ಶ್ರೀಮಂಗಲ, ಮಾ. ೨ : ಮಂಗಳವಾರ ಮುಂಜಾನೆ ದ.ಕೊಡಗಿನಲ್ಲಿ ದಟ್ಟವಾದ ಮಂಜು ಕವಿದ ವಾತಾವರಣ ಕಂಡು ಬಂತು. ೩೦-೪೦ ಅಡಿ ದೂರದ ಅಂತರದಲ್ಲಿ ಏನಿದೆ ಎಂದು ಗೋಚರಿಸದಷ್ಟು ಮಂಜು ಕವಿದಿತ್ತು. ಇದು ಬೆಳಿಗ್ಗೆ ೮ ಗಂಟೆವರೆಗೂ ಕೆಲವೆಡೆ ಕಂಡು ಬಂತು.
ದ.ಕೊಡಗಿನ ರಸ್ತೆಗಳಲ್ಲಿ ವಾಹನ ಸಂಚಾರ ಬೆಳಗ್ಗಿನ ಜಾವ ಮಂಜು ಕವಿದ ವಾತಾವರಣದಿಂದ ಲೈಟ್ ಹಾಕಿ ಸಂಚರಿಸಿದ್ದು ಗೋಚರಿಸಿತು.