ಮಡಿಕೇರಿ, ಮಾ. ೧ ಸಮೀಪದ ಕಿಗ್ಗಾಲು ಗ್ರಾಮದ ಶ್ರೀ ಕಿಗ್ಗಾಲು ಭಗವತಿ ದೇವರ ನಾಲ್ಕನೇ ವಾರ್ಷಿಕ ಮಹಾಪೂಜೆಯು ಶ್ರದ್ಧಾಭಕ್ತಿಯಿಂದ ಜರುಗಿತು. ಪೂಜೆಯ ಅಂಗವಾಗಿ ಗಣಪತಿ ಹೋಮ, ಪುಣ್ಯಾಹವಾಚನ , ಅಲಂಕಾರ ಪೂಜೆ ಹಾಗೂ ಮಹಾಪೂಜೆಗಳು ನಡೆದವು. ಸುತ್ತಮುತ್ತಲಿನಿಂದ ಆಗಮಿಸಿದ್ದ ಭಕ್ತಾಧಿಗಳಿಗೆ ಅಪರಾಹ್ನ ಅನ್ನಸಂತರ್ಪಣೆ ನಡೆಸಲಾಯಿತು.