿಧ ಸ್ಪರ್ಧೆ

ಮಹಿಳೆಯರ ವಿಭಾಗದಲ್ಲಿ ಉಮ್ಮತ್ತಾಟ್(೧೨+೨), ಕೊಡವ ತಿನಿಸು, ಗುಂಪು ನೃತ್ಯ, ರಸಪ್ರಶ್ನೆ ಸ್ಪರ್ಧೆ ಆಯೋಜಿಸಲಾಗಿದೆ. ಪುರುಷರ ವಿಭಾಗದಲ್ಲಿ ಬೊಳ್‌ಕಾಟ್(೧೨+೪), ಕೋಲಾಟ್(೧೨+೪), ಬಾಳೊಪಾಟ್, ಕತ್ತಿಯಾಟ್(೧೨+೪, ಪರೆಯಕಳಿ (೨ಜನ), ತಾಲಿಪಾಟ್(೪ ಜನ), ಸಮ್ಮಂಧ ಅಡ್‌ಕ್‌ವೊ ಸ್ಪರ್ಧೆ ನಡೆಯಲಿದೆ. ಮಕ್ಕಳ ವಿಭಾಗದಲ್ಲಿ ಕಪ್ಪೆಯಾಟ್ ನಡೆಯಲಿದೆ. ಪುರುಷ ಮತ್ತು ಮಹಿಳೆಯರಿಗಾಗಿ ಕೊಡವ ಹಾಡು (ಸ್ವರ್ಗೀಯ ಕೊಡವ ಸಾಹಿತಿಗಳ ರಚನೆ, ಪ್ರಾಚೀನ ವಸ್ತು ಸಂಗ್ರಹ (ಕೊಡವಾಮೆಗೆ ಸಂಬAಧ ಪಟ್ಟಂತೆ), ವಾಲಗತ್ತಾಟ್, ಕಥೆ ಹೇಳುವುದು (ಸ್ವಂತ ರಚನೆ, ವೀರ ಶೂರ್ರ ಕತೆ, ಮಕ್ಕಳ ಕಥೆ, ಕಾಲ್ಪನಿಕ ಕಥೆ, ತೆಂಗಿನಕಾಯಿ ಎಸೆತ, ಬಿಲ್ಲು ಬಾಣ(ಅಂಬು ಬಿಲ್‌ಲ್), ಆಶು ಭಾಷಣ, ಪ್ರಬಂಧ (ನಿಂತು ಹೋಗಿರುವ ಕೊಡವರ ಮೂಲ ಪದ್ದತಿ), ಮಿಸ್ಟರ್ ಮತ್ತು ಮಿಸ್ಸಸ್ ಕೊಯಿಮೆ, ಆದರ್ಶ ದಂಪತಿ (೬೦ ವಯಸ್ಸಿನ ಕೆಳಗಿನವರು), ಆದರ್ಶ ದಂಪತಿ-ವಯಸ್ಕರ ವಿಭಾಗ(೬೦ ವಯಸ್ಸಿನ ಮೇಲ್ಪಟ್ಟವರು), ಚಿತ್ರಬಿಡಿಸುವ ಸ್ಪರ್ಧೆ, ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ಆಯೋಜಿಸಲಾಗಿದೆ ಎಂದರು. ಗೋಷ್ಠಿಯಲ್ಲಿ ಸಂಚಾಲಕರಾದ ಶಾಂತೆಯAಡ ನಿರನ್ ನಾಚಪ್ಪ, ಕೇಲೇಟಿರ ಪವಿತ್ ಪೂವಯ್ಯ ಇದ್ದರು.