ಸೋಮವಾರಪೇಟೆ, ಫೆ. ೨೮ : ಅಂತರಾಷ್ಟಿçÃಯ ಮಾರುಕಟ್ಟೆಯಲ್ಲಿ ಅರೇಬಿಕಾ ಪಾರ್ಚ್ಮೆಂಟ್ ಕಾಫಿಗೆ ಉತ್ತಮ ಬೆಲೆ ಇದ್ದರೂ ಸ್ಥಳೀಯ ಖರೀದಿದಾರರು ಬೆಳೆಗಾರರಿಂದ ಕಡಿಮೆ ದರಕ್ಕೆ ಕಾಫಿಯನ್ನು ಖರೀದಿಸುತ್ತಿದ್ದಾರೆ ಎಂದು ಹಲವು ಬೆಳೆಗಾರರು ಆರೋಪಿಸಿದ್ದಾರೆ; ಭವಿಷ್ಯದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.ಅರೇಬಿಕಾ ಪಾರ್ಚ್ಮೆಂಟ್ ಕಾಫಿಗೆ ಅಂತರಾಷ್ಟಿçÃಯ ಮಾರುಕಟ್ಟೆಯಲ್ಲಿ ೫೦ ಕೆ.ಜಿ. ಬ್ಯಾಗ್‌ಗೆ ೧೩೮ ಸೆಂಟ್ ಪ್ರಕಾರ ೧೧೫೦೦ ಇದ್ದರೆ, ಸ್ಥಳೀಯ ಕೆಲವು ವ್ಯಾಪಾರಿಗಳು ೧೦,೧೦೦ಕ್ಕೆ ಖರೀದಿ ಮಾಡುತ್ತಿದ್ದಾರೆ. ಇದರೊಂದಿಗೆ ಪಾಯಿಂಟ್ ೧೨೪ ಸೆಂಟ್ ಇದ್ದ ಸಂದರ್ಭ ೫೦ ಕೆ.ಜಿ. ಚೀಲದ ಬೆಲೆ ೧೦,೦೦೦ ಇತ್ತು. ನಂತರ ೧೩೮ ಸೆಂಟ್‌ಗೆ ಏರಿಕೆಯಾದರೂ ಸ್ಥಳೀಯವಾಗಿ ೧೦,೧೦೦ಕ್ಕೆ ೫೦ ಕೆ.ಜಿ.ಯ ಕಾಫಿಯನ್ನು ಖರೀದಿಸುತ್ತಿದ್ದಾರೆ ಎಂದು ಬೆಳೆಗಾರರು ದೂರಿದ್ದಾರೆ.
ಕಾಫಿಯನ್ನು ಮಾರಾಟ ಮಾಡಲೆಂದು ಸ್ಥಳೀಯ ಖರೀದಿದಾರರ ಬಳಿ ತೆಗೆದುಕೊಂಡು ಹೋದರೆ, ಗುಣಮಟ್ಟದ ಕಾರಣ ನೀಡಿ ಕಡಿಮೆ ಹಣ ನಿಗದಿ ಮಾಡುತ್ತಿದ್ದಾರೆ. ಅಕಾಲಿಕ ಮಳೆ, ಹೆಚ್ಚಿರುವ ಉತ್ಪಾದನಾ ವೆಚ್ಚ, ಕೂಲಿ ಕಾರ್ಮಿಕರ ಕೊರತೆ, ವಾಹನಗಳ ಬಳಕೆ, ಕಾಫಿ ತೋಟಗಳ ನಿರ್ವಹಣೆಯೇ ಕಷ್ಟಸಾಧ್ಯವಾಗಿರುವ ಸನ್ನಿವೇಶದಲ್ಲಿ, ಖರೀದಿದಾರರು ಸೂಕ್ತ ಬೆಲೆ ನೀಡದೇ ಬೆಳೆಗಾರರನ್ನು ಇನ್ನಷ್ಟು ಶೋಷಿಸುತ್ತಿದ್ದಾರೆ ಎಂದು ಕಾಫಿ ಬೆಳೆಗಾರರು ಆರೋಪಿಸುತ್ತಿದ್ದಾರೆ.
ಈ ಬಗ್ಗೆ ಸ್ಥಳೀಯ ಕಾಫಿ ಡಿಪೋ ಸಿಬ್ಬಂದಿಯೋರ್ವರನ್ನು ಸಂಪರ್ಕಿಸಿದ ಸಂದರ್ಭ, ಅಂತರಾಷ್ಟಿçÃಯ ಮಟ್ಟದಲ್ಲಿ ಕಾಫಿಯ ಬೆಲೆ ಏರಿಕೆಯಾಗಿದ್ದರೂ ಅವರು ಕೇಳುವ ಗುಣಮಟ್ಟದ ಕಾಫಿಯನ್ನು ಒದಗಿಸಲು ಸಾಧ್ಯವಾಗುತ್ತಿಲ್ಲ. ನಾವುಗಳು ಸ್ಥಳೀಯವಾಗಿ ಖರೀದಿಸುವ ಕಾಫಿಯಲ್ಲಿ ಶೇ. ೮೦ಕ್ಕೂ ಅಧಿಕ ಗುಣಮಟ್ಟದ ಕಾಫಿ ಸಿಗುತ್ತಿಲ್ಲ. ಇದರಿಂದಾಗಿ ಸ್ಥಳೀಯವಾಗಿ ಒಂದಿಷ್ಟು ಬೆಲೆ ಕಡಿಮೆಯಾಗುತ್ತಿದೆ ಎಂದು ತಿಳಿಸಿದ್ದಾರೆ.
ಇದರೊಂದಿಗೆ ಪ್ರಸ್ತುತ ಅರೇಬಿಕಾ ಪಾರ್ಚ್ಮೆಂಟ್ ಕಾಫಿಯನ್ನು ಖರೀದಿಸುವವರೇ ಇಲ್ಲವಾಗಿದ್ದಾರೆ. ಈ ಹಿಂದೆ ಕುಶಾಲನಗರದಲ್ಲಿ ಖರೀದಿಯಾಗುತ್ತಿತ್ತು. ಇದೀಗ ಅಲ್ಲೂ ಖರೀದಿ ಮಾಡುತ್ತಿಲ್ಲ. ಬೆಳೆಗಾರರಿಂದ ಖರೀದಿಸಿದ ಕಾಫಿಯನ್ನು ಪ್ರಸ್ತುತ ಚಿಕ್ಕಮಗಳೂರಿಗೆ
(ಮೊದಲ ಪುಟದಿಂದ) ಮಾರಾಟ ಮಾಡುವಂತಾಗಿದೆ. ಸಾಗಾಟ ವೆಚ್ಚವೇ ಒಂದು ಚೀಲಕ್ಕೆ ೫೫ ರಿಂದ ೬೦ ರೂಪಾಯಿ ತಗಲುತ್ತದೆ ಎಂದು ಮಾಹಿತಿ ನೀಡಿದ್ದಾರೆ. ಅರೇಬಿಕಾ ಪಾರ್ಚ್ಮೆಂಟ್ ಖರೀದಿಸುತ್ತಿದ್ದ ಕುಶಾಲನಗರದ ಬೃಹತ್ ಕಂಪೆನಿಗಳೂ ಸಹ ಅರೇಬಿಕಾ ಖರೀದಿಗೆ ಹಿಂದೇಟು ಹಾಕುತ್ತಿವೆ. ಹೀಗಾಗಿ ಅನಿವಾರ್ಯವಾಗಿ ಚಿಕ್ಕಮಗಳೂರಿನ ಖಾಸಗಿ ಸಂಸ್ಥೆಗೆ ಮಾರಾಟ ಮಾಡಬೇಕಿದೆ. ಅಂತರಾಷ್ಟಿçÃಯ ಮಾರುಕಟ್ಟೆಯ ಬೆಲೆಯನ್ನು ಗಮನದಲ್ಲಿರಿಸಿಕೊಂಡು, ಚಿಕ್ಕಮಗಳೂರಿನವರು ಬೆಲೆ ನಿಗದಿ ಮಾಡುತ್ತಾರೆ. ಆ ಬೆಲೆಗೆ ಸ್ಥಳೀಯವಾಗಿ ಕಾಫಿ ಖರೀದಿಯಾಗುತ್ತಿದೆ ಎಂದು ತಿಳಿಸಿದ್ದಾರೆ.
ಇದರೊಂದಿಗೆ ಸ್ಥಳೀಯವಾಗಿ ಶೇ.೮೦ರಷ್ಟು ಕಾಫಿ ಗ್ರೇಡ್ ಒಂದು ಹಾಗೂ ಗ್ರೇಡ್ ೨ರಲ್ಲಿ ಇರುವುದಿಲ್ಲ. ಉಳಿದ ಕಾಫಿಯನ್ನು ನಾವುಗಳು ಖರೀದಿ ಮಾಡಿದರೂ ನಮ್ಮಿಂದ ಖರೀದಿ ಮಾಡಲು ಯಾವ ಕಂಪೆನಿಯೂ ಮುಂದೆ ಬರುತ್ತಿಲ್ಲ. ಗ್ರೇಡ್-೧ ಮತ್ತು ೨ಕ್ಕೆ ಬೇಡಿಕೆ ಇದ್ದರೂ ನಿರೀಕ್ಷಿತ ಕಾಫಿ ಕೋರ್ಟ್ ಹಾಲ್‌ಗೆ ಬೇಕಾದ ಕಟಕಟೆ, ನ್ಯಾಯಾಧೀಶರ ನ್ಯಾಯಪೀಠ, ವಕೀಲರ ಆಸನದ ವ್ಯವಸ್ಥೆ ಕೆಲಸಗಳು ನಡೆಯುತ್ತಿವೆ. ಇದರೊಂದಿಗೆ ಕಟ್ಟಡ ಹೊರಭಾಗದ ಒಂದು ಕಡೆ ತಡೆಗೋಡೆಯನ್ನು ನಿರ್ಮಿಸಲಾಗಿದೆ.
ಕೋಟೆ ಆವರಣದಲ್ಲಿರುವ ನ್ಯಾಯಾಲಯ ೧೯೬೯ರಲ್ಲಿ ಆರಂಭಗೊAಡಿತ್ತು. ಅಂದಿನ ಮೈಸೂರು ಚೀಫ್ ಜಸ್ಟೀಸ್ ಎ.ಆರ್. ಸೋಮನಾಥ್ ಅಯ್ಯರ್ ನ್ಯಾಯಾಲಯ ಶಂಕುಸ್ಥಾಪನೆ ಮಾಡಿದ್ದರು. ಕಾಮಗಾರಿ ಪೂರ್ಣಗೊಂಡ ಬಳಿಕ ೧೯೭೪ರಲ್ಲಿ ಕರ್ನಾಟಕದ ಅಂದಿನ ಚೀಫ್ ಜಸ್ಟೀಸ್ ಜಿ.ಕೆ ಗೋವಿಂದಭಟ್ ನ್ಯಾಯಾಲಯ ಲೋಕಾರ್ಪಣೆ ಮಾಡಿದ್ದರು.
ನೂತನ ನ್ಯಾಯಾಲಯ ಕಾಮಗಾರಿ ಗುತ್ತಿಗೆ ಪಡೆದಿದ್ದ ಬೆಂಗಳೂರು ಮೂಲದ ಖಾಸಗಿ ಕಂಪನಿ ತಡವಾದರು ಕಾಮಗಾರಿ ಮುಗಿಸಿದ್ದು, ಉಳಿದಿರುವ ಸಣ್ಣ,ಪುಟ್ಟ ಕೆಲಸವನ್ನು ಮುಗಿಸಿ ಮಾರ್ಚ್ ಅಂತ್ಯದೊಳಗೆ ಲೋಕೋಪಯೋಗಿ ಇಲಾಖೆಗೆ ಹಸ್ತಾಂತರಿಸಬೇಕಾಗಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಕೂಡ ಗುತ್ತಿಗೆದಾರರಿಗೆ ಸೂಚಿಸಿದ್ದಾರೆ.
-ಹೆಚ್.ಜೆ ರಾಕೇಶ್