ಗೋಣಿಕೊಪ್ಪಲು, ಫೆ. ೨೫: ವಾಣಿಜ್ಯ ಕೇಂದ್ರ ಗೋಣಿಕೊಪ್ಪಲುವಿನಲ್ಲಿ ಸಂಗ್ರಹವಾಗುವ ಕಸಗಳನ್ನು ರಾತ್ರೋರಾತ್ರಿ ಸಮೀಪದ ಕೀರೆಹೊಳೆಯಲ್ಲಿ ಸುರಿಯುತ್ತಿರುವುದನ್ನು ಸಾರ್ವಜನಿಕರು ಆಕ್ಷೇಪಿಸಿದ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ನಿರ್ದೇಶನದ ಮೇರೆ, ತಾಲೂಕು ಪಂಚಾಯಿತಿ ಇಒ ಕೊಣಿಯಂಡ ಅಪ್ಪಣ್ಣ ಪಂಚಾಯಿತಿಗೆ ಆಗಮಿಸಿ ನಂತರ ಅಲ್ಲಿನ ಪೌರಕಾರ್ಮಿಕರ ಮೂಲಕ ಕೀರೆ ಹೊಳೆಯಲ್ಲಿ ಸುರಿಯಲಾಗಿದ್ದ ಕಸವನ್ನು ತೆಗೆಸಿದ್ದಾರೆ. ಹೊಳೆಯ ನೂರು ಮೀಟರ್ ಉದ್ದಕ್ಕೂ ಸುರಿದಿದ್ದ ಕಸದ ರಾಶಿಯಿಂದ ನೀರಿನ ಹರಿವು ಕಡಿಮೆ ಆಗಿತ್ತು.
ಪಂಚಾಯಿತಿಯ ಕೆಲ ಗುತ್ತಿಗೆ ನೌಕರರು ರಾತ್ರಿ ಯಾರಿಗೂ ತಿಳಿಯದಂತೆ ಟ್ರಾö್ಯಕ್ಟರ್ ಹಾಗೂ ಮಿನಿ ಲಾರಿಯಲ್ಲಿ ತಂದು ಸುರಿದು ಹೋಗುತ್ತಿದ್ದಾರೆ ಎಂದು ನಾಗರಿಕರು ಆರೋಪಿಸಿದ್ದಾರೆ.