ಚೆಟ್ಟಳ್ಳಿ, ಮಾ. ೧: ಇತಿಹಾಸ ಪ್ರಸಿದ್ಧವಾದ ಚೆಟ್ಟಳ್ಳಿ ಚೇರಳ ಶ್ರೀ ಭಗವತಿ ವಾರ್ಷಿಕೋತ್ಸವವು ತಾ. ೫ ರಿಂದ ನಡೆಯಲಿದ್ದು, ತಾ. ೭ ರಂದು ದೊಡ್ಡಹಬ್ಬ ನಡೆಯಲಿದೆ ಎಂದು ದೇವತಕ್ಕರಾದ ಚೇರಳ ತಮ್ಮಂಡ ಆನಂದ ತಿಳಿಸಿದ್ದಾರೆ.

ತಾ. ೨ ರಂದು (ಇಂದು) ಬೆಳಿಗ್ಗೆ ಊರಿವರು ಸೇರಿ ಬೊಳಕ್ ಮರವನಿಟ್ಟು ಕೊಂಬನ್ನು ಒಪ್ಪಿಸುವುದು, ತಾ. ೩ ರಂದು ಬೆಳಿಗ್ಗೆ ೬ ಗಂಟೆಗೆ ಕೊಂಬಾಟ್ ನೃತ್ಯ, ತಾ. ೫ ರಂದು ಪಟ್ಟಣಿ ಹಬ್ಬ, ಮಧ್ಯಾಹ್ನ ೧೧ ಗಂಟೆಗೆ ಚೌಂಡಿ ಬನಕ್ಕೆ ಕಲಾಡ್ಚ ಹೋಗುವುದು, ಮಧ್ಯಾಹ್ನ ೨.೩೦ಕ್ಕೆ ದೇವತಕ್ಕರಾದ ಚೇರಳತಮ್ಮಂಡ ಆನಂದ ಅವರ ಮನೆಯಿಂದ ದೇವರ ಭಂಡಾರ ತರುವುದು, ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಭಂಡಾರವನ್ನು ದೇವತಕ್ಕರ ಮನೆಗೆ ಕೊಂಡೊಯ್ಯುವುದು. ತಾ. ೬ ರಂದು ಅಯ್ಯಪ್ಪ ಬನದಲ್ಲಿ ಪೂಜೆ ಸಲ್ಲಿಸಿ, ದೇವಾಲಯದಲ್ಲಿ ಪೂಜೆ ಸಲ್ಲಿಸಿ ತೆಂಗಿನಕಾಯಿಗೆ ಗುಂಡು ಹೊಡೆದು ಪಟ್ಟಣಿ ನಿಲ್ಲಿಸುವುದು.

ತಾ. ೭ ರಂದು ವಾರ್ಷಿಕೋತ್ಸವದ ದೊಡ್ಡಹಬ್ಬ. ಮಧ್ಯಾಹ್ನ ೨.೩೦ಕ್ಕೆ ದೇವತಕ್ಕರಾದ ಚೇರಳತಮ್ಮಂಡ ಆನಂದ ಅವರ ಮನೆಯಿಂದ ಊರಿನವರು ದುಡಿಕೊಟ್ಟ್ ಹಾಡು, ಒಡ್ಡೋಲಗದೊಂದಿಗೆ ಭಂಡಾರವನ್ನು ದೇವಾಲಯಕ್ಕೆ ತರುವುದು. ಮೇದರ ಡೋಲಿನಕೊಟ್ಟ್ಗೆ ಸಾಂಪ್ರದಾಯದ ಉಡುಪಿನೊಂದಿಗೆ ಊರಿನವರು ವಿವಿಧ ಕೊಂಬಾಟ್ ನೃತ್ಯಮಾಡುವರು. ಸಂಜೆ ದೇವಾಲಯದಲ್ಲಿ ವಿಶೇಷ ಪೂಜೆ ಹಾಗೂ ಶುದ್ಧ ಕಳಶÀವಾಗಿ ದೇವರ ಭಂಡಾರವನ್ನು ದೇವತಕ್ಕರ ಮನೆಗೆ ಒಪ್ಪಿಸುವ ದೇವತಾ ಕಾರ್ಯಗಳು ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.