ವೀರಾಜಪೇಟೆ, ಫೆ. ೨೮: ದಕ್ಷಿಣ ಕೊಡಗಿನಲ್ಲಿ ನರಭಕ್ಷಕ ಹುಲಿ ಹಾವಳಿಯಿಂದ ಇಬ್ಬರೂ ಪ್ರಾಣ ಕಳೆದುಕೊಂಡಿದ್ದಾರೆ, ಜಾನುವಾರುಗಳು ದಿನಕ್ಕೊಂದರAತೆ ಹುಲಿ ದಾಳಿಗೆ ತುತ್ತಾಗುತ್ತಿವೆ. ಅದೇ ರೀತಿ ಸಿದ್ದಾಪುರದ ಬೀಟಿಕಾಡು ಎಸ್ಟೇಟ್‌ನಲ್ಲಿ ಸಂದೀಪ್ ಎಂಬಾತ ಆನೆ ತುಳಿತಕ್ಕೆ ಬಲಿಯಾಗಿದ್ದಾರೆ. ಕಾರ್ಯಾಚರಣೆ ನಡೆಸಿದರೂ ಹುಲಿ ಮತ್ತು ಆನೆ ಸೆರೆ ಹಿಡಿಯಲು ಅರಣ್ಯ ಇಲಾಖೆಗೆ ಸಾಧ್ಯವಾಗದೆ ಹಾವಳಿ ತಡೆಗಟ್ಟಲು ಇಲಾಖೆ ಸಂಪೂರ್ಣ ವಿಫಲಗೊಂಡಿದೆ ಎಂದು ಭಾರತೀಯ ಕಮ್ಯೂನಿಸ್ಟ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ಕೆ.ವಿ. ಸುನಿಲ್ ಆಕ್ರೋಶ ವ್ಯಕ್ತಪಡಿಸಿದರು.
ಪಕ್ಷದ ಕಚೇರಿಯಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಕೊಡಗಿನ ವಿವಿಧ ಭಾಗದಲ್ಲಿ ಬಹಳಷ್ಟು ಹುಲಿಗಳು ಸಂಚರಿಸುತ್ತಿವೆ, ಕಾಡಾನೆ ಹಾವಳಿ ತಡೆಗಟ್ಟಲು ಇಲಾಖೆ ಸಂಪೂರ್ಣವಾಗಿ ವಿಫಲವಾಗಿದೆ. ಇದರಿಂದ ಕೃಷಿ ಭೂಮಿ ಹಾಗೂ ಉತ್ಪನ್ನಗಳನ್ನು ಉಳಿಸಿಕೊಳ್ಳಲು ರೈತರು ಹರಸಾಹಸ ಪಡುವಂತಾಗಿದೆ, ಈ ಬಗ್ಗೆ ಹಲವು ಬಾರಿ ಅರಣ್ಯಾಧಿಕಾರಿಗೆ ಮನವಿ ಮಾಡಿದರೂ ಯಾವುದೇ ಸ್ಪಂದನ ದೊರೆಯುತ್ತಿಲ್ಲ ಎಂದರು.
ಪಟ್ಟಣ ಪಂಚಾಯಿತಿ ಸದಸ್ಯ ವಿ.ಆರ್. ರಜನಿಕಾಂತ್ ಮಾತನಾಡಿ ಅರಣ್ಯ ಇಲಾಖೆ ಸಿಬ್ಬಂದಿಗಳು ವಿವಿಧ ಭಾಗದಲ್ಲಿ ಕೂಬಿಂಗ್ ಕಾರ್ಯಾಚರಣೆ ನಡೆಸುತ್ತಿದ್ದರೂ ಕಾಡುಪ್ರಾಣಿಗಳ ಹಾವಳಿ ತಡೆಹಿಡಿಯುವಲ್ಲಿ ಸತತವಾಗಿ ವಿಫಲರಾಗುತ್ತಿದ್ದಾರೆ. ಕೊಡಗಿನ ಜನತೆ ತತ್ತರಿಸಿಹೋಗಿದ್ದು ಯಾರು ಕೂಡ ಧೈರ್ಯವಾಗಿ ಓಡಾಟ ನಡೆಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರಾಣಭಯದೊಂದಿಗೆ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆರೇಳು ವರ್ಷಗಳ ಹಿಂದೆ ಸಿ.ಪಿ.ಐ ಮತ್ತು ಕಾರ್ಮಿಕ ಸಂಘಟನೆಗಳಿAದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಕಾಡಾನೆ ಹಾವಳಿ ತಡೆಗಟ್ಟಲು ಪರ್ಯಾಯವಾಗಿ ಆಹಾರ, ನೀರಿನ ವ್ಯವಸ್ಥೆ ಮಾಡುವಂತೆ ಒತ್ತಾಯಿಸಿ ೬ ದಿನಗಳ ಕಾಲ ಧರಣಿ ಸತ್ಯಾಗ್ರಹ ಮಾಡಿದ್ದ ಸಂದರ್ಭ ಅರಣ್ಯಾಧಿಕಾರಿಗಳು ಬಂದು ಕಾರ್ಯಾಚರಣೆ ಮಾಡುವುದಾಗಿ ಮತ್ತು ರೈಲು ಹಳಿಗಳನ್ನು ತಂದು ಬೇಲಿ ನಿರ್ಮಾಣ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ ಇದುವರೆಗೂ ಆ ಭರವಸೆ ಈಡೇರಿಲ್ಲ.
ಸಿಪಿಐನ ಸಹ ಕಾರ್ಯದರ್ಶಿ ರಫೀಕ್ ನವಲಗುಂದ ಮಾತನಾಡಿ, ಕೊಡಗಿನಲ್ಲಿ ರೈತರು ತೀವ್ರತರದಲ್ಲಿ ಸಂಕಷ್ಟ ಎದುರಿಸುತ್ತಿರುವಾಗ ಬಿಜೆಪಿ ಸರಕಾರ ರೈತರ ಅನ್ನವನ್ನೇ ಕಸಿದುಕೊಳ್ಳುತ್ತಿದೆ. ೭ ಕೆಜಿ ಇದ್ದ ಅಕ್ಕಿಯನ್ನು ೫ ಕೆಜಿಗೆ ಕಡಿತಗೊಳಿಸಿ ಶಾಸಕರಿಗೆ ಐಷಾರಾಮಿ ಕಾರು ಖರೀದಿಸಲು ಹೊರಟಿರುವುದು ಸರಿಯೇ ಎಂದು ಪ್ರಶ್ನಿಸಿದರು.