
ಶ್ರೀಮಂಗಲ, ಫೆ. ೨೪: ಶ್ರೀಮಂಗಲ ಹೋಬಳಿಯಲ್ಲಿ ಎರಡು ಜೀವಗಳನ್ನು ಬಲಿ ಪಡೆದ ನಂತರ ಎಚ್ಚೆತ್ತುಕೊಂಡು ಹುಲಿ ಸೆರೆಗೆ ಕಾರ್ಯಾಚರಣೆಗೆ ಇಳಿದಿರುವ ಅರಣ್ಯ ಇಲಾಖೆಯ ಅಧಿಕಾರಿಗಳು ಟಿ.ಶೆಟ್ಟಿಗೇರಿ ಗ್ರಾಮದಲ್ಲಿ ತಾತ್ಕಾಲಿಕ ಶೆಡ್ನಲ್ಲಿ ಬೀಡುಬಿಟ್ಟಿದ್ದು, ಇವರೊಂದಿಗೆ ಕೊಡಗು ಬೆಳೆಗಾರ ಒಕ್ಕೂಟದ ಪದಾಧಿಕಾರಿಗಳು ಭೇಟಿ ಮಾಡಿ ಸಮಾಲೋಚನೆ ನಡೆಸಿದರು.ಹುಲಿಯಿಂದ ಕಾಫಿ ತೋಟದಲ್ಲಿ ಯಾವುದೇ ಕೆಲಸ ಮಾಡಲು ಬೆಳೆಗಾರರು ಮತ್ತು ಕಾರ್ಮಿಕರು ಆತಂಕ ಪಡುತ್ತಿದ್ದು, ಕೆಲಸ ಕಾರ್ಯಗಳು ಹಲವು ದಿನದಿಂದ ಸ್ಥಗಿತವಾಗಿದೆ. ಇದಲ್ಲದೆ, ಈ ವ್ಯಾಪ್ತಿಯಲ್ಲಿ ಕಡಿಮೆ ಮಳೆಯಾಗಿರುವುದರಿಂದ ಅನಿವಾರ್ಯವಾಗಿ ಸ್ಪಿçಂಕ್ಲರ್ ಕೆಲಸ ಮಾಡಬೇಕಾಗಿದೆ. ಹುಲಿಯನ್ನು ಆದಷ್ಟು ಕೂಡಲೇ ಸೆರೆ ಹಿಡಿಯಬೇಕು ಎಂದು ಒತ್ತಾಯಿಸಿದರು. ಹುಲಿಯ ಆತಂಕದಿAದ ಮತ್ತು ಜಾನುವಾರುಗಳನ್ನು ರಕ್ಷಿಸಿಕೊಳ್ಳಲು ಗ್ರಾಮಸ್ಥರು ಪಟಾಕಿ ಸಿಡಿಸುವುದು, ಟಾರ್ಚ್ ಲೈಟ್ಗಳನ್ನು ಬಿಡುವುದು ಸೇರಿದಂತೆ ಇತರ ಶಬ್ಧದ ಅಡಚಣೆಯಿಂದ ಸ್ಥಳಕ್ಕೆ ಹುಲಿ ಬಂದಿಲ್ಲ ಎಂದು ಅಧಿಕಾರಿಗಳು ಹೇಳಿದರು.ಹುಲಿಯನ್ನು ಸೆರೆ ಹಿಡಿಯಲು ಪ್ರಾಮುಖ್ಯತೆ ನೀಡಲಾಗುತ್ತಿದ್ದು ಹುಲಿ ಪ್ರತ್ಯಕ್ಷವಾದ ದ. ಕೊಡಗಿನ ಸ್ಥಳಗಳಿಗೂ ಇತರ ಅಧಿಕಾರಿ ಸಿಬ್ಬಂದಿಗಳು ತೆರಳಿ ಅಗತ್ಯ ಕ್ರಮಕೈಗೊಳ್ಳುತ್ತಿದ್ದಾರೆ ಎಂದು ಹೇಳಿದರು.
ಕಾರ್ಯಾಚರಣೆ ಮುಗಿಯು ವವರೆಗೆ ಸಂಜೆ ೬ ಗಂಟೆಯಿAದ ಮುಂಜಾನೆ ೬ ಗಂಟೆಯವರೆಗೆ ಸ್ಪಿçಂಕ್ಲರ್ ಕೆಲಸ, ಪಟಾಕಿ ಸಿಡಿಸುವುದು, ತೋಟದಲ್ಲಿ ಸುತ್ತಾಡುವುದು, ವಾಹನ ಸಂಚಾರ ಕೈಗೊಳ್ಳುವುದು ಸೇರಿದಂತೆ ಶಬ್ಧ ಮತ್ತು ಬೆಳಕು ಬರುವ ಯಾವುದೇ ಕೆಲಸ ಮಾಡದೆ ಹುಲಿ
(ಮೊದಲ ಪುಟದಿಂದ) ಸೆರೆ ಹಿಡಿಯಲು ಕಾಯುತ್ತಿರುವ ಜಾಗಕ್ಕೆ ಹುಲಿ ಬರಲು ಸಹಕಾರ ನೀಡುವಂತೆ ಅರಣ್ಯಾಧಿಕಾರಿಗಳು ಗ್ರಾಮಸ್ಥರಲ್ಲಿ ಮನವಿ ಮಾಡಿದ್ದಾರೆ.
ಕಾರ್ಯಾಚರಣೆ ಮುಗಿಯು ವವರೆಗೂ ಶಾಲಾ-ಕಾಲೇಜಿಗೆ ರಜೆ ವಿಸ್ತರಿಸಬೇಕು. ಇಲ್ಲವೇ ಸೂಕ್ತ ರಕ್ಷಣಾ ವ್ಯವಸ್ಥೆಯನ್ನು ಮಾಡುವಂತೆ ಒಕ್ಕೂಟದ ಪ್ರಮುಖರು ಒತ್ತಾಯಿಸಿದರು.
ಈ ಸಂದರ್ಭ ಒಕ್ಕೂಟದ ಸ್ಥಾಪಕ ಸದಸ್ಯ ಮಾಣೀರ ಮುತ್ತಪ್ಪ, ಪ್ರ.ಕಾರ್ಯದರ್ಶಿ ಅಣ್ಣೀರ ಹರೀಶ್ ಮಾದಪ್ಪ, ಜಂಟಿ ಕಾರ್ಯದರ್ಶಿ ಬಾಚಂಗಡ ದಾದ ದೇವಯ್ಯ, ಖಜಾಂಚಿ ಮಾಣೀರ ವಿಜಯ ನಂಜಪ್ಪ, ಶ್ರೀಮಂಗಲ ಹೋಬಳಿ ಬೆಳೆಗಾರ ಒಕ್ಕೂಟದ ಅಧ್ಯಕ್ಷ ಕಾಳಿಮಾಡ ತಮ್ಮುಮುತ್ತಣ್ಣ, ಟಿ.ಶೆಟ್ಟಿಗೇರಿ ಕೊಡವ ಸಮಾಜದ ಅಧ್ಯಕ್ಷ ಚೊಟ್ಟೆಯಂಡಮಾಡ ವಿಶ್ವನಾಥ್, ಕಾರ್ಯದರ್ಶಿ ಮನ್ನೇರ ರಮೇಶ್ ಮತ್ತು ಅರಣ್ಯಾಧಿಕಾರಿಯಾದ ಮಡಿಕೇರಿ ಡಿಎಫ್ಓ ಪ್ರಭಾಕರನ್, ಮಡಿಕೇರಿ ವನ್ಯ ಜೀವಿ ಡಿಎಫ್ಓ ಶಿವರಾಮ್ಬಾಬು, ಡಿಎಫ್ಓ ಚಕ್ರಪಾಣಿ, ಎಸಿಎಫ್ ಸತೀಶ್, ಎಸಿಎಫ್ ಗೋಪಾಲ್, ಶ್ರೀಮಂಗಲ ಆರ್ಎಫ್ಓ ವೀರೇಂದ್ರ, ಪೊನ್ನಂಪೇಟೆ ಆರ್ಎಫ್ಓ ರಾಜಪ್ಪ ಹಾಜರಿದ್ದರು.