*ಗೋಣಿಕೊಪ್ಪಲು, ಮಾ. ೨: ಹಾತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವೇಶ್ವರ ಬಡಾವಣೆಯ ೧೧೬ ಕುಟುಂಬಗಳಿಗೆ ಮನೆ ನಿರ್ಮಿಸಿಕೊಡಬೇಕೆಂದು ಒತ್ತಾಯಿಸಿ ಜಿಲ್ಲಾ ಬುಡಕಟ್ಟು ಕಾರ್ಮಿಕ ಸಂಘದ ವತಿಯಿಂದ ಅಹೋರಾತ್ರಿ ಧರಣಿ ಯನ್ನು ಪೊನ್ನಂಪೇಟೆ ಕಾರ್ಯನಿರ್ವಹಣಾಧಿಕಾರಿ ಕಚೇರಿ ಯ ಮುಂಭಾಗ ನಡೆಸಲಾಗುತ್ತಿದೆ. ಬಡಾವಣೆಯ ನಿವಾಸಿಗಳಿಗೆ ಹಕ್ಕುಪತ್ರ ನೀಡಿ ೫ ವರ್ಷ ಕಳೆದರೂ ಮನೆ ನಿರ್ಮಿಸಿಕೊಡಲು ಸಾಧ್ಯ ವಾಗಿಲ್ಲ. ಮಳೆಗಾಲಕ್ಕೆ ಮೂರು ತಿಂಗಳು ಸಮೀಪವಿದ್ದು, ಈ ಭಾಗದಲ್ಲಿ ವಾಸಿಸಲು ಆತಂಕ ಎದುರಾಗಿದೆ. ಜೋಪಡಿಗಳಲ್ಲಿ ವಾಸಿಸುತ್ತಿರುವು ದರಿಂದ ನೀರು ಮತ್ತು ಕ್ರಿಮಿಕೀಟಗಳು ಗುಡಿಸಲಿನ ಒಳನುಗ್ಗುತ್ತಿವೆ. ಇದರಿಂದ ವಾಸಿಸಲು ಸಾಧ್ಯವಾಗುತ್ತಿಲ್ಲ. ತಕ್ಷಣವೇ ಮನೆ ನಿರ್ಮಿಸಿಕೊಡಬೇಕೆಂದು ಈ ಸಂದರ್ಭ ಬುಡಕಟ್ಟು ಕಾರ್ಮಿಕ ಸಂಘದ ಸಂಚಾಲಕ ಗಪುö್ಪ ಒತ್ತಾಯಿಸಿದ್ದಾರೆ.