ವೀರಾಜಪೇಟೆ, ಫೆ. ೨೮: ನಮ್ಮಲ್ಲಿ ಒಗ್ಗಟ್ಟು ಹಾಗೂ ಧ್ಯೆರ್ಯ ಇಲ್ಲದಿರುವುದೇ ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ಹೆಚ್ಚಾಗಲು ಕಾರಣ ಎಂದು ಲಾಲ ರಜಪೂತ ರಾಯ್ ಪ್ರಶಸ್ತಿ ವಿಜೇತ ನ್ಯಾಷನಲ್ ಕರಪ್ಷನ್ ಕಂಟ್ರೋಲ್ ಅಂಡ್ ಹ್ಯೂಮನ್ ವೆಲ್ಫೇರ್ ಆರ್ಗನೈಸೇಷನ್ ರಾಜ್ಯಾಧ್ಯಕ್ಷ ನಿವೃತ ಕಮಾಂಡೊ ಡಾ. ಕುಪ್ಪಣಮಾಡ ವಸಂತ್ ಹೇಳಿದರು.

ವೀರಾಜಪೇಟೆ ಜಯಪ್ರಕಾಶ್ ನಾರಾಯಣ್ ಶಾಲಾ ಸಭಾಂಗಣದಲ್ಲಿ ಮಹಿಳೆಯರಿಗಾಗಿ ಆಯೊಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ನಮ್ಮ ಸಂಸ್ಥೆ ಅಧಿಕೃತವಾಗಿ ರಾಷ್ಟಿçÃಯ ಮಟ್ಟದಲ್ಲಿ ಅಂಗಿಕೃತವಾಗಿದೆ. ಪಂಜಾಬ್‌ನ ಚಂಡಿಗಡ್‌ನಲ್ಲಿ ಮುಖ್ಯ ಕಚೇರಿಯನ್ನು ಹೊಂದಿದೆ. ಸಂಸ್ಥೆಯ ಮುಖ್ಯ ಉದ್ದೇಶ ಭ್ರಷ್ಟಾಚಾರ ನಿರ್ಮೂಲನೆ ಮತ್ತು ಸಮಾಜಘಾತುಕ ಶಕ್ತಿಗಳಿಂದ ಮಹಿಳೆಯರು ಅನುಭವಿಸುತ್ತಿರುವ ತೊಂದರೆಗಳು ಮತ್ತು ದುರಂತ ಎದುರಾದಾಗ ಮಹಿಳೆಯರು ಯಾವ ರೀತಿ ತಮ್ಮನ್ನು ರಕ್ಷಸಿಕೊಳ್ಳಬೇಕು ಎಂಬದರ ಬಗ್ಗೆ ಅರಿವು ಮೂಡಿಸುವುದು ಉದ್ದೇಶವಾಗಿದೆ.

ಅಲ್ಲದೆ ಪ್ರಧಾನಿ ಮೋದಿ ಅವರ ಸ್ವಚ್ಛಭಾರತ್ ಮಿಷನ್ ಅಡಿಯಲ್ಲೂ ಕಾರ್ಯನಿರ್ವಹಿಸಲಾಗುವುದು. ಇತ್ತೀಚಿನ ದಿನಗಳಲ್ಲಿ ಎಲ್ಲಾ ವರ್ಗದ ಜನರು ರಕ್ತದ ಒತ್ತಡ, ಸಕ್ಕರೆ ಕಾಯಿಲೆ, ಮಂಡಿ ನೋವು ಉದರ ಬೇದನೆ, ಹೃದಯ ಸಂಬAಧಿ ಕಾಯಿಲೆಗಳಿಂದ ನರಳುತ್ತಿದ್ದಾರೆ. ಕರಾಟೆ ಹಾಗೂ ನಿಯಮಿತ ವ್ಯಾಯಾಮ ಮಾಡುವುದರಿಂದ ಅದನ್ನು ತಡೆಗಟ್ಟಬಹುದು ಎಂದು ಹೇಳಿದರು. ವೀರಾಜಪೇಟೆ ತಾಲೂಕಿನ ಅಧ್ಯಕ್ಷೆಯಾಗಿ ಕಾಳಿಮಾಡ ದೀಪಾ ಕಿಶನ್, ಕಾರ್ಯದರ್ಶಿಯಾಗಿ ಕರಾಟೆ ಪಟು ಕರ್ನಂಡ ಸೋಮಣ್ಣ ಅವರನ್ನು ನೇಮಿಸಲಾಗಿದೆ. ಪ್ರತಿ ಭಾನುವಾರ ಅವರು ಮಹಿಳೆಯರಿಗೆ ತಮ್ಮನ್ನು ಹೇಗೆ ರಕ್ಷಸಿಕೊಳ್ಳಬೇಕು ಎಂಬದರ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ನಡೆಸುತ್ತಾರೆ ಎಂದು ಹೇಳೀದರು.

ನಿವೃತ ಮುಖ್ಯ ಶಿಕ್ಷಕಿ ಕರ್ನಂಡ ಬೊಳ್ಳಮ್ಮ ಮಾತನಾಡಿ ಮನಸ್ಸು ಸ್ವಚ್ಚವಾಗಿದ್ದರೆ ದೇಹದ ಆರೋಗ್ಯ ಸರಿ ಇರುತ್ತದೆ. ದೇಶದ ಪ್ರಧಾನಿ ಪೊರಕೆ ಹಿಡಿದು ಪರಿಸರವನ್ನು ಸ್ವಚ್ಛ ಮಾಡುವಾಗ ನಾವುಗಳು ಏಕೆ ನಮ್ಮ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಲು ಸಾಧ್ಯವಿಲ್ಲ. ರಸ್ತೆ ಬದಿಯಲ್ಲಿ ಪ್ಲಾಸ್ಟಿಕ್ ಬಾಟಲ್‌ಗಳು ಸೇರಿದಂತೆ ಇನ್ನಿತರ ವಸ್ತಗಳನ್ನು ಹಾಕುವುದು ಕಂಡರೆ ಅಂತವರ ವಿರುದ್ದ ಸಂಘ ಸಂಸ್ಥಗಳಿಗೆ ದೂರು ನೀಡಬೇಕು. ಸ್ವಂತಿಗೆ ಇದ್ದರೆ ನಿಸ್ವಾರ್ಥ ಭಾವನೆಯಿಂದ ಸ್ವಚ್ಛತಾ ಕಾರ್ಯ ಮಾಡಬಹುದು ಎಂದು ಹೇಳಿದರು.

ಕುಕ್ಲೂರು ಶ್ರೀಮತಿ ಸ್ವಸಹಾಯ ಸಂಘದ ಅಧ್ಯಕ್ಷೆ ಕುಟ್ಟಂಡ ನಳಿನಿ ಪ್ರಭು ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ನ್ಯಾಷನಲ್ ಕರಪ್ಷನ್ ಕಂಟ್ರೋಲ್ ಅಂಡ್ ಹ್ಯೂಮನ್ ವೆಲ್ಫೇರ್ ಆರ್ಗನೈಸೇಷನ್ ತಾಲೂಕು ಅಧ್ಯಕ್ಷೆ ಕಾಳಿಮಾಡ ದೀಪಾ ಕಿಶನ್, ಕಾರ್ಯದರ್ಶಿ ಕರಾಟೆ ಪಟು ಕರ್ನಂಡ ಸೋಮಣ್ಣ ಉಪಸ್ಥಿತರಿದ್ದರು.