ಗೋಣಿಕೊಪ್ಪ ವರದಿ, ಫೆ. ೨೮: ಮಾಯಮುಡಿ ಗ್ರಾಮದ ಕಂಗಳತ್ತ್ ನಾಡು ಕಮಟೆ ಮಹಾದೇವರ ವಾರ್ಷಿಕ ಹಬ್ಬಕ್ಕೆ ತೆರೆ ಎಳೆಯ ಲಾಯಿತು. ಸಾವಿರಾರು ಭಕ್ತರು ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು. ಮಧ್ಯಾಹ್ನ ಮಹಾಪೂಜೆ ನಡೆಯಿತು. ಸಾಯಂಕಾಲ ದೇವರ ದರ್ಶನ, ಅಭ್ಯಂಜನ ಸ್ನಾನ ಮತ್ತು ಉತ್ಸವ ಮೂರ್ತಿ ಹೊತ್ತು ನೃತ್ಯ, ವಸಂತ ಪೂಜೆ, ವಿಷ್ಣುಮೂರ್ತಿ ಮತ್ತು ಗುಳಿಗನಿಗೆ ಪೂಜೆ ನೆರವೇರಿತು. ಭಕ್ತರು ಮಹಾಪೂಜೆ ನಡೆಯಿತು. ಸಾಯಂಕಾಲ ದೇವರ ದರ್ಶನ, ಅಭ್ಯಂಜನ ಸ್ನಾನ ಮತ್ತು ಉತ್ಸವ ಮೂರ್ತಿ ಹೊತ್ತು ನೃತ್ಯ, ವಸಂತ ಪೂಜೆ, ವಿಷ್ಣುಮೂರ್ತಿ ಮತ್ತು ಗುಳಿಗನಿಗೆ ಪೂಜೆ ನೆರವೇರಿತು. ಭಕ್ತರು ಅನ್ನದಾನ ಸ್ವೀಕರಿಸಿದರು. ಕಂಗಳತ್ತ್ನಾಡಿಗೆ ಒಳಪಡುವ ಭಕ್ತರು ಹೆಚ್ಚಾಗಿ ಕಂಡು ಬಂದರು. ಉಳಿದಂತೆ ವಿವಿಧ ಗ್ರಾಮದ ಭಕ್ತರು ಕೂಡ ಪಾಲ್ಗೊಂಡಿದ್ದರು. ತಾ. ೨೨ ರಂದು ಕೊಡಿಮರ ನಿಲ್ಲಿಸುವ ಆಚರಣೆ ಮೂಲಕ ಹಬ್ಬಕ್ಕೆ ಚಾಲನೆ ನೀಡಲಾಗಿತ್ತು. ನಂತರ ೫ ದಿನಗಳ ಕಾಲ ವಿವಿಧ ಪೂಜಾ ಕೈಂಕರ್ಯಗಳು ನೆರವೇರಿದವು. ಗಣಪತಿಗೆ ಪಂಚಕಜ್ಜಾಯ, ಈಶ್ವರನಿಗೆ ಬಿಲ್ವ ಪತ್ರಾರ್ಚನೆ, ಕ್ಷೀರಾಭಿಷೇಕ, ಸುಬ್ರಹ್ಮಣ್ಯನಿಗೆ ಕ್ಷೀರಾಭಿಷೇಕ, ಈಶ್ವರನಿಗೆ ಅಲಂಕಾರ ಪೂಜೆ ನಡೆಯಿತು.