ನ್ಯಾಯಾಂಗ ಇಲಾಖೆಯ ವಿಜೇತರ ವಿವರ
ಮಡಿಕೇರಿ, ಫೆ. ೨೫: ತಾ. ೧೯ ಮತ್ತು ೨೦ ರಂದು ಮಡಿಕೇರಿಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ರಾಜ್ಯ ಸರಕಾರಿ ನೌಕರರ ಕ್ರೀಡಾಕೂಟದಲ್ಲಿ ಭಾಗವಹಿಸಿ ಸ್ಪರ್ಧೆಗಳಲ್ಲಿ ವಿಜೇತರಾದ ನ್ಯಾಯಾಂಗ ಇಲಾಖೆಯ ನೌಕರರ ವಿವರ ಇಂತಿದೆ.
ಕೇರA ಡಬಲ್ಸ್ನಲ್ಲಿ ಎಸ್.ಟಿ. ಶಮ್ಮಿ ಮತ್ತು ಜಿ.ಪಿ. ವಾಸುದೇವ ದ್ವಿತೀಯ ಸ್ಥಾನ, ಕಬಡ್ಡಿಯಲ್ಲಿ ಬಸವರಾಜ್ ಮತ್ತು ತಂಡ ಪ್ರಥಮ ಸ್ಥಾನ, ೧೦೦ ಮೀ. ಓಟದಲ್ಲಿ (೪೦ ವರ್ಷ ವಯೋಮಾನ) ಹರೀಶ್ ಡಿ. ಪಟಗಾರ್ ದ್ವಿತೀಯ ಸ್ಥಾನ, ೨೦೦ ಮೀ. ಓಟದಲ್ಲಿ ಹರೀಶ್ ಡಿ. ಪಟಗಾರ್ ಪ್ರಥಮ ಸ್ಥಾನ, ೮೦೦ ಮೀ. ಓಟ ರಾಧಾಕೃಷ್ಣ ಪ್ರಥಮ ಸ್ಥಾನ, ೧೫೦೦ ಮೀ. ಓಟ ರಾಧಾಕೃಷ್ಣ ಪ್ರಥಮ ಸ್ಥಾನ, ೪x೪೦೦ ಮೀ. ರಿಲೇಯಲ್ಲಿ ರಾಧಾಕೃಷ್ಣ ಮತ್ತು ತಂಡ ಪ್ರಥಮ ಸ್ಥಾನ, ೪x೧೦೦ ಮೀ. ರಿಲೇಯಲ್ಲಿ ಬಸವರಾಜ್ ಮತ್ತು ತಂಡ ತೃತೀಯ ಸ್ಥಾನ, ಉದ್ದ ಜಿಗಿತದಲ್ಲಿ ಕೆ.ಎಂ. ಪ್ರಶಾಂತ್ ಪ್ರಥಮ, ೧೦೦ ಮೀ. ಓಟ (೫೦-೬೦ ವರ್ಷ) ಬೋಪಯ್ಯ ದ್ವಿತೀಯ ಹಾಗೂ ಲವಕುಮಾರ್ ತೃತೀಯ ಸ್ಥಾನ, ೨೦೦ ಮೀ. ಓಟದಲ್ಲಿ ಲವಕುಮಾರ್ ಪ್ರಥಮ ಹಾಗೂ ಜಿ.ಪಿ. ವಾಸುದೇವ ದ್ವಿತೀಯ ಸ್ಥಾನ, ೪೦೦ ಮೀ. ಓಟದಲ್ಲಿ ಜಿ.ಪಿ. ವಾಸುದೇವ ತೃತೀಯ ಸ್ಥಾನ. ಉದ್ದ ಜಿಗಿತ(೫೦-೬೦)ದಲ್ಲಿ ಬೋಪಯ್ಯ, ಪ್ರಥಮ ಸ್ಥಾನ, ನಾಗೇಶ್ ದ್ವಿತೀಯ ಸ್ಥಾನ ಪಡೆದುಕೊಂಡರು.
ಮಹಿಳೆಯರ ವಿಭಾಗದಲ್ಲಿ ಕೇರಂ ಡಬಲ್ಸ್ನಲ್ಲಿ ನಾಗರತ್ನ ಕೆ.ಆರ್. ಮತ್ತು ತಂಡ ಪ್ರಥಮ ಸ್ಥಾನ, ಭಾರದ ಗುಂಡು ಎಸೆತದಲ್ಲಿ ನಾಗರತ್ನ ಕೆ.ಆರ್. ತೃತೀಯ ಸ್ಥಾನ, ೧೦೦ ಮೀ. ಓಟ (೩೫-೪೫ ವರ್ಷ) ಜ್ಯೋತಿ ಪ್ರಥಮ ಸ್ಥಾನ, ೮೦೦ ಮೀ. ಓಟ ಜ್ಯೋತಿ ಪ್ರಥಮ ಸ್ಥಾನ, ೪೦೦ ಮೀ. ಓಟದಲ್ಲಿ ಗೀತಾ ದ್ವಿತೀಯ ಸ್ಥಾನ, ಲಕ್ಷಿö್ಮ ಬಿಜಕಲ್ ತೃತೀಯ ಸ್ಥಾನ, ೪x೪೦೦ ಮೀ. ರಿಲೇಯಲ್ಲಿ ಗೀತಾ ಮತ್ತು ತಂಡ ದ್ವಿತೀಯ ಸ್ಥಾನ, ಎತ್ತರ ಜಿಗಿತದಲ್ಲಿ ಲಕ್ಷಿö್ಮ ಬಿಜಕಲ್ ದ್ವಿತೀಯ ಸ್ಥಾನ, ಡಿಸ್ಕಸ್ ತ್ರೋದಲ್ಲಿ ಲಕ್ಷಿö್ಮ ಬಿಜಕಲ್ ದ್ವಿತೀಯ ಸ್ಥಾನ, ಕರಕುಶಲ ವಸ್ತು ಪ್ರದರ್ಶನ ಸ್ವರ್ಣಗೌರಿ ತೃತೀಯ ಸ್ಥಾನ ಪಡೆದುಕೊಂಡರು.
ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದ ಹಾಗೂ ಬಾಸ್ಕೆಟ್ಬಾಲ್, ಹಾಕಿ ಹಾಗೂ ಕ್ರಿಕೆಟ್ನಲ್ಲಿ ಆಯ್ಕೆಯಾದ ಪ್ರದೀಪ್, ನಾಗೇಶ್ ಮತ್ತು ಲವಕುಮಾರ್ ಹಾಗೂ ಬಸವರಾಜು ಕೋನರೆಡ್ಡಿ ಮುಂದಿನ ತಿಂಗಳು ನಡೆಯುವ ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ ಎಂದು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ, ಕೊಡಗು ಜಿಲ್ಲೆಯ ಗೌರವ ಅಧ್ಯಕ್ಷ ಎಸ್.ಟಿ. ಶಮ್ಮಿ, ಸಂಘಟನಾ ಕಾರ್ಯದರ್ಶಿ ನಾಗೇಶ್ ಟಿ.ಎಸ್. ಹಾಗೂ ಸೋಮವಾರಪೇಟೆ ತಾಲೂಕು ಅಧ್ಯಕ್ಷ ಪ್ರದೀಪ್ ಅವರು ತಿಳಿಸಿದ್ದಾರೆ.