ಸೋಮವಾರಪೇಟೆ,ಫೆ.೨೫: ತಾಲೂಕಿನ ಕುಂಬೂರು ಸರ್ಕಾರಿ ಪ್ರಾಥಮಿಕ ಶಾಲೆಯ ವಿಶೇಷ ಚೇತನ ವಿದ್ಯಾರ್ಥಿಯೋರ್ವನಿಗೆ ಪೊಲೀಸ್ ಸಿಬ್ಬಂದಿ ವೀಲ್ ಚೇರ್ ನೀಡುವ ಮೂಲಕ ಸಮಾಜಕ್ಕೆ ಮಾದರಿ ಯಾಗಿದ್ದಾರೆ.
ಶಾಲೆಯ ವಿದ್ಯಾರ್ಥಿ ಕೆ.ಎಸ್. ಭಾರದ್ವಾಜ್‌ಗೆ ಮಾದಾಪುರ ಪೊಲೀಸ್ ಉಪ ಠಾಣೆಯ ಸಿಬ್ಬಂದಿ ಸಂತೋಷ್ (ಬಸವರಾಜ್) ಅವರು ಉಚಿತವಾಗಿ ವೀಲ್ ಚೇರ್ ನೀಡುವ ಮೂಲಕ ಬಾಲಕನಿಗೆ ನೆರವಾಗಿದ್ದಾರೆ.
ಈ ಸಂದರ್ಭ ಪೊಲೀಸ್ ಸಿಬ್ಬಂದಿ ಸಂತೋಷ್, ಗ್ರಾ.ಪಂ. ಸದಸ್ಯರಾದ ದಮಯಂತಿ, ಜರ್ಮಿ, ಶಿಕ್ಷಣ ಇಲಾಖೆಯ ಐಆರ್‌ಟಿಇ ರತ್ನಮ್ಮ, ಶಾಲಾ ಮುಖ್ಯೋಪಾಧ್ಯಾಯ ಎಂ.ಬಿ. ರಾಜಣ್ಣ ಸೇರಿದಂತೆ ಶಿಕ್ಷಕರು, ಶಾಲಾಭಿವೃದ್ಧಿ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.