ಕುಶಾಲನಗರ, ಫೆ, ೨೪: ಕಾವೇರಿ ನದಿ ಹೂಳೆತ್ತುವ ಕಾಮಗಾರಿ ಪುನರಾರಂಭಿಸುವAತೆ ಆಗ್ರಹಿಸಿ ಕುಶಾಲನಗರ ನದಿ ತಟದ ಬಡಾವಣೆಗಳ ಪ್ರವಾಹ ಸಂತ್ರಸ್ಥರು ನಾಡಕಚೇರಿ ಮುಂಭಾಗ ಮೌನ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಕಳೆದ ಬಾರಿ ಹೂಳೆತ್ತುವ ಕಾಮಗಾರಿ ಅರ್ಧಕ್ಕೆ ನಿಲ್ಲಿಸಿದ್ದು ಈ ಬಾರಿ ಮಳೆಗಾಲಕ್ಕೂ ಮುನ್ನ ಕಾಮಗಾರಿ ಪುನರಾರಂಭಿಸಬೇಕಾಗಿ ಮನವಿ ಪತ್ರದಲ್ಲಿ ಕೋರಿದ್ದಾರೆ.
ಕುಶಾಲನಗರ ಯೋಗಾನಂದ ಬಡಾವಣೆ ವ್ಯಾಪ್ತಿಯ ಪ್ರವಾಹ ಪೀಡಿತ ನಿವಾಸಿಗಳು ನಾಡಕಚೇರಿಗೆ ತೆರಳಿ ತಹಶೀಲ್ದಾರ್ ಪ್ರಕಾಶ್ ಅವರಿಗೆ ಮನವಿ ಸಲ್ಲಿಸಿ ಮಳೆಗಾಲ ಆರಂಭಕ್ಕೂ ಮುನ್ನ ಸ್ಥಗಿತಗೊಂಡಿರುವ ಹೂಳೆತ್ತುವ ಕಾಮಗಾರಿಗೆ ಚಾಲನೆ ನೀಡಬೇಕೆಂದು ಮನವಿ ಪತ್ರದಲ್ಲಿ ಕೋರಿದರು.
ಬಡಾವಣೆ ಪ್ರಮುಖರಾದ ವರದ, ಸುಧೀರ್ ಅವರ ನೇತೃತ್ವದಲ್ಲಿ ಮನವಿಯನ್ನು ಸಲ್ಲಿಸಿದ ಸಂತ್ರಸ್ಥರು ಕಾಮಗಾರಿ ಪ್ರಾರಂಭಿಸುವAತೆ ಫಲಕಗಳನ್ನು ಪ್ರದರ್ಶಿಸಿ ಮೌನ ಪ್ರತಿಭಟನೆ ಸಲ್ಲಿಸಿದರು.