ಮಡಿಕೇರಿ, ಫೆ. ೨೫: ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ನೆರವಿನಿಂದ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗ ದೊಂದಿಗೆ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ವತಿಯಿಂದ ಮಾರ್ಚ್ ೪ ರಂದು ಜಿಲ್ಲೆಯ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಜಿಲ್ಲಾಮಟ್ಟದ ವಿಜ್ಞಾನ ರಸಪ್ರಶ್ನೆ ಸ್ಪರ್ಧಾ ಕಾರ್ಯಕ್ರಮವನ್ನು ಮಡಿಕೇರಿ ನಗರದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಬೆಳಿಗ್ಗೆ ೧೦ ಗಂಟೆಗೆ ಏರ್ಪಡಿಸಲಾಗಿದೆ. ಅಂದಿನ ಸ್ಪರ್ಧೆಯಲ್ಲಿ ಮೊದಲು ಲಿಖಿತ ಪರೀಕ್ಷೆ ನಂತರ ಮೌಖಿಕ ಪರೀಕ್ಷೆ ನಡೆಸಲಾಗುವುದು. ಈ ಹಿಂದೆ ಫೆ. ೨೭ ರಂದು ನಿಗದಿಯಾಗಿದ್ದ ಈ ಸ್ಪರ್ಧೆಯನ್ನು ಮಾರ್ಚ್ ೪ಕ್ಕೆ ಮುಂದೂಡಲಾಗಿದೆ.
ಬಹುಮಾನ: ಸ್ಪರ್ಧೆಯಲ್ಲಿ ವಿಜೇತಗೊಂಡ ಮೊದಲ ಎರಡು ತಂಡಗಳಿಗೆ ಕ್ರಮವಾಗಿ ರೂ. ೩,೦೦೦ ಹಾಗೂ ರೂ. ೨,೦೦೦ ನಗದು ಬಹುಮಾನ ಹಾಗೂ ಪ್ರಶಸ್ತಿಪತ್ರ ನೀಡಿ ಗೌರವಿಸಲಾಗುವುದು ಎಂದು ಸ್ಪರ್ಧಾ ಕಾರ್ಯಕ್ರಮದ ಜಿಲ್ಲಾ ಸಂಯೋಜಕ ಸಿ.ಎಸ್. ಸುರೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿಲ್ಲಾಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ತಂಡವು ನಂತರ ಬೆಂಗಳೂರಿನಲ್ಲಿ ಚಂದನ ವಾಹಿನಿಯಲ್ಲಿ "ಥಟ್ ಅಂತ ಹೇಳಿ" ರಾಜ್ಯಮಟ್ಟದ ವಿಜ್ಞಾನ ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ.
ಹೆಚ್ಚಿನ ಮಾಹಿತಿಗೆ ಸಿ.ಎಸ್. ಸುರೇಶ್, ಕ್ವಿಜ್ ಮಾಸ್ಟರ್, ಶಿಕ್ಷಕರು, ನೇತಾಜಿ ಪ್ರೌಢಶಾಲೆ, ಬಲ್ಲಮಾವಟಿ (ಮೊ. ೯೯೦೦೩೭೦೮೪೨) ಅವರನ್ನು ಸಂಪರ್ಕಿಸಲು ಪ್ರೌಢಶಾಲಾ ಮುಖ್ಯೋಪಾಧ್ಯಾಯರು / ಮಾರ್ಗದರ್ಶಿ ಶಿಕ್ಷಕರಿಗೆ ತಿಳಿಸಿದೆ.
ಸ್ಪರ್ಧೆ ದಿನದಂದು ತಮ್ಮ ಶಾಲಾ ಮಕ್ಕಳ ತಂಡದೊAದಿಗೆ ಮಾರ್ಗದರ್ಶಿ ಶಿಕ್ಷಕರು ಜತೆಯಲ್ಲಿ ಆಗಮಿಸಲು ತಿಳಿಸಿದೆ. ಮಾಹಿತಿಗಾಗಿ ಕಾರ್ಯಕ್ರಮ ಸಂಘಟಕರಾದ ಎಸ್.ಟಿ. ವೆಂಕಟೇಶ್ ನೋಡಲ್ ಅಧಿಕಾರಿ, ಡಿಡಿಪಿಐ ಕಚೇರಿ, ಮಡಿಕೇರಿ, ಮೊ. ೯೪೪೮೮೭೩೯೯೯) ಟಿ.ಜಿ. ಪ್ರೇಮಕುಮಾರ್, ಕಾರ್ಯದರ್ಶಿ, ಕ.ರಾ.ವಿ.ಪ. ಕೊಡಗು ಜಿಲ್ಲೆ (ಮೊ. ೯೪೪೮೫೮೮೩೫೨) ಅವರನ್ನು ಸಂಪರ್ಕಿಸಲು ತಿಳಿಸಿದೆ.
ಒಂದು ಶಾಲೆಯಿಂದ ೯ ಮತ್ತು ೧೦ನೇ ತರಗತಿಯಿಂದ ಇಬ್ಬರು ವಿದ್ಯಾರ್ಥಿಗಳನ್ನೊಳಗೊಂಡ ಒಂದು ತಂಡ ಮಾತ್ರ ಭಾಗವಹಿಸಬಹುದು.