ಮಡಿಕೇರಿ, ಫೆ. ೨೪: ನಗರದ ಕೋಟೆ ಮಾರಿಯಮ್ಮ ದೇವಾಲಯದ ಪ್ರತಿಷ್ಠಾಪನಾ ವಾರ್ಷಿಕೋತ್ಸವ ಮಾರ್ಚ್ ೨೪ ರಂದು ನಡೆಯಲಿದೆ. ಬೆಳಿಗ್ಗೆ ೬ ಗಂಟೆಯಿAದ ಮಹಾಗಣಪತಿ ಹೋಮ, ನವಕ ಪಂಚಗವ್ಯ ಕಲಶ ಪೂಜೆ ಹಾಗೂ ಕಲಶಾಭಿಷೇಕ, ಸರ್ವಾಲಂಕಾರ ಮಹಾ ಪೂಜೆ, ಪಾಷಾಣಮೂರ್ತಿ ದೈವದ ಕಲಶ ಪೂಜೆ, ಅಲಂಕಾರ ಪೂಜೆ ಹಾಗೂ ಮಂಗಳಾರತಿ ನಡೆಯಲಿದೆ. ಬೆಳಿಗ್ಗೆ ೮ ಗಂಟೆಯಿAದ ಆಶ್ಲೇಷ ಬಲಿ, ನಾಗಪೂಜೆ, ಕ್ಷೀರಾಭಿಷೇಕ, ನಾಗದರ್ಶನ, ಮಹಾಪೂಜೆ, ಪ್ರಸಾದ ವಿತರಣೆ, ಮಧ್ಯಾಹ್ನ ೧೨.೩೦ಕ್ಕೆ ಅನ್ನಸಂತರ್ಪಣೆ, ಸಂಜೆ ೭.೩೦ ರಿಂದ ಪಾಷಾಣಮೂರ್ತಿ ದೈವ ಕೋಲ ನಡೆಯಲಿದೆ.

ಮಾರ್ಚ್ ೨೩ ರಂದು ಪಯ್ಯನ್ನೂರ್ ಆಚಾರ್ಯ ಈಶ್ವರನ್ ನಂಬೂದರಿ ಅವರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಗಳು ನಡೆಯಲಿದೆ ಎಂದು ಆಡಳಿತ ಮಂಡಳಿಯ ಪ್ರಕಟಣೆ ತಿಳಿಸಿದೆ. ನಿನ್ನೆಯ ಸಂಚಿಕೆಯಲ್ಲಿ ಕಣ್ತಪ್ಪಿನಿಂದ ಫೆಬ್ರವರಿ ೨೪ ರಂದು ವಾರ್ಷಿಕೋತ್ಸವ ನಡೆಯಲಿದೆ ಎಂದು ಪ್ರಕಟವಾಗಿತ್ತು.