ಮಡಿಕೇರಿ, ಫೆ. ೨೮: ಎಸ್. ಕಟ್ಟೆಮಾಡುವಿನ ಶ್ರೀ ಭದ್ರಕಾಳಿ ದೇವಾಲಯದ ಉತ್ಸವ ತಾ. ೨೮ ರಿಂದ ಮಾ. ೬ ರವರೆಗೆ ನಡೆಯಲಿದೆ. ಈ ಪ್ರಯುಕ್ತ ಮಾ. ೨ ರಂದು ಚಿತ್ತ (ಪಟ್ಟಣಿ), ಮಧ್ಯಾಹ್ನ ೩.೦೦ ಗಂಟೆಗೆ ಎತ್ತ್ ಪೋರಾಟ, ರಾತ್ರಿ ೯ ಗಂಟೆಗೆ ಅಂದಿಬೊಳಕ್, ರಾತ್ರಿ ೯.೩೦ ಗಂಟೆಗೆ ದೇವರ ಪೂಜೆ, ರಾತ್ರಿ ೧೦.೩೦ ಗಂಟೆಗೆ ಪೀಲಿ ನೃತ್ಯ, ಬೆಳಿಗ್ಗೆ ೨ ಗಂಟೆಗೆ ದೇವಾಲಯದಲ್ಲಿ ಮೂರು ತೆರೆಗಳ ನೃತ್ಯ, ಬೆಳಿಗ್ಗೆ ೩ ಗಂಟೆಗೆ ಬನದಲ್ಲಿ ತೆರೆಗಳ ನೃತ್ಯ ಜರುಗಲಿದೆ.
ತಾ. ೫ ರಂದು (ದೊಡ್ಡ ಹಬ್ಬ ಕೆಂಗಣ್ ಪಟ್ಟಣಿ), ಬೆಳಿಗ್ಗೆ ೧೦ ಗಂಟೆಗೆ ಮಹಾಪೂಜೆ, ಬೆಳಿಗ್ಗೆ ೧೦.೩೦ ಗಂಟೆಗೆ ದೇವರು ಬನಕ್ಕೆ ಹೋಗುವುದು, ಮಧ್ಯಾಹ್ನ ೨.೧೫ ಗಂಟೆಗೆ ಬನದಲ್ಲಿ ಬಿಲ್ವಪತ್ರೆ ಅರ್ಚನೆ, ೩.೩೦ ಗಂಟೆಗೆ ದೇವರು ಬನದಿಂದ ನದಿಗೆ ಜಳಕಕ್ಕೆ ಬರುವುದು, ಸಂಜೆ ೪ ಗಂಟೆಗೆ ದೇವರ ಜಳಕ ಮತ್ತು ಅಲಂಕಾರ, ೪.೩೦ ಗಂಟೆಗೆ ದೇವಸ್ಥಾನದ ಸುತ್ತ ದೇವರ ನೃತ್ಯ, ರಾತ್ರಿ ೮.೩೦ ಗಂಟೆಗೆ ದೇವರ ಶುದ್ಧ ಕಲಶ ಮತ್ತು ವಿಶೇಷ ಪೂಜೆ ನಡೆಯಲಿದೆ ಎಂದು ದೇವಾಲಯ ಸಮಿತಿ ಅಧ್ಯಕ್ಷ ನಂದೇಟಿರ ರವಿ ಸುಬ್ಬಯ್ಯ ಹಾಗೂ ಆಡಳಿತ ಮಂಡಳಿಯವರು ತಿಳಿಸಿದ್ದಾರೆ.