ಶ್ರೀಮAಗಲ, ಮಾ. ೧: ಪೊನ್ನಂಪೇಟೆ ತಾಲೂಕಿನ ಹುದಿಕೇರಿ ಅಂಜಿಕೇರಿ ನಾಡ್ ಕೂಟದ ಆಶ್ರಯದಲ್ಲಿ ಕೊಡವ ಕುಟುಂಬಗಳ ನಡುವೆ ಮುಂದಿನ ತಿಂಗಳು ಏಪ್ರಿಲ್ ತಾ. ೧ ರಿಂದ ೮ ರವರೆಗೆ ಹುದಿಕೇರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಹಾಕಿ ಪಂದ್ಯಾಟವನ್ನು ಆಯೋಜಿಸಲಾಗಿದೆ ಎಂದು ಅಂಜಿಕೇರಿ ನಾಡ್ ಕೂಟ ಮತ್ತು ಪಂದ್ಯಾಟದ ಆಯೋಜಕರು ತಿಳಿಸಿದ್ದಾರೆ.ಕ್ರೀಡಾ ಮೈದಾನದಲ್ಲಿ ಈ ಬಗ್ಗೆ ಸಭೆಯಲ್ಲಿ ವಿವರಿಸಿದ ಅವರುಗಳು ಎಲ್ಲಾ ಕೊಡವ ಕುಟುಂಬದಲ್ಲಿ ಪೂರ್ಣ ಪ್ರಮಾಣದ ೧೧ ಆಟಗಾರರ ಕೊರತೆ ಇರುವುದರಿಂದ, ಕಡಿಮೆ ಸದಸ್ಯರು ಇರುವ ಕೊಡವ ಕುಟುಂಬಗಳು ಇಂತಹ ಆಟದಿಂದ ವಂಚಿತರಾಗಬಾರದೆAಬ ಹಿನ್ನೆಲೆಯಲ್ಲಿ ೭ ಆಟಗಾರರನ್ನೊಳಗೊಂಡ ಪಂದ್ಯಾಟವನ್ನು ಆಯೋಜಿಸಲಾಗಿದೆ. ತಂಡದಲ್ಲಿ ೭ ಆಟಗಾರರೊಂದಿಗೆ ಇತರ ಮೂರು ಬದಲಿ ಆಟಗಾರರನ್ನು ತಂಡದಲ್ಲಿ ಸೇರಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.

ಅಂಜಿಕೇರಿ ನಾಡ್‌ನ ೮ ಗ್ರಾಮಗಳನ್ನು ಒಗ್ಗೂಡಿಸುವ ಉದ್ದೇಶದಿಂದಲೂ, ಕೊಡಗಿನ ಕೊಡವ ಕುಟುಂಬಗಳನ್ನು ಒಂದೇ ಸ್ಥಳದಲ್ಲಿ ಸೇರಿಸುವ ಉದ್ದೇಶದಿಂದಲೂ ಮತ್ತು ಕ್ರೀಡಾ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕ್ರೀಡಾಕೂಟವನ್ನು ಆಯೋಜಿಸಲಾಗುತ್ತಿದೆ. ಬಹಳ ಹಿಂದಿನ ಕಾಲದಿಂದಲೇ ಹುದಿಕೇರಿಯ ಈ ಶಾಲಾ ಮೈದಾನದಲ್ಲಿ ತುಂಬಾ ಕ್ರೀಡಾ ಚಟುವಟಿಕೆ ನಡೆಯುತ್ತಿತ್ತು. ಮಕ್ಕಳು ಮತ್ತು ಯುವಕರನ್ನು ದೈಹಿಕ ಮಾನಸಿಕ ಸಧೃಡತೆಗಾಗಿ ಪ್ರತಿದಿನ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಕೆಟ್ಟ ದುರಭ್ಯಾಸಗಳಿಗೆ ಬಲಿಯಾಗದಂತೆ ತಡೆಯಬಹುದಾದ ನಿಟ್ಟಿನಲ್ಲಿ ಕ್ರೀಡಾ ಕೂಟವನ್ನು ಆಯೋಜಿಸಲಾಗುತ್ತಿದೆ.

ಹುದಿಕೇರಿಯಲ್ಲಿ ೨೦೦೨ರಲ್ಲಿ ಕೊಡವ ಕೌಟುಂಬಿಕ ಹಾಕಿ ಉತ್ಸವದ ಹಿನ್ನೆಲೆ ಚೆಕ್ಕೆರ ಕುಟುಂಬದಿAದ ಚೆಕ್ಕೆರ ಕಪ್ ಟೂರ್ನಮೆಂಟನ್ನು ಆಯೋಜಿಸಲಾಗಿತ್ತು. ತದ ನಂತರ ಈ ಭಾಗದಲ್ಲಿ ಅಂತಹ ಟೂರ್ನಮೆಂಟ್ ನಡೆದಿಲ್ಲ. ವಿವಿಧ ಕಾರಣಗಳಿಂದ ೨ ವರ್ಷಗಳಿಂದ ಕೊಡವ ಕೌಟುಂಬಿಕ ಹಾಕಿ ಉತ್ಸವವು ನಡೆದಿಲ್ಲ. ಆದ್ದರಿಂದ ಈ ಬಾರಿ ಅಂಜಿಕೇರಿ ನಾಡ್ ಕೊಡವ ಕೌಟುಂಬಿಕ ಹಾಕಿ ನಮ್ಮೆ ೨೦೨೧ ಆಯೋಜಿಸಲಾಗಿದೆ ಎಂದು ತಿಳಿಸಿದರು.

(ಮೊದಲ ಪುಟದಿಂದ) ಈಗಾಗಲೇ ಪ್ರವೇಶಾತಿ ಪ್ರಾರಂಭವಾಗಿದ್ದು ೬೧ ಕೊಡವ ಕುಟುಂಬಗಳ ಹೆಸರು ನೋಂದಾವಣೆಯಾಗಿವೆ. ತಾ. ೧೫ರ ವರೆಗೆ ಹೆಸರು ನೋಂದಾಯಿಸಲು ಅವಕಾಶವಿದೆ. ಮೊದಲು ಬಂದ ೧೦೦ ಕುಟುಂಬಗಳಿಗೆ ಮಾತ್ರ ಟೂರ್ನಮೆಂಟ್‌ನಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದ್ದು, ನಂತರ ಬಂದ ಕುಟುಂಬಗಳಿಗೆ ಪ್ರವೇಶವನ್ನು ಪರಿಗಣಿಸುವುದಿಲ್ಲ. ಟೂರ್ನಮೆಂಟ್‌ನ ತಂಡದಲ್ಲಿ ಹೆಣ್ಣು ಮಕ್ಕಳಿಗೂ ಆಟವಾಡಲು ಅವಕಾಶ ಕಲ್ಪಿಸಲಾಗಿದೆ. ಆದರೆ, ಮದುವೆಯಾಗಿರುವ ಹೆಣ್ಣು ಮಕ್ಕಳು ತಮ್ಮ ತಾಮನೆ ತಂಡ ಅಥವಾ ಬಾಕೆಮನೆ ತಂಡದಲ್ಲಿ ಯಾವುದಾದರೂ ಒಂದು ತಂಡದಲ್ಲಿ ಮಾತ್ರ ಆಡಲು ಅವಕಾಶವಿದ್ದು, ೨ ತಂಡದಲ್ಲಿ ಆಡಲು ಅವಕಾಶವಿಲ್ಲ.

ಟೂರ್ನಮೆಂಟ್‌ನ ವಿನ್ರ‍್ಸ್ ಹಾಗೂ ರನ್ರ‍್ಸ್ ತಂಡಕ್ಕೆ ಆಕರ್ಷಕ ಟ್ರೋಫಿ ಹಾಗೂ ನಗದು ಇದ್ದು, ತಂಡ ನೋಂದಾವಣಿಗೆ ಚೆಕ್ಕೇರ ಆದರ್ಶ್ ೮೧೦೫೪೦೭೩೩೭, ಚೆಕ್ಕೇರ ವಿವೇಕ್ ಬೋಪಣ್ಣ ೯೯೮೬೨೫೨೪೭೪, ಚಂಗುಲAಡ ಅಯ್ಯಪ್ಪ ೯೪೮೨೨೭೫೧೪೩, ಅಜ್ಜಿಕುಟ್ಟೀರ ಪ್ರಖ್ಯಾತ್ ಪೂಣಚ್ಚ ೯೪೮೦೭೯೭೭೭೩ ಇವರನ್ನು ಸಂಪರ್ಕಿಸಬಹುದು ಎಂದರು.

ಈ ಸಂದರ್ಭ ಅಂಜಿಕೇರಿ ನಾಡ್ ಕೂಟದ ಅಧ್ಯಕ್ಷ ಅಜ್ಜಿಕುಟ್ಟೀರ ಪ್ರಖ್ಯಾತ್ ಪೂಣಚ್ಚ, ಕಾರ್ಯದರ್ಶಿ ಚಂಗುಲAಡ ಅಯ್ಯಪ್ಪ, ಆಯೋಜಕರಾದ ಚೆಕ್ಕೇರ ಆದರ್ಶ್, ಸದಸ್ಯರುಗಳಾದ ಚೆಕ್ಕೇರ ರಮೇಶ್ ಚಿಟ್ಟಿಯಪ್ಪ, ನೂರೇರ ಕಿಟ್ಟು ಕುಟ್ಟಪ್ಪ ಹಾಜರಿದ್ದರು.