*ಗೋಣಿಕೊಪ್ಪಲು, ಮಾ. ೨: ಹಾತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂದಾ, ಈಚೂರು ಗ್ರಾಮದಲ್ಲಿ ಸುಮಾರು ೯೮ ಲಕ್ಷ ಅನುದಾನದ ರಸ್ತೆ ಡಾಂಬರೀಕರಣ ಕಾಮಗಾರಿಗಳು ವಿಘ್ನವಿಲ್ಲದೇ ನೆರವೇರಲು ಶಾಸಕ ಕೆ.ಜಿ. ಬೋಪಯ್ಯ ಅವರು ಅಯ್ಯಪ್ಪ, ಭದ್ರಕಾಳಿ, ಜ್ಞಾನಲಕ್ಷಿ÷್ಮ, ನರಸಿಂಹ ಸ್ವಾಮಿ ದೇವಸ್ಥಾನಕ್ಕೆ ತೆರಳುವ ದಾರಿಗೆ ಅಕ್ಷತೆ ಹಾಕಿ ಪ್ರಾರ್ಥಿಸಿದರು.
ಡೋಬಿ ಕಾಲೋನಿ ರಸ್ತೆ ಅಭಿವೃದ್ಧಿಗೆ ರೂ. ೧೦ ಲಕ್ಷ, ಕುಂದಾ ಶಾಲೆ ಸಮೀಪದ ನಾಡುಗುಂಡಿ ಸಂಪರ್ಕ ರಸ್ತೆ ರೂ. ೮ ಲಕ್ಷ, ಕುಂದಾ, ಕೈಮುಡಿಕೆ ರಸ್ತೆ ಅಭಿವೃದ್ಧಿಗೆ ರೂ. ೧೦ ಲಕ್ಷ ಹಾಗೂ ದಬ್ಬೆತಿರಿಕೆ ದೇವಸ್ಥಾನ ರಸ್ತೆ ಅಭಿವೃದ್ಧಿಗೆ ರೂ. ೨೫ ಲಕ್ಷ, ದೇವಸ್ಥಾನಕ್ಕೆ ತೆರಳುವ ದಾರಿಗೆ ಅಕ್ಷತೆ ಹಾಕಿ ಪ್ರಾರ್ಥಿಸಿದರು.
ಡೋಬಿ ಕಾಲೋನಿ ರಸ್ತೆ ಅಭಿವೃದ್ಧಿಗೆ ರೂ. ೧೦ ಲಕ್ಷ, ಕುಂದಾ ಶಾಲೆ ಸಮೀಪದ ನಾಡುಗುಂಡಿ ಸಂಪರ್ಕ ರಸ್ತೆ ರೂ. ೮ ಲಕ್ಷ, ಕುಂದಾ, ಕೈಮುಡಿಕೆ ರಸ್ತೆ ಅಭಿವೃದ್ಧಿಗೆ ರೂ. ೧೦ ಲಕ್ಷ ಹಾಗೂ ದಬ್ಬೆತಿರಿಕೆ ದೇವಸ್ಥಾನ ರಸ್ತೆ ಅಭಿವೃದ್ಧಿಗೆ ರೂ. ೨೫ ಲಕ್ಷ, ಅಭಿವೃದ್ಧಿ ಕಾಮಗಾರಿಗೆ ಸದ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಶಾಸಕರು ಮಾಹಿತಿ ನೀಡಿದರು.
ಈ ಸಂದರ್ಭ ಪೊನ್ನಂಪೇಟೆ, ವೀರಾಜಪೇಟೆ ತಾಲೂಕಿನ ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿ ಅಧ್ಯಕ್ಷ ಕಾಡ್ಯಮಾಡ ಗಿರೀಶ್‌ಗಣಪತಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಮನೆಯಪಂಡ ಕಾಂತಿ ಸತೀಶ್, ಹಾತೂರು ಗ್ರಾ.ಪಂ. ಸದಸ್ಯ ಗುಮ್ಮಟೀರ ದರ್ಶನ್, ಶಾಸಕರ ಆಪ್ತ ಕಾರ್ಯದರ್ಶಿ ಮಲ್ಲಂಡ ಮದುದೇವಯ್ಯ, ಜಿ.ಪಂ. ಇಂಜಿನಿಯರ್ ಮಹದೇವ್, ಗ್ರಾಮೀಣ ಕುಡಿಯುವ ನೀರು ಅಭಿವೃದ್ಧಿ ಇಲಾಖೆ ಇಂಜಿನಿಯರ್ ಯೋಗೇಶ್ ಗೌಡ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.