ಮಡಿಕೇರಿ, ಮಾ. ೨: ಭಾಗಮಂಡಲದ ದಿ. ಜೋಗಿ ತಿಮ್ಮಪ್ಪ ಮತ್ತು ಅಕ್ಕಮ್ಮ ಅವರ ಪುತ್ರ ಜೆ.ಟಿ. ಸುಂದರ ಅವರಿಗೆ ಅರಣ್ಯ ಇಲಾಖೆಯಲ್ಲಿ ಸರಕಾರ ವಲಯ ಅರಣ್ಯಾಧಿಕಾರಿಯಾಗಿ ಬಡ್ತಿ ನೀಡಿದೆ.
ಸುಬ್ರಹ್ಮಣ್ಯ ವಲಯ ಅರಣ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಸುಂದರ ಅವರು ಬಡ್ತಿ ಹಿನ್ನೆಲೆಯಲ್ಲಿ ನೆಟ್ಟನ್ ಟಿಂಬರ್ ಡಿಪೋದಲ್ಲಿ ವಲಯ ಅರಣ್ಯಾಧಿ ಕಾರಿಯಾಗಿ ನೇಮಕಗೊಂಡಿದ್ದಾರೆ.