ಲಸಿಕೆ ಪಡೆದ ಪ್ರಧಾನಿ : ಕೋವಿಡ್ ಮುಕ್ತ ಭಾರತ ನಿರ್ಮಾಣಕ್ಕೆ ಕರೆ
ನವದೆಹಲಿ, ಮಾ. ೧: ದೇಶಾದ್ಯಂತ ಕೋವಿಡ್-೧೯ ಸಾಂಕ್ರಾಮಿಕ ವಿರುದ್ಧ ಹೋರಾಡಲು ಮತ್ತೊಂದು ಸುತ್ತಿನ ಲಸಿಕಾ ಅಭಿಯಾನ ಆರಂಭವಾಗಿದೆ. ಅದಕ್ಕೂ ಮುನ್ನ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಬೆಳಗ್ಗೆ ಲಸಿಕೆ ಅಭಿಯಾನದಲ್ಲಿ ಕೋವಿಡ್-೧೯ ಲಸಿಕೆಯ ಮೊದಲ ಡೋಸ್ ಹಾಕಿಸಿಕೊಂಡಿದ್ದಾರೆ. ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಇಂದು ಬೆಳಗ್ಗೆ ಪುದುಚೆರಿಯ ಸಿಸ್ಟರ್ ಪಿ. ನಿವೇದಿತಾ ಅವರು ಭಾರತ್ ಬಯೋಟೆಕ್ ಕಂಪೆನಿ ಅಭಿವೃದ್ಧಿಪಡಿಸಿರುವ ಕೊವಾಕ್ಸಿನ್ ಲಸಿಕೆಯನ್ನು ಪ್ರಧಾನಿ ಮೋದಿಯವರಿಗೆ ಹಾಕಿದ್ದಾರೆ. ಲಸಿಕೆ ಹಾಕಿಸಿಕೊಂಡ ಬಳಿಕ ಟ್ವೀಟ್ ಮಾಡಿರುವ ಪ್ರಧಾನಿ, ಕೋವಿಡ್-೧೯ ವಿರುದ್ಧ ಜಾಗತಿಕ ಮಟ್ಟದಲ್ಲಿ ಹೋರಾಡಲು ಸಮಯಕ್ಕೆ ಸರಿಯಾಗಿ ಕ್ಷಿಪ್ರವಾಗಿ ನಮ್ಮ ವಿಜ್ಞಾನಿಗಳು ಮತ್ತು ವೈದ್ಯರು ಕೆಲಸ ಮಾಡಿದ್ದಾರೆ. ಎರಡನೇ ಸುತ್ತಿನಲ್ಲಿ ಅರ್ಹರೆಲ್ಲರೂ ಲಸಿಕೆ ಹಾಕಿಸಿಕೊಳ್ಳಿ, ನಾವೆಲ್ಲರೂ ಒಟ್ಟು ಸೇರಿ ಕೋವಿಡ್ ಮುಕ್ತ ಭಾರತ ನಿರ್ಮಿಸೋಣ ಎಂದು ಮನವಿ ಮಾಡಿಕೊಂಡಿದ್ದಾರೆ.
ಜೂನ್ ೨೧ ರಿಂದ ಎಸ್ಎಸ್ಎಲ್ಸಿ ಪರೀಕ್ಷೆ
ಬೆಂಗಳೂರು, ಮಾ. ೧: ಕೋವಿಡ್ ಹಿನ್ನೆಲೆಯಲ್ಲಿ ಪ್ರಸಕ್ತ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಗಳು ಮಾರ್ಚ್ ಬದಲಿಗೆ, ಜೂನ್ ೨೧ ರಿಂದ ಜುಲೈ ೫ ರವರೆಗೆ ನಡೆಯಲಿವೆ. ಎಸ್ಎಸ್ಎಲ್ಸಿ ಪರೀಕ್ಷೆಯ ಅಂತಿಮ ವೇಳಾಪಟ್ಟಿ ಪ್ರಕಟಿಸಿರುವ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಹಾಗೂ ಸಕಾಲ ಸಚಿವ ಎಸ್. ಸುರೇಶ್ಕುಮಾರ್, ಈ ಮೊದಲು ತಾತ್ಕಾಲಿಕ ವೇಳಾಪಟ್ಟಿ ಪ್ರಕಟಿಸಿ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿದ್ದು, ಸಲಹೆ, ಮನವಿಗಳನ್ನು ಪರಿಗಣಿಸಿ ಅಂತಿಮ ವೇಳಾಪಟ್ಟಿ ಪ್ರಕಟಿಸಲಾಗಿದೆ ಎಂದರು. ಜೂನ್ ೨೧- ಪ್ರಥಮ ಭಾಷೆಗಳಾದ ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್, ಸಂಸ್ಕೃತ, ಜೂ.೨೪-ಗಣಿತ, ಜೂ. ೨೮-ವಿಜ್ಞಾನ, ಜೂ. ೩೦-ತೃತೀಯ ಭಾಷೆಗಳಾದ ಹಿಂದಿ, ಕನ್ನಡ, ಇಂಗ್ಲ್ಸಿï, ಅರೆಬಿಕ್, ಪರ್ಷಿಯನ್, ಉರ್ದು, ಸಂಸ್ಕೃತ, ಕೊಂಕಣಿ, ತುಳು, ಜುಲೈ೨- ದ್ವಿತೀಯ ಭಾಷೆ ಇಂಗ್ಲಿಷ್, ಕನ್ನಡ, ಜು.೫- ಸಮಾಜ ವಿಜ್ಞಾನ ಪರೀಕ್ಷೆಗಳು ನಡೆಯಲಿವೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಜಾಗತಿಕ ನಿಧಿ ಸಮರ್ಪಣ ಅಭಿಯಾನಕ್ಕೆ ಚಿಂತನೆ
ಲಖನೌ, ಮಾ. ೧: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ದೇಶಾದ್ಯಂತ ಹಮ್ಮಿಕೊಂಡಿದ್ದ ನಿಧಿ ಸಂಗ್ರಹ ಅಭಿಯಾನ ಅಂತ್ಯಗೊAಡಿದ್ದು, ನಿರೀಕ್ಷೆಗೂ ಮೀರಿ ಬರೋಬ್ಬರಿ ೨೧೦೦ ಕೋಟಿ ರೂಪಾಯಿ ಸಂಗ್ರಹವಾಗಿದೆ. ಈಗ ಅಯೋಧ್ಯೆಯ ರಾಮ ಮಂದಿರ ಟ್ರಸ್ಟ್ ಈಗ ಜಾಗತಿಕವಾಗಿಯೂ ನಿಧಿ ಸಮರ್ಪಣ ಅಭಿಯಾನಕ್ಕೆ ಚಾಲನೆ ನೀಡುವ ಚಿಂತನೆ ನಡೆಸಿದೆ. ಜಾಗತಿಕವಾಗಿಯೂ ನಿಧಿ ಸಮರ್ಪಣ ಅಭಿಯಾನಕ್ಕೆ ಚಾಲನೆ ನೀಡುವಂತೆ ವಿದೇಶಗಳಲ್ಲಿ ವಾಸಿಸುತ್ತಿರುವ ರಾಮ್ ಭಕ್ತರಿಂದ ಸಾಕಷ್ಟು ಮನವಿಗಳು ಬರುತ್ತಿವೆ. ರಾಮ ಮಂದಿರ ಟ್ರಸ್ಟ್ನ ಖಜಾಂಚಿ ಮಹಂತ್ ಗೋವಿಂದ್ ದೇವ್ ಗಿರಿ ಅವರು ಹೇಳಿದ್ದಾರೆ. ಶೀಘ್ರದಲ್ಲೇ ಟ್ರಸ್ಟಿಗಳ ಸಭೆಯಲ್ಲಿ ಈ ಸಂಬAಧ ನಿರ್ಧಾರ ತೆಗೆದುಕೊಳ್ಳಲಾಗುವುದು. ನಿಧಿ ಸಮರ್ಪಣ ಅಭಿಯಾನವನ್ನು ಜಾಗತಿಕವಾಗಿ ಪ್ರಾರಂಭಿಸಲು ಟ್ರಸ್ಟ್ ಸದಸ್ಯರು ಅನುಸರಿಸಬೇಕಾದ ಆರ್ಬಿಐ, ಹಣಕಾಸು ಸಚಿವಾಲಯ, ಐ-ಟಿ ನಿಯಮಗಳು ಮತ್ತು ಅನುಮತಿಗಳಿಗೆ ಸಂಬAಧಿಸಿದ ವಿಧಾನಗಳು ಮತ್ತು ಪ್ರೋಟೋಕಾಲ್ ಬಗ್ಗೆ ಚರ್ಚಿಸಲಿದ್ದಾರೆ ಎಂದು ಟ್ರಸ್ಟಿಗಳಲ್ಲಿ ಒಬ್ಬರಾದ ಮಹಂತ್ ಗೋವಿಂದ್ ದೇವ್ ಗಿರಿ ಅವರು ತಿಳಿಸಿದ್ದಾರೆ. ಯಾವುದೇ ಸಂಭಾವ್ಯ ವಿವಾದಗಳನ್ನು ತಪ್ಪಿಸಲು ಜಾಗತಿಕ ಧನಸಹಾಯ ಪಡೆಯುವುದಕ್ಕೆ ಸಂಬAಧಿಸಿದAತೆ ಕಾನೂನು ಮತ್ತು ನಿಬಂಧನೆಗಳ ಕುರಿತು ಅಧ್ಯಯನ ನಡೆಸಲು ಟ್ರಸ್ಟ್ ಈಗಾಗಲೇ ಒಬ್ಬರು ತಜ್ಞರನ್ನು ನಿಯೋಜಿಸಿದೆ ಎಂದು ಮೂಲಗಳು ತಿಳಿಸಿವೆ.
ಚುನಾವಣಾ ಆಯೋಗದ ನಿರ್ಧಾರ ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ
ನವದೆಹಲಿ, ಮಾ. ೧: ಪಶ್ಚಿಮ ಬಂಗಾಳದಲ್ಲಿ ಎಂಟು ಹಂತಗಳಲ್ಲಿ ವಿಧಾನಸಭೆ ಚುನಾವಣೆ ನಡೆಸಲು ಉದ್ದೇಶಿಸಿರುವ ಚುನಾವಣಾ ಆಯೋಗದ ನಿರ್ಧಾರವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ವಕೀಲ ಎಂ.ಎಲ್ ಶರ್ಮ ಎಂಬುವವರು ಸುಪ್ರೀಂ ಕೋರ್ಟ್ನಲ್ಲಿ ಇಂದು ಅರ್ಜಿ ಸಲ್ಲಿಸಿದ್ದು, ಸಂವಿಧಾನದ ವಿಧಿ ೧೪ ಮತ್ತು ೨೧ನ್ನು ಉಲ್ಲಂಘಿಸುತ್ತಿರುವು ದರಿಂದ ಎಂಟು ಹಂತಗಳಲ್ಲಿ ನಡೆಸಲು ಉದ್ದೇಶಿಸಿರುವ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ತಡೆ ನೀಡಬೇಕೆಂದು ಕೋರಿದ್ದಾರೆ. ಸುಪ್ರೀಂ ಕೋರ್ಟ್ನಲ್ಲಿ ಸಲ್ಲಿಕೆಯಾಗಿರುವ ಅರ್ಜಿ ಇನ್ನು ಕೆಲ ದಿನಗಳಲ್ಲಿ ವಿಚಾರಣೆಗೆ ಬರಲಿದೆ. ಪಶ್ಚಿಮ ಬಂಗಾಳದಲ್ಲಿ ಚುನಾವಣಾ ರ್ಯಾಲಿ ಸಂದರ್ಭದಲ್ಲಿ ಅನಗತ್ಯವಾಗಿ ಧಾರ್ಮಿಕ ಘೋಷಣೆಗಳನ್ನು ಕೂಗುವುದರ ವಿರುದ್ಧ ಎಫ್ಐಆರ್ ದಾಖಲಿಸಬೇಕೆಂದು ಕೂಡ ಸಿಬಿಐಗೆ ನಿರ್ದೇಶನ ನೀಡಬೇಕೆಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ. ಧಾರ್ಮಿಕ ಘೋಷೆಣೆಗಳು ಅಸಂಗತತೆಯನ್ನು ಸೃಷ್ಟಿಸುತ್ತಿವೆ ಎಂದು ಐಪಿಸಿ ಮತ್ತು ಜನರ ಪ್ರಾತಿನಿಧ್ಯ ಕಾಯ್ದೆ, ೧೯೫೧ ರ ಅಡಿಯಲ್ಲಿ ಅಪರಾಧವಾಗಿದೆ, ಪಕ್ಷಗಳು ಇದನ್ನು ತಮ್ಮ ಚುನಾವಣಾ ಲಾಭಕ್ಕಾಗಿ ಮಾತ್ರ ಘೋಷಿಸುತ್ತಿವೆ ಎಂದು ವಕೀಲ ಎಂ ಎಲ್ ಶರ್ಮ ಅರ್ಜಿಯಲ್ಲಿ ಆರೋಪಿಸಿದ್ದಾರೆ.
ಭಯೋತ್ಪಾದಕ ಸಹವರ್ತಿಯ ಬಂಧನ
ಶ್ರೀನಗರ, ಮಾ. ೧: ಜೆಇಎಂ ಭಯೋತ್ಪಾದಕ ಸಹವರ್ತಿಯನ್ನು ಜಮ್ಮು-ಕಾಶ್ಮೀರ ಪೊಲೀಸರು ಬಂಧಿಸಿದ್ದಾರೆ. ದಕ್ಷಿಣ ಕಾಶ್ಮೀರದ ಅವಂತಿಪೋರಾದಲ್ಲಿ ಭಯೋತ್ಪಾದಕ ಬೆಂಬಲಿಗ, ಸಹವರ್ತಿಯನ್ನು ಬಂಧಿಸಲಾಗಿದ್ದು ಆತನಿಂದ ವಸ್ತುಗಳನ್ನು ವಶಪಡಿಸಿಕೊಂದಿದ್ದಾರೆ. ಜಾಗೀರ್ ತ್ರಾಲ್ನಲ್ಲಿ ಭಯೋತ್ಪಾದಕರ ಬೆಂಬಲಿಗ ಇದ್ದ ಬಗ್ಗೆ ಖಚಿತ ಮಾಹಿತಿಯನ್ನು ಪಡೆದ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಪೊಲೀಸರು ಹಾಗೂ ಸೇನೆಯ ೪೨ ಆರ್ಆರ್ ಹಾಗೂ ಸಿಆರ್ಪಿಎಫ್ ಜಂಟಿ ಕಾರ್ಯಾ ಚರಣೆಯ ಫಲವಾಗಿ ಜೆಇಎಂನ ಬೆಂಬಲಿಗನಾಗಿದ್ದ ಮುಜಾಮಿಲ್ ಖಾದಿರ್ನನ್ನು ಬಂಧಿಸಲಾಗಿದೆ. ಭಯೋತ್ಪಾದಕ ಸಂಘಟನೆಗೆ ಸೇರಿದ ವಸ್ತುಗಳನ್ನು, ಗ್ರೆನೇಡ್ನ್ನು ಈತನಿಂದ ವಶಕ್ಕೆ ಪಡೆಯಲಾಗಿದೆ. ಪೊಲೀಸರು ಪ್ರಾಥಮಿಕ ತನಿಖೆಯನ್ನು ಪ್ರಾರಂಭಿಸಿದ್ದಾರೆ.
೨೦೭ ಐಫೋನ್ ವಶ..!
ಬೆಂಗಳೂರು, ಮಾ. ೧: ಕೆಂಪೇಗೌಡ ಅಂರ್ರಾಷ್ಟಿçÃಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಯುಎಸ್ ದಂಪತಿಯಿAದ ಅಪಾರ ಮೊತ್ತದ ೨೦೭ ಐಫೋನ್ಗಳನ್ನು ವಶಪಡಿಸಿಕೊಂಡಿದ್ದಾರೆ. ರಸ್ತೆ ಮೂಲಕ ಹೈದರಾಬಾದ್ಗೆ ಸಾಗಿಸಲು ವಿಮಾನ ನಿಲ್ದಾಣದಲ್ಲಿ ಕಾಯುತ್ತಿದ್ದ ಕಾರನ್ನು ಸಹ ಗುಪ್ತಚರ ಅಧಿಕಾರಿಗಳು ವಶಪಡಿಸಿಕೊಂಡಿದೆ ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ. ಪ್ಯಾರಿಸ್ನಿಂದ ಏರ್ ಫ್ರಾನ್ಸ್ ವಿಮಾನದ (ಎಎಫ್ ೧೯೪) ಮೂಲಕ ಮುಂಜಾನೆ ೩.೩೦ಕ್ಕೆ ಕೆಂಪೇಗೌಡ ಅಂತರಾಷ್ಟಿçÃಯ ವಿಮಾನ ನಿಲ್ದಾಣ ತಲುಪಿದ್ದ ದಂಪತಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಅವರನ್ನು ತಾ. ೧೨ ರವರೆಗೆ ನ್ಯಾಯಾಂಗ ಬಂಧನದಲ್ಲಿಡಲಾಗಿದೆ. ಇದುವರೆಗೂ ಮಾಡಿದ ಫೋನ್ಗಳ ಅತಿದೊಡ್ಡ ಸೀಜ್ ಇದಾಗಿದೆ, ಇದರಲ್ಲಿ ಐಫೋನ್ ೧೨ ಪ್ರೊ ಮತ್ತು ಪ್ರೊ ಮ್ಯಾಕ್ಸ್ ಮಾದರಿಗಳಾಗಿದ್ದವು ಮತ್ತು ಅವುಗಳ ಒಟ್ಟು ಮೌಲ್ಯ ೨,೭೪,೧೯,೪೦೦ ರೂ. ಖರೀದಿಗಾಗಿ ಬಳಸಿದ ಒಟ್ಟು ೩೭ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ. ಬಂಧಿಸಿದ ದಂಪತಿಯ ಹೆಸರು ಬಹಿರಂಗ ಪಡಿಸದ ಅಧಿಕಾರಿಗಳು, ಈ ದಂಪತಿ ಫೆಬ್ರವರಿ ೧೩ ರಂದು ಮುಂಬಯಿಯಿAದ ಯುಎಸ್ಗೆ ತೆರಳಿದ್ದರು ಎಂದು ಹೇಳಿದ್ದಾರೆ. ಫೋನ್ಗಳನ್ನು ಹೈದರಾಬಾದ್ಗೆ ಸಾಗಿಸಲು ವಿಮಾನ ನಿಲ್ದಾಣ ಪಾರ್ಕಿಂಗ್ ಪ್ರದೇಶದಲ್ಲಿ ಕಾಯುತ್ತಿದ್ದ ಮಾರುತಿ ಎರ್ಟಿಗಾವನ್ನು ಭಾರತೀಯ ಕಸ್ಟಮ್ಸ್ ಕಾಯ್ದೆ ೧೯೬೨ರ ಸೆಕ್ಷನ್ ೧೧೫ರ ಅಡಿಯಲ್ಲಿ ವಶಪಡಿಸಿಕೊಳ್ಳಲಾಗಿದೆ.