ಮಡಿಕೇರಿ, ಮಾ. ೧: ಸೋಮವಾರಪೇಟೆ ತಾಲೂಕಿನ ಹರದೂರು ಗ್ರಾಮ ಪಂಚಾಯಿತಿಯ ಗ್ರಾಮಸಭೆಯು ತಾ. ೪ ರಂದು ಬೆಳಿಗ್ಗೆ ಗ್ರಾ.ಪಂ. ಕಚೇರಿ ಸಭಾಂಗಣದಲ್ಲಿ ನಡೆಯಲಿದೆ. ಗ್ರಾ.ಪಂ. ಅಧ್ಯಕ್ಷ ಬಿ.ಡಿ. ಪದ್ಮನಾಭ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭೆಯಲ್ಲಿ ಆಹ್ವಾನಿತರಾಗಿ ಜಿ.ಪಂ. ಸದಸ್ಯೆ ಕುಮುದಾ ಧರ್ಮಪ್ಪ, ಗ್ರಾ.ಪಂ. ಸದಸ್ಯ ಮಣಿ, ನೋಡಲ್ ಅಧಿಕಾರಿಯಾಗಿ ಸುಂಟಿಕೊಪ್ಪ ಕೃಷಿ ಅಧಿಕಾರಿ ಬೋಪಯ್ಯ ಪಾಲ್ಗೊಳ್ಳುವರೆಂದು ಅಭಿವೃದ್ಧಿ ಅಧಿಕಾರಿ ತಿಳಿಸಿದ್ದಾರೆ.