ಕೊಡ್ಲಿಪೇಟೆ, ಫೆ. ೨೮: ಸಮೀಪದ ಕೆಳಕೊಡ್ಲಿ ಗ್ರಾಮದಲ್ಲಿ ಕಾಡಾನೆಗಳ ಹಾವಳಿಯಿಂದಾಗಿ ಕೃಷಿ ಫಸಲು ನಷ್ಟವಾಗಿದ್ದು, ಶಾಶ್ವತ ಪರಿಹಾರಕ್ಕೆ ಈ ಹಿಂದಿನಿAದ ಆಗ್ರಹಿಸುತ್ತಿದ್ದರೂ ಪ್ರಯೋಜನ ಶೂನ್ಯವಾಗಿದೆ ಎಂದು ಈ ಭಾಗದ ಕೃಷಿಕರು ಆರೋಪಿಸಿದ್ದಾರೆ.
ಸುಮಾರು ೯ ಆನೆಗಳಿರುವ ಹಿಂಡು ಸಮೀಪದ ಕೆಳಕೊಡ್ಲಿ ಗ್ರಾಮದಲ್ಲಿ ಕೃಷಿ ಜಮೀನುಗಳಿಗೆ ನುಗ್ಗಿ ದಾಂಧಲೆ ನಡೆಸಿದ ಪರಿಣಾಮ ಸುಮಾರು ಎರಡು ಎಕರೆ ಜಮೀನಿನಲ್ಲಿ ಬೆಳೆದಿದ್ದ ಸಿಹಿ ಗೆಣಸು ಹಾಗೂ ಎಲೆಕೋಸು ಬೆಳೆ ನಾಶವಾಗಿದೆ ಎಂದು ರೈತ ನಾಗೇಶ್ ತಿಳಿಸಿದ್ದಾರೆ.
ತಕ್ಷಣ ಆರಣ್ಯ ಇಲಾಖೆಗೆ ಮಾಹಿತಿ ನೀಡಿದ ಮೇರೆ, ಸ್ಥಳೀಯ ಅರಣ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಆಗಮಿಸಿ ಆನೆಗಳನ್ನು ಕಾಡಿಗೆ ಅಟ್ಟಿದ್ದಾರೆ. ತಪ್ಪಿದ್ದಲ್ಲಿ ಇನ್ನೂ ಹೆಚ್ಚಿನ ಹಾನಿ ಸಂಭವಿಸುತ್ತಿತ್ತು ಎಂದು ನಾಗೇಶ್ ಮಾಹಿತಿ ನೀಡಿದ್ದಾರೆ.
ಆನೆಗಳನ್ನು ಅರಣ್ಯಕ್ಕೆ ಅಟ್ಟಿದರೂ ಮತ್ತೆ ಮತ್ತೆ ಕೃಷಿ ಪ್ರದೇಶಕ್ಕೆ ವಾಪಸ್ ಬರುತ್ತಿವೆ. ಕಾಡಾನೆಗಳ ಹಾವಳಿಯಿಂದ ಕೃಷಿ ಕೈಗೊಳ್ಳುವುದೇ ದುಸ್ಸಾಹಸ ಎಂಬAತಾಗಿದೆ. ಹವಾಮಾನ ವೈಪರೀತ್ಯದ ನಡುವೆಯೂ ಕೈಗೊಂಡ ಕೃಷಿ ಆನೆಗಳ ಪಾಲಾಗುತ್ತಿವೆ. ಈ ಭಾಗದ ಜನವಸತಿ ಹಾಗೂ ಕೃಷಿ ಪ್ರದೇಶದಲ್ಲಿ ಬೀಡುಬಿಟ್ಟಿರುವ ಆನೆಗಳನ್ನು ಹಿಡಿದು ಸ್ಥಳಾಂತರ ಮಾಡುವ ಮೂಲಕ ಶಾಶ್ವತ ಪರಿಹಾರ ಒದಗಿಸಬೇಕೆಂದು ಕೃಷಿಕರು ಒತ್ತಾಯಿಸಿದ್ದಾರೆ.