ಸುಂಟಿಕೊಪ್ಪ, ಫೆ. ೨೪: ೭ನೇ ಹೊಸಕೋಟೆ, ಕಲ್ಲುಕೋರೆ ಶ್ರೀ ಭದ್ರಕಾಳಿ ದೇವಿಯ ೪೪ನೇ ವಾರ್ಷಿಕೋತ್ಸವದ ಅಂಗವಾಗಿ ವಿವಿಧ ಪೂಜಾ ಕೈಂಕರ್ಯಗಳನ್ನು ನಡೆಸಲಾಯಿತು.

ಚಾಮುಂಡಿ ಸಂಘ ಕೊಡಗರಹಳ್ಳಿ ಚಂಡೆ ಮೇಳದೊಂದಿಗೆ ಬೆಳಗಿನ ಜಾವ ಗಣಪತಿ ಹೋಮ, ನಾಗದೇವರಿಗೆ ಪೂಜೆ, ಪರಿವಾರ ದೇವರಿಗೆ ಪೂಜೆಯನ್ನು ಕೊಡಗರಹಳ್ಳಿಯ ಪ್ರಭಾಕರ ಭಟ್ ಹಾಗೂ ಪ್ರಜ್ವಲ್‌ಭಟ್ ನೆರವೇರಿಸಿದರು.

ಪೂಜಾ ವಿಧಾನವನ್ನು ಮುಳ್ಳೂರು ಶಿವದಾಸ್ ವೆಳಚ್ಚಪಾಡ್ ನೆರವೇರಿಸಿದರು. ಮಂಗಳಾರತಿಯೊAದಿಗೆ ಪ್ರಸಾದ ವಿನಿಯೋಗ, ಅನ್ನ ಸಂತರ್ಪಣೆ ನಡೆಯಿತು.

ಈ ಸಂದರ್ಭದಲ್ಲಿ ಭದ್ರಕಾಳಿ ದೇವಿಯ ದೇವಸ್ಥಾನ ಸಮಿತಿಯ ಅಧ್ಯಕ್ಷ ಮುರುಗೇಶ್, ಕಾರ್ಯದರ್ಶಿ ಸಂತೋಷ್, ಅರ್ಚಕ ವಿಜಯ ಹಾಗೂ ಸಮಿತಿಯ ಪದಾಧಿಕಾರಿಗಳು ಇದ್ದರು.