.jpg)
ಗೋಣಿಕೊಪ್ಪಲು, ಫೆ. ೨೮: ಊಟ ನಿದ್ದೆ ಬಿಟ್ಟು ಸಮವಸ್ತç ಧರಿಸಿ ಕಾರ್ಯಾಚರಣೆಗಿಳಿದ ಅರಣ್ಯ ಸಿಬ್ಬಂದಿಗಳು, ಹೇಗಾದರೂ ಸರಿ ಹುಲಿಯನ್ನು ಸೆರೆಹಿಡಿಯಲೇ ಬೇಕೆಂಬ ಹಠತೊಟ್ಟ ಹಿರಿಯ ಅಧಿಕಾರಿಗಳು, ಅಭಿಮನ್ಯುವಿನ ಮೇಲೆ ಕುಳಿತ ಅರವಳಿಕೆ ತಜ್ಞರು, ಕಾಡು, ಮೇಡು, ಕಾಫಿ ತೋಟದಲ್ಲಿ ಸಂಚಾರ ಮಾಡಿದರೂ ಹುಲಿ ಮಾತ್ರ ಕಣ್ಣಿಗೆ ಬೀಳುತ್ತಿಲ್ಲ ಇಂತಹ ದೃಶ್ಯಗಳು ಟಿ.ಶೆಟ್ಟಿಗೇರಿ ಸಮೀಪದಲ್ಲಿ ಪ್ರತಿದಿನ ಕಾಣಸಿಗುತ್ತವೆ.ಕಳೆದ ಶನಿವಾರದಿಂದ ಆರಂಭಗೊAಡ ಹುಲಿ ಸೆರೆಯ ಕಾರ್ಯಾಚರಣೆ ಇನ್ನೂ ಕೂಡ ಫಲಿತಾಂಶ ನೀಡಿಲ್ಲ. ಹಾಗೆÀಂದ ಮಾತ್ರಕ್ಕೆ ಸಿಬ್ಬಂದಿಗಳು ಹಾಗೂ ಅಧಿಕಾರಿಗಳು ಬೇಸರಗೊಂಡಿಲ್ಲ. ಹುಲಿಯನ್ನು ಹಿಡಿಯಲೇ ಬೇಕೆನ್ನುವ ನಿಟ್ಟಿನಲ್ಲಿ ಟಿ.ಶೆಟ್ಟಿಗೇರಿ ಬಳಿಯಲ್ಲಿ ತಾತ್ಕಾಲಿಕ ಶೆಡ್ ತೆರೆದು ಅಲ್ಲಿಯೇ ಕಚೇರಿ ಆರಂಭಿಸಿದ್ದಾರೆ. ಪ್ರತಿದಿನ ೧೫೦ ಟಿ.ಶೆಟ್ಟಿಗೇರಿ ಸಮೀಪದಲ್ಲಿ ಪ್ರತಿದಿನ ಕಾಣಸಿಗುತ್ತವೆ.ಕಳೆದ ಶನಿವಾರದಿಂದ ಆರಂಭಗೊAಡ ಹುಲಿ ಸೆರೆಯ ಕಾರ್ಯಾಚರಣೆ ಇನ್ನೂ ಕೂಡ ಫಲಿತಾಂಶ ನೀಡಿಲ್ಲ. ಹಾಗೆÀಂದ ಮಾತ್ರಕ್ಕೆ ಸಿಬ್ಬಂದಿಗಳು ಹಾಗೂ ಅಧಿಕಾರಿಗಳು ಬೇಸರಗೊಂಡಿಲ್ಲ. ಹುಲಿಯನ್ನು ಹಿಡಿಯಲೇ ಬೇಕೆನ್ನುವ ನಿಟ್ಟಿನಲ್ಲಿ ಟಿ.ಶೆಟ್ಟಿಗೇರಿ ಬಳಿಯಲ್ಲಿ ತಾತ್ಕಾಲಿಕ ಶೆಡ್ ತೆರೆದು ಅಲ್ಲಿಯೇ ಕಚೇರಿ ಆರಂಭಿಸಿದ್ದಾರೆ. ಪ್ರತಿದಿನ ೧೫೦ ತೊಡಗಿಸಿಕೊಂಡಿದ್ದಾರೆ.
ಎAಟು ತಂಡಗಳಲ್ಲಿ ಕಾರ್ಯಾಚರಣೆ ನಡೆಯುತ್ತಿದ್ದು ಸುತ್ತಮುತ್ತಲಿನ ಅರಣ್ಯ, ಕಾಫಿ ತೋಟವನ್ನು ಈಗಾಗಲೇ ಎರಡು ಮೂರು ಬಾರಿ ಕಾರ್ಯಾಚರಣೆ ನಡೆಸಲಾಗಿದೆ. ಬೆಂಗಳೂರಿನ ಪಿಸಿಸಿಎಫ್ ವಿಜಯ್ ಕುಮಾರ್ ಗೋಗಿ ಕ್ಯಾಂಪ್ಗೆ ಆಗಮಿಸಿ ಸಿಬ್ಬಂದಿಗಳಿಗೆ, ಅಧಿಕಾರಿಗಳಿಗೆ ಧೈರ್ಯ ತುಂಬಿ ಕಾರ್ಯಾಚರಣೆ ಯಶಸ್ವಿಯಾಗಿಸುವಂತೆ ಸೂಚನೆ ನೀಡಿ ತೆರಳಿದ್ದಾರೆ. ಹುಲಿ ಕಾರ್ಯಾಚರಣೆಗೆ ಸಹಾಯ ವಾಗಲೂ ಬಂಡೀಪುರ ದಿಂದ ಅರಣ್ಯ ಇಲಾಖೆಯ ಪರಿಣಿತ 'ರಾಣಾ' ಶ್ವಾನವನ್ನು ಕರೆಸಿಕೊಳ್ಳ ಲಾಗಿದ್ದು ಹುಲಿಯ ಜಾಡನ್ನು ಕಂಡುಹಿಡಿಯುವ ವಿಶೇಷ ಪ್ರಯತ್ನ ಕೂಡ ನಡೆಯುತ್ತಿದೆ. ಕಳೆದ ಮೂರು ದಿನಗಳಿಂದ ಹುಲಿಯು ಸುತ್ತಮುತ್ತಲಿನ ರೈತರ ಯಾವುದೇ ಜಾನುವಾರುಗಳ ಮೇಲೆ ದಾಳಿ ನಡೆಸಿದ ಬಗ್ಗೆ ವರದಿಯಾಗಿಲ್ಲ.
ಹುಲಿ ಕಾರ್ಯಾಚರಣೆ ತಂಡ ಬಹುತೇಕ ಪ್ರದೇಶದಲ್ಲಿ ತನ್ನ ಕಾರ್ಯಾಚರಣೆ ಚುರುಕುಗೊಳಿಸಿರುವು ದರಿಂದ ಹುಲಿ ಅರಣ್ಯ ಸೇರಿರಬಹುದೇ.? ಎಂದು ಅಂದಾಜಿಸಲಾಗಿದೆ. ಅಳವಡಿಸಿರುವ ಕ್ಯಾಮರಾಗಳಲ್ಲಿಯೂ ಕೂಡ ಹುಲಿ ಸಂಚಾರದ ಸುಳಿವು ಸೆರೆ ಆಗುತ್ತಿಲ್ಲ. ಪ್ರತಿ ಕ್ಯಾಮರಾಗಳ ದೃಶ್ಯಗಳನ್ನು ಕಂಪ್ಯೂಟರ್ ಮೂಲಕ ಪ್ರತಿದಿನ ವೀಕ್ಷಣೆ ಮಾಡಲಾಗುತ್ತಿದೆ.
(ಮೊದಲ ಪುಟದಿಂದ) ಹಸುವನ್ನು ತಿಂದು ತೆರಳಿದ ಪ್ರದೇಶದಲ್ಲಿ ಹುಲಿ ಮತ್ತೆ ಬರಬಹುದು ಎಂಬ ನಿರೀಕ್ಷೆ ಇಟ್ಟುಕೊಂಡು ತೆರಳುವ ಕಾರ್ಯಾಚರಣೆ ತಂಡಕ್ಕೆ ನಿರಾಶೆ ಎದುರಾಗುತ್ತಿದೆ. ಒಟ್ಟಿನಲ್ಲಿ ಊಟ, ನಿದ್ದೆ ಬಿಟ್ಟು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು, ಸಿಬ್ಬಂದಿಗಳು, ಸಾಕಾನೆಗಳು ಸತತ ಕಾರ್ಯಾಚರಣೆ ನಡೆಸಿದರೂ ಫಲಿತಾಂಶ ಮಾತ್ರ ನಿರೀಕ್ಷಿತ ಮಟ್ಟದಲ್ಲಿ ಸಿಗುತ್ತಿಲ್ಲ.
ರೈತರು ತಮ್ಮ ಕೊಟ್ಟಿಗೆಯಲ್ಲಿ ಸಾಕಿರುವ ಜಾನುವಾರುಗಳನ್ನು ರಕ್ಷಣೆ ಮಾಡುವ ಸಲುವಾಗಿ ಇಲಾಖೆ ಸಿಬ್ಬಂದಿಗಳ ತಂಡ ಸುತ್ತಮುತ್ತಲಿನ ಎರಡು ಕಿ.ಮೀ. ನಲ್ಲಿರುವ ರೈತರ ಜಾನುವಾರು ಕೊಟ್ಟಿಗೆಯನ್ನು ಕಾವಲು ಕಾಯುತ್ತಿದ್ದಾರೆ. ಈ ಭಾಗದಲ್ಲಿ ಕಾಡು ಹಂದಿಗಳು ಅಧಿಕವಾಗಿರುವ ಹಿನ್ನೆಲೆಯಲ್ಲಿ ಇವನ್ನು ಹುಲಿಯು ಬೇಟೆಯಾಡಿ ತಿನ್ನುವ ಮೂಲಕ ತನ್ನ ಹೊಟ್ಟೆ ತುಂಬಿಸಿಕೊಳ್ಳುತ್ತಿವೆ ಹಾಗಾಗಿ ಜಾನುವಾರುಗಳ ಬಳಿ ತೆರಳುವುದು ಕಡಿಮೆಯಾಗಿದೆ ಎಂದು ಅಂದಾಜು ಮಾಡಲಾಗಿದೆ. ಕೊಟ್ಟಿಗೆ ಇಲ್ಲದ ರೈತರ ಜಾನುವಾರುಗಳನ್ನು ಒಟ್ಟಾಗಿ ಒಂದೇ ಜಾಗದಲ್ಲಿ ಕಟ್ಟುವ ಮೂಲಕ ಜಾನುವಾರುಗಳ ರಕ್ಷಣೆಗೆ ಆದ್ಯತೆ ನೀಡಲಾಗಿದೆ.
.jpg)