ಮಡಿಕೇರಿ, ಮಾ. ೨: ಶಾಲಾ-ಕಾಲೇಜುಗಳು ಸೌಂದರ್ಯ ಸ್ಪರ್ಧೆ ನಡೆಸಲು ತಲೆಕೆಡಿಸಿಕೊಂಡಷÀÄ್ಟ ಹಾಗೂ ಕಾಲೇಜು ವಿದ್ಯಾರ್ಥಿಗಳು ವ್ಯಾಲೆಂಟೈನ್ ಡೇ ಆಚರಿಸಿ ಪಡುವ ಸಂಭ್ರಮದಷ್ಟು ರಾಷ್ಟಿçÃಯ ವಿಜ್ಞಾನ ದಿನಾಚರಣೆಗೆ ಮಹತ್ವವಿಲ್ಲದಂತಾಗಿದೆ. ಇವುಗಳ ನಡುವೆ ಫೆಬ್ರವರಿ ಕೊನೆಯಲ್ಲಿ ಬರುವ ರಾಷ್ಟಿçÃಯ ವಿಜ್ಞಾನ ದಿನದ ಆಚರಣೆ ಮರೆತು ಹೋದಂತಿದೆ. ಆದರೆ, ಸ. ಕಿ. ಪ್ರಾ. ಶಾಲೆ ಮುಳ್ಳೂರುವಿನಲ್ಲಿ ರಾಷ್ಟಿçÃಯ ವಿಜ್ಞಾನ ದಿನವನ್ನು ಎರಡು ದಿನಗಳ ಕಾಲ ವಿವಿಧ ಕಾರ್ಯಕ್ರಮ ಗಳನ್ನು ಆಯೋಜಿಸುವುದರ ಮೂಲಕ ಹಿರಿಯ ವಿದ್ಯಾರ್ಥಿಗಳಿಗೆ ಮಾದರಿ ಯಾಗಿ ಮಾಡಿದ್ದಾರೆ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು.
ಮುಖ್ಯೋಪಾಧ್ಯಾಯ ಮಂಜುನಾಥ್ ಟಿ. ಈ. ಜ್ಯೋತಿ ಬೆಳಗಿಸುವುದರ ಮೂಲಕ ಮೊದಲ ದಿನದ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು. ಮುಳ್ಳೂರು ಪ್ರಾಥಮಿಕ ಶಾಲೆಯಲ್ಲಿ ಪ್ರತಿ ವರ್ಷ ರಾಷ್ಟಿçÃಯ ವಿಜ್ಞಾನ ದಿನಾಚರಣೆಯ ಚಟುವಟಿಕೆ ಗಳನ್ನು ಒಂದು ನಿರ್ದಿಷ್ಟ ವಿಷಯದ ಸುತ್ತ ಆಯೋಜಿಸಲಾಗುತ್ತದೆ. ಈ ಬಾರಿ ಶಿಕ್ಷಕ ಸತೀಶ್ ಪರಿಸರದೊಂದಿಗೆ ವಿಜ್ಞಾನ ಎಂಬ ವಿನೂತನ ಶೀರ್ಷಿಕೆ ಯಡಿಯಲ್ಲಿ ಕಾರ್ಯಕ್ರಮಗಳನ್ನು ಅರ್ಥಪೂರ್ಣವಾಗಿ ಆಯೋಜಿಸಿ ವಿದ್ಯಾರ್ಥಿಗಳಲ್ಲಿ ವಿಜ್ಞಾನ ದಿನದ ಮಹತ್ವದ ಅರಿವು ಮೂಡಿಸುವಲ್ಲಿ ಸಫಲರಾದರು. ರಾಷ್ಟಿçÃಯ ವಿಜ್ಞಾನ ದಿನದ ಅಂಗವಾಗಿ ಶಾಲೆಯಲ್ಲಿ ವಿಜ್ಞಾನ ದಿನಾಚರಣೆಯ ಚಟುವಟಿಕೆ ಗಳನ್ನು ಒಂದು ನಿರ್ದಿಷ್ಟ ವಿಷಯದ ಸುತ್ತ ಆಯೋಜಿಸಲಾಗುತ್ತದೆ. ಈ ಬಾರಿ ಶಿಕ್ಷಕ ಸತೀಶ್ ಪರಿಸರದೊಂದಿಗೆ ವಿಜ್ಞಾನ ಎಂಬ ವಿನೂತನ ಶೀರ್ಷಿಕೆ ಯಡಿಯಲ್ಲಿ ಕಾರ್ಯಕ್ರಮಗಳನ್ನು ಅರ್ಥಪೂರ್ಣವಾಗಿ ಆಯೋಜಿಸಿ ವಿದ್ಯಾರ್ಥಿಗಳಲ್ಲಿ ವಿಜ್ಞಾನ ದಿನದ ಮಹತ್ವದ ಅರಿವು ಮೂಡಿಸುವಲ್ಲಿ ಸಫಲರಾದರು. ರಾಷ್ಟಿçÃಯ ವಿಜ್ಞಾನ ದಿನದ ಅಂಗವಾಗಿ ಶಾಲೆಯಲ್ಲಿ ಪರಿಸರವನ್ನು ಅರಿಯಬೇಕಾಗಿದೆ. ವಿದ್ಯಾರ್ಥಿಗಳು ಪರಿಸರದೊಂದಿಗೆ ಸೂಕ್ಷö್ಮವಾಗಿ ಬೆರೆತಾಗ ಮಾತ್ರ ಅವರಲ್ಲಿ ಇಡೀ ಭೂಮಂಡಲದ ಒಂದು ವ್ಯವಸ್ಥಿತ ಜೀವಜಾಲದ ಅರಿವು ಬರಲು ಸಾಧ್ಯ. ವಿದ್ಯಾರ್ಥಿಗಳಲ್ಲಿ ಕುತೂಹಲ ಹೆಚ್ಚಬೇಕು, ಅವರು ಪರಿಸರವನ್ನು ನೋಡುವ ದೃಷ್ಟಿಕೋನ ಬದಲಾಗಬೇಕು. ಆಗ ಮಾತ್ರ ಸಂಶೋಧನಾತ್ಮಕ ಚಿಂತನೆಗಳು, ಪ್ರವೃತ್ತಿ ಗಳು ಬೆಳೆಯುತ್ತದೆ ಎಂದು ತಿಳಿಸಿದರು.